ಕೋಟ: ಕೋಟ ಮಾಗಣೆಯ ಹದಿನಾಲ್ಕು ಗ್ರಾಮಗಳ ಅಧಿದೇವ ಕ್ಷೇತ್ರವಾದ ಶ್ರೀ ಗುರು ನರಸಿಂಹ ದೇವಳದಲ್ಲಿ 22 ರ ಸೋಮವಾರ, ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ವಿಶೇಷವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಶ್ರೀ ನಾಗದೇವರಿಗೆ ಪವಮಾನ ಕಲಶಾಭಿಷೇಕ, ನರಸಿಂಹ ದೇವರಿಗೆ ಸಂಹಿತಾಭಿಷೇಕ, 1008 ಸಂಖ್ಯೆಯಲ್ಲಿ ನೃಸಿಂಹ ಹೋಮ, ಮಹಾಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ರಂಗಪೂಜೆ, ಬೆಳಿಗ್ಗೆಯಿಂದ ಸಂಜೆಯ ತನಕ ರಾಮಸಂಕೀರ್ತನೆ, ಹಾಗು ಸಂಜೆ ರಾಮ ಭಕ್ತ ಶ್ರೀ ಆಂಜನೇಯ ದೇವರಿಗೆ ವಿಶೇಷವಾದ ರಂಗಪೂಜಾ ಸೇವೆಯನ್ನು ಮಾಡಲಾಗುತ್ತಿದ್ದು, ಮಧ್ಯಾಹ್ನ ವಿಶೇಷ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಆಸ್ತಿಕ ಬಂಧುಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಷ್ಟç ಕಲ್ಯಾಣ ಯೋಜನೆಯಲ್ಲಿ ಪಾಲ್ಗೊಂಡು ದೇವರ ಸಂಪ್ರೀತಿಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ವಿನಂತಿಸಿದ್ದಾರೆ.
ಶ್ರೀ ರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಸಾಲಿಗ್ರಾಮ ದೇವಳದಲ್ಲಿ ವಿಶೇಷ ಕಾರ್ಯಕ್ರಮಗಳು















Leave a Reply