ಕೋಟ: ಕೋಟಿ ಕೋಟಿ ಭಾರತೀಯರ ಕನಸಾದ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಸಾಕಾರ ಗೊಳ್ಳುವತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಜ. 22 ಸೋಮವಾರದಂದು ಊರಿನ ಸಮಾನಮನಸ್ಕ ಭಕ್ತರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ ಗಂಟೆ 9-00 ರಿಂದ ವಿವಿಧ ಭಜನಾ ತಂಡಗಳಿAದ ವಿಶೇಷ ಭಜನಾ ಸಂಕೀರ್ತನೆ ಸಂಪನ್ನ ಗೊಳ್ಳಲಿದೆ.
ವಿಶೇಷವಾಗಿ ಅಪರೂಪದಲ್ಲಿ ಅಪರೂಪ ಎಂಬAತೆ ತಿರುಪತಿಯಲ್ಲಿ ಪೂಜಿಸಲ್ಪಡುವ ಪ್ರಭು ಶ್ರೀ ರಾಮಚಂದ್ರ ಸೀತಾದೇವಿ ಲಕ್ಷ÷್ಮಣ ದೇವರು ಹಾಗೂ ಹನುಮಂತ ದೇವರುಗಳ ಮೂರ್ತಿಯು ಬೆಳಿಗ್ಗೆ 10:30 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿ , ದೇವಳದಲ್ಲಿ ವಿರಾಜಮಾನರಾಗಿ ತಿರುಪತಿಯ ಅರ್ಚಕರಿಂದ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಹಾಗೂ ಪೂಜಾ ವಿಧಿ ವಿಧಾನಗಳನ್ನು ಪೂರೈಸಿ 12:30 ಕ್ಕೆ ಗರಿಕೆಮಠ ಶ್ರೀ ಅರ್ಕಗಣಪತಿ ಸನ್ನಿಧಾನದಲ್ಲಿ ನೆಡೆಯುವ ಕಲ್ಯಾಣೋತ್ಸವಕ್ಕೆ ತೆರಳಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸದ್ಭಕ್ತ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಕ್ಷಾತ್ ಶ್ರೀ ರಾಮ ದೇವರನ್ನು ದರ್ಶನ ಮಾಡಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಅತ್ಯಂತ ಭಕ್ತಿ ಪೂರ್ವಕವಾಗಿ ಕೋರಿ ಕೊಳ್ಳುತ್ತಿದ್ದೇವೆ. ನಂತರ ರಾಮಭಜನೆ ಕಾರ್ಯಕ್ರಮ ಮುಂದುವರಿಯಲಿದೆ ಹಾಗೂ ಮಂಗಳಾರತಿಯ ನಂತರ ಮಹಾ ಅನ್ನಸಂತರ್ಪಣೆ ಜರಗಲಿದೆ.
ಈ ಪ್ರಯುಕ್ತ ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಬಿಡುಗಡೆಗೊಳಿಸಿದರು. ಕೋಟ ಗ್ರಾ.ಪಂ ಸದಸ್ಯೆ ವನೀತ ಶ್ರೀಧರ ಆಚಾರ್,ಶ್ರೀ ದೇಗುಲದ ಟ್ರಸ್ಟಿ ಅಶೋಕ್ ಶೆಟ್ಟಿ,ಸುಫಲ ಶೆಟ್ಟಿ,ಊರಿನ ಹಿರಿಯ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು. ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿತಿರುಪತಿಯಲ್ಲಿ ಪೂಜಿಸಲ್ಪಡುವ ಪ್ರಭು ಶ್ರೀ ರಾಮಚಂದ್ರ ಸೀತಾದೇವಿ ಲಕ್ಷ್ಮಣ, ಹನುಮಂತ ದೇವರುಗಳ ಮೂರ್ತಿಗೆ ವಿಶೇಷ ಪೂಜೆ, ಆಮಂತ್ರಣ ಪತ್ರಿಕೆಯನ್ನು ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಬಿಡುಗಡೆಗೊಳಿಸಿದರು.















Leave a Reply