Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ದಶಕದ ಜ್ಞಾನಪೀಠ ಪ್ರಶಸ್ತಿಯ ಬರ ನೀಗುವುದೆಂದು-ಕು.ಬ್ರಾಹ್ಮೀಶ್ರೀ

ಕೋಟ: ಇಂದು ನಮಗೆ ಕತೆ-ಕವನ ಬರೆಯುವಲ್ಲಿರುವ ಉತ್ಸಾಹವು ಸಾಹಿತ್ಯದ ಓದಿನಲ್ಲಿ ಇಲ್ಲ. ಆದ್ದರಿಂದ ನಮ್ಮ ಬರೆಹ ಬಾಲಿಶವಾಗುತ್ತ ಕೊರತೆ ಅಲ್ಲ, ಉದಯೋನ್ಮುಖ ಸಾಹಿತಿಗಳ ಪಾಡೂ ಆಗಿದೆ.ಅದಕ್ಕೇ ಇರಬೇಕು ಎಂಟನೆಯ ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಬಂದು ದಶಕಗಳೇ ಉರುಳಿದ್ದರೂ ಒಂಬತ್ತನೆಯದು ಬಂದಿಲ್ಲ ಎಂದು ಸಿದ್ದಾಪುರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಬ್ರಾಹ್ಮಿಶ್ರೀ ಹೇಳಿದರು.

ಸಾಲಿಗ್ರಾಮದ ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯವರು ಹಟ್ಟಿಯಂಗಡಿಯ ಸಿದ್ಧಿವಿನಾಯಕ ಶಾಲೆಯ ರಜತ ಮಹೋತ್ಸವದಾಚರಣೆಯ ಅಂಗವಾಗಿ ಸಂಯೋಜಿಸಿದ ಉಡುಪಿ ಜಿಲ್ಲಾ ಮಕ್ಕಳ ಏಳನೆಯ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷರ ಸ್ಥಾನ ವಹಿಸಿ ಮಾತನಾಡಿದರು. ವಸತಿಶಾಲೆಯ ಕುಮಾರಿ ನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಅದೇ ಸಂಸ್ಥೆಯ ಕುಮಾರಿ ರಿಷಿಕಾ ಕವಿಗೋಷ್ಠಿಯ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಕುಮಾರಿ ಸಿಂಚನಾ ಕಥಾಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಜಿಲ್ಲೆಯ ವಿವಿಧ ಭಾಗದಿಂದ ಬಂದ 30 ಮಕ್ಕಳು ವಾಚಿಸಿದ ಸ್ವರಚಿತ ಕತೆ-ಕವನಗಳನ್ನು ವಿಶ್ಲೇಷಿಸಿದರು.

ಇದೇ ಸಂರ್ಭದಲ್ಲಿ ಕಿರಿಯ ವಿದ್ಯಾರ್ಥಿ, ಗಂಗೊಳ್ಳಿಯ ಸ್ಯಾಕ್ಸೋಪೋನ್ ವಾದಕ ಸಂಜಿತ, ಕೋಟದ ಚಂಡೆ ವಾದಕ ನಿಪುಣ ಕುಮಾರ ವಾಗ್ವಿಲಾಸ ಭಟ್ಟ ಹಾಗೂ ವಚನ ರಚನಕಾರ ಕುಮಾರ ಪ್ರಣವರನ್ನು ಪುರಸ್ಕರಿಸಲಾಯಿತು. ಅಧ್ಯಾಪಕ, ನರೇಂದ್ರ ಕುಮಾರ್ ಕೋಟ ಸಮಾರೋಹ ಉಪನ್ಯಾಸಗೈದರೆ ಉಪಸ್ಥಿತರಿದ್ದ ಪ್ರಾಂಶುಪಾಲ ಶರಣ ಕುಮಾರ್, ಉಪ ಪ್ರಾಂಶುಪಾಲ ರಾಮ ದೇವಾಡಿಗ, ಆಡಳಿತಾಧಿಕಾರಿ ವೀಣಾ ರಶ್ಮಿ, ಸಾಹಿತ್ಯ ವೇದಿಕೆಯ ಅಧ್ಯಕ್ಷ ಪ್ರೋ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕಾರ್ಯದರ್ಶಿಗಳಾದ ನೀಲಾವರ ಸುರೇಂದ್ರ ಅಡಿಗ ಮತ್ತು ಶ್ರೀಪತಿ ಹೇರ್ಳೆಯವರು ಸಮಯೋಚಿತವಾಗಿ ಮಾತನಾಡಿದರು.

ಸಾಲಿಗ್ರಾಮದ ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯವರು ಹಟ್ಟಿಯಂಗಡಿಯ ಸಿದ್ಧಿವಿನಾಯಕ ಶಾಲೆಯ ರಜತ ಮಹೋತ್ಸವದಾಚರಣೆಯ ಅಂಗವಾಗಿ ಸಂಯೋಜಿಸಿದ ಉಡುಪಿ ಜಿಲ್ಲಾ ಮಕ್ಕಳ ಏಳನೆಯ ಸಾಹಿತ್ಯ ಸಂಭ್ರಮದಲ್ಲಿ ವಿದ್ಯಾರ್ಥಿನಿ ಕುಮಾರಿ ಬ್ರಾಹ್ಮಿಶ್ರೀ ಮಾತನಾಡಿದರು. ಅಧ್ಯಾಪಕ, ನರೇಂದ್ರ ಕುಮಾರ್ ಕೋಟ, ಪ್ರಾಂಶುಪಾಲ ಶರಣ ಕುಮಾರ್, ಉಪ ಪ್ರಾಂಶುಪಾಲ ರಾಮ ದೇವಾಡಿಗ, ಆಡಳಿತಾಧಿಕಾರಿ ವೀಣಾ ರಶ್ಮಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *