Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೈಂದೂರಿನ ಮಸೀದಿಯಲ್ಲಿ ಸೌಹಾರ್ದ ಸಮ್ಮಿಲನ ನಮ್ಮೂರ ಮಸೀದಿ ನೋಡ ಬನ್ನಿ ವಿನೂತನ ಕಾರ್ಯಕ್ರಮ

ಬೈಂದೂರು : ಕರವಾಳಿಯಲ್ಲಿ ಮಸೀದಿಯಿಂದಲೇ ಇಸ್ಲಾಮೀ ಸಂಸ್ಕೃತಿಯ ಆರಂಭಗೊಂಡಿತು 648ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮಸೀದಿ ಬಾರ್ಕೂರಿನಲ್ಲಿ ನಿರ್ಮಿಸಿದ ದಾಖಲೆ ಕೂಡ ಇತಿಹಾಸ ಪುಟಗಳಲ್ಲಿದೆ ಅದಕ್ಕಿಂತಲೂ ಮುಂಚೆಯೂ ಕೂಡ ತೆಂಗಿನ ಸೋಗೆಗಳು ಮೂಲಕ ಅರಬ್‌ ವ್ಯಾಪಾರಿಗಳು ಮಸೀದಿ ನಮಾಜ್‌ ಗಳನ್ನು ಮಾಡುತ್ತಾ ಬಂದಿದ್ದಾರೆ ಮತ್ತು ಸಾವಿರಾರು ವರ್ಷಗಳ ಹಳೆಯ ಮಸೀದಿಗಳು ಕೂಡ ಉಡುಪಿ ಜಿಲ್ಲೆಯಾದ್ಯಂತ ನಾವು ಕಾಣಬಹುದು ಎಂದು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಮುಹಮ್ಮದ್ ಇದ್ರೀಸ್ ಹೂಡೆ ಹೇಳಿದರು.

ಇವರು ಬೈಂದೂರಿನ ಖತೀಜತುಲ್ ಖುಬ್ರ ಮಸೀದಿಯಲ್ಲಿ ಜಮೀಯ್ಯತುಲ್ ಫಲಾಹ್ ಬೈಂದೂರು ಘಟಕ, ಖತೀಜತುಲ್ ಖುಬ್ರ ಮಸೀದಿ ಆಡಳಿತ ಸಮಿತಿ ಹಾಗೂ ಎಸ್ ಐ ಓ ಉಡುಪಿ ಜಿಲ್ಲೆ ಸಹಕಾರದಿಂದ ಆಯೋಜಿಸಿದ ‘ನಮ್ಮೂರ ಮಸೀದಿ ನೋಡಬನ್ನಿ’ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಮಸೀದಿ ಸಂದರ್ಶನದ ಮುಖ್ಯ ಉದ್ದೇಶವೇ ಮಸೀದಿ ಬಗ್ಗೆ ಮಸೀದಿಯಲ್ಲಿ ನಡೆಯುವ ಆಚರಣೆ ಬಗ್ಗೆ ನಿಗುಢವಾಗಿರಬಾರದು ಅದು ಎಲ್ಲರಿಗೂ ತೆರೆದುಕೊಂಡಿರಬೇಕು ಎಂಬುದು ಇನ್ನೂ ಧರ್ಮ ಧರ್ಮಗಳು ನಿಗೂಢವಾಗುತ್ತಿರುವ ಸಂದರ್ಭದಲ್ಲಿ ಎಲ್ಲಾ ಧರ್ಮಗಳು ತಮ್ಮನ್ನು ತಾವು ಬೇರೆಯವರೊಂದಿಗೆ ಬೆರೆಯುಂತಹ ಮುಕ್ತ ಅವಕಾಶಗಳನ್ನು ಸೃಷ್ಟಿಸಬೇಕು ಅದಕ್ಕೋಸ್ಕರ ಈ ಕಾರ್ಯಕ್ರಮವನ್ನು ಮಾಡಲಾಗಿದೆ.

ಸಾದಾ ಅಬೂಬಕರ್ ಬಾಷಾ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್ ಬ್ಲಡ್ ಹೆಲ್ಸ್ ಕೇರ್ ಕರ್ನಾಟಕ ಕಾರ್ಯದರ್ಶಿ ಸಂಶುದ್ದೀನ್ ಬಳ್ಳುಂಜೆ, ಬೈಂದೂರು ಹೋಲಿಕ್ರಾಸ್ ಚರ್ಚ್ ಧರ್ಮಗುರು ವಿನ್ಸೆಂಟ್ ಕೊಹೆಲ್ಲೊ ಮುಖ್ಯ ಸರಿಯಾಗಿ ಮಾತನಾಡಿದರು, ಉದ್ಯಮಿ ನಾಗೂರು ಅಬ್ದುಸ್ಸಮದ್ ಸಾಹೇಬ್ ಇದ್ದರು. ಹುಸೈನ್ ಸಾಹೇಬ್ ಸ್ವಾಗತಿಸಿದರು. ಜಮೀಯ್ಯತುಲ್ ಫಲಾಹ್ ಘಟಕ ಅಧ್ಯಕ್ಷ ಶೇಖ್ ಫಯಾಜ್ ಅಲಿ ವಂದಿಸಿದರು. ಬ್ಲಡ್ ಹೆಲ್ಸ್‌ಕೇರ್ ಕರ್ನಾಟಕ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.

Leave a Reply

Your email address will not be published. Required fields are marked *