Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘಟನೆಯ ಮಹತ್ವದ ಸಭೆ

ವರದಿ : ಪುರುಷೋತ್ತಮ್ ಪೂಜಾರಿ

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘಟನೆಯ ಆಡಳಿತಾವಧಿ ಪೂರ್ಣಗೊಂಡ ಕಾರಣ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ  ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಕೆಲವು  ಪದಾಧಿಕಾರಿಗಳು ಅನೂಪಸ್ಥಿತಿಯಲ್ಲಿ ಸತೀಶ್ ಜೋಗಿಯವರ ಮುಂದಾಳತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ನಡೆದ ಎಲ್ಲಾ ನಿರ್ಣಯ, ತೀರ್ಮಾನಕ್ಕೆ ನನ್ನ ಸಮ್ಮತಿ ಇದೆ ಎಂದು ರಾಜ್ಯಾದ್ಯಕ್ಷರು ಲಿಖಿತವಾಗಿ ಕಮಿಟಿಗೆ ಚಿಕ್ಕಬಳ್ಳಾಪುರ ವಿಶ್ವನಾಥ ವೀರ ಮುಖಿಯಾಗಿ ಪತ್ರ ನೀಡಿರುತ್ತಾರೆ. ಕಮಿಟಿಯ ಎಲ್ಲ ಪ್ರಕ್ರಿಯೆಗೆ ನಾನೇ ಜವಾಬ್ದಾರಿ, ಸಭೆಯಲ್ಲಿ ಕಮಿಟಿ ನಿರ್ಧರಿಸಿದ ಅಧ್ಯಕ್ಷರ ನಿರ್ಣಯಕ್ಕೆ ನಾನು ಬದ್ದ ಎಂಬುದಾಗಿ ಪತ್ರದಲ್ಲಿ ಉಲ್ಲೆಹಿಸಿದ್ದಾರೆ.

ಸಭೆಯಲ್ಲಿ ನಿರ್ಣಯಿಸಿದಂತೆ ಮುಂದಿನ ಮೂರು ತಿಂಗಳ ಒಳಗೆ ಸಂಘಟನೆಯ ಗುರುತಿನ ಚೀಟಿ ಹೊಂದಿದ ಸದಸ್ಯರ ಮೂಲಕ ಚುನಾವಣೆ ನಡೆಸಿ ಕಮಿಟಿ ರಚಿಸಲಾಗುವುದು ಹಾಗೂ ಈಗಾಗಲೇ ಸದಸ್ಯತ್ವ ಹೊಂದಿದವರು ಚುನಾವಣೆಗೆ ಸ್ಪರ್ಧಿಸಬಹುದು ಎಂಬುದಾಗಿ ತೀರ್ಮಾನಿಸಿದರು. ಸಂಘಟನೆಯು ಕೆಲವೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಪ್ರಸ್ತುತ ಕಾಮಿತಿಯನ್ನು ವಜಾಗೊಳಿಸಿದೆ. ಮುಂದಿನ ಚುನಾವಣೆವರೆಗೆ ಸ್ಥಾಪಕ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಸಲಹಾ ಸಮಿತಿ ಪದಾಧಿಕಾರಿಗಳಾಗಿ ಮುಂದುವರಿಯುತ್ತಾರೆ ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿಶ್ವನಾಥ್ ವೀರ, ಸತೀಶ್ ಜೋಗಿ, ಶರತ್ ಶೆಟ್ಟಿ ಬಿದ್ಕಲ್ ಕಟ್ಟೆ, ಅಶೋಕ್ ಪಂಜಿಮಾರ್, ದಾವಲ್ ಸಾಬ್, ಸೀತಾರಾಮ್ ಶೆಟ್ಟಿ, ಶಶಿಧರ ದೇವಾಡಿಗ, ಸೀತಾರಾಮ್ ಕುಂದಾಪುರ, ಪವನ್, ಪುರುಷೋತ್ತಮ್ ಪೂಜಾರಿ ಹಾಗೂ ಕೆಲವು ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *