ಕೋಟ: ಮಾರಿಬಲೆ ಕಾಲದ ಮೀನುಗಾರರು ಧಾರ್ಮಿಕ ಪ್ರಜ್ಞೆಯಿಂದ ಸೃಷ್ಠಿಗೊಂಡ ಕೋಟತಟ್ಟು ಪಡುಕರೆಯ ಶ್ರೀ ಭಗವತ್ ಭಜನಾ ಮಂದಿರದಲ್ಲಿ ಕರಸೇವರಿಗೆ ಗೌರವಾರ್ಪಣೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೆರಿತು.
ಪೂರ್ವಾಹ್ನ ವೇ.ಮೂ.ಮಧುಸೂಧನಬಾಯರಿ ನೇತೃತ್ವದಲ್ಲಿ ಶ್ರೀ ರಾಮತಾರಕ ಯಜ್ಞ , ಮಂತ್ರಗಳು , ಮಹಾಪೂಜೆ, ಪ್ರಸಾದ ವಿತರಣಾ ಕಾರ್ಯಕ್ರಮಗಳು ನೆರವೆರಿತು. ಕೋಟತಟ್ಟು ,ಪಾರಂಪಳ್ಳಿ ಪಡುಕರೆ ವ್ಯಾಪ್ತಿಯ ನಗರ ಭಜನಾ ವ್ಯಾಪ್ತಿಯ ನ ಮೂಲಕ ಉತ್ಸವ ಶ್ರೀರಾಮನ ಮೂರ್ತಿಯನ್ನು ಮೆರವಣಿಗೆ ಮೂಲಕ ಶ್ರೀ ಮಂದಿರಕ್ಕೆ ಕರೆತರಲಾಯಿತು.

ಅಪರಾಹ್ನ ಅನ್ನಸಂತರ್ಪಣೆ, ಶ್ರೀ ಭಗವತ್ ಭಜನಾ ಮಂಡಳಿಯ ಕಿರಿಯ ಹಾಗೂ ಹಿರಿಯ ಭಜಕರಿಂದ ಕುಣಿತ ಭಜನಾ ಕಾರ್ಯಕ್ರಮ ಜರಗಿದವು,ರಾತ್ರಿ ದೀಪೋತ್ಸವ ವಿಜೃಂಭಣೆಯಿAದ ನಡೆಯಿತು. ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡ ಹಿರಿಯ ಕರಸೇವಕ ರಾಜೀವ ದೇವಾಡಿಗ,ಪಂಜು ಪೂಜಾರಿ,ಅಣ್ಣಪ್ಪ ಗಾಣಿಗ ಇವರುಗಳನ್ನು ವಿಶೇಷವಾಗಿ ಗೌರವಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷ ರಮಾನಂದ ಮೆಂಡನ್, ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ,ಡಾ.ಮಹಾಬಲ ಕೆ.ಎಸ್,ಹಿರಿಯರಾದ ಕೃಷ್ಣ ಎಸ್ ನಾಯ್ಕ್ ,ಮಾಜಿ ಅಧ್ಯಕ್ಷ ಕೃಷ್ಣ ಶ್ರೀಯಾನ್, ಮಹಾಬಲ ತಿಂಗಳಾಯ, ಶಿವಮೂರ್ತಿ ಕೆ,ರಾಮ ಬಂಗೇರ, ಪ್ರವೀಣ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಕೋಟತಟ್ಟು ಪಡುಕರೆಯ ಶ್ರೀ ಭಗವತ್ ಭಜನಾ ಮಂದಿರದಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡ ಹಿರಿಯ ಕರಸೇವಕ ರಾಜೀವ ದೇವಾಡಿಗ,ಪಂಜು ಪೂಜಾರಿ, ಅಣ್ಣಪ್ಪ ಗಾಣಿಗ ಇವರುಗಳನ್ನು ವಿಶೇಷವಾಗಿ ಗೌರವಿಸಲಾಯಿತು. .ಭಜನಾ ಮಂದಿರದ ಅಧ್ಯಕ್ಷ ರಮಾನಂದ ಮೆಂಡನ್, ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್, ಡಾ.ಮಹಾಬಲ ಕೆ.ಎಸ್ ಇದ್ದರು.














Leave a Reply