
ಕೋಟ: ಇಲ್ಲಿನ Sಂಉ ಔPಇಓ ಫೀಲ್ಡ್ ಮೈದಾನ, ಕ್ಯಾಂಪಲ್, ಪಣಜಿ-ಗೋವಾದಲ್ಲಿ ನಡೆದ ಂquಚಿ ಉoಚಿ ಒegಚಿ ಈish ಈesಣivಚಿಟ-2024 ರ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ಹಾಗೂ ಸ್ಕೊಡ್ವೇಸ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ತನ್ನ ಕಂಪನಿಯಿAದ ತಯಾರಿಸಿದ ವಿವಿಧ ಮೀನಿನ ಉತ್ಪನ್ನಗಳ ಜೊತೆಗೆ ಕಂಪನಿಯ ಮೀನುಗಾರ ಷೇರುದಾರರು ನಡೆಸುತ್ತಿರುವ ಪಚ್ಚಿಲೇ ಮತ್ತು ಕಲ್ಲ ಕೃಷಿಯ ಪಚ್ಚಿಲೇ ಮತ್ತು ಕಲ್ಲವನ್ನು ಪ್ರದರ್ಶಿಸಿ ಪ್ರದರ್ಶನದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗೋವಾ ಸರಕಾರದ ಮೀನುಗಾರಿಕೆ ಸಚಿವ ನೀಲಕಾಂತ್ ಹಲರ್ನಾಕರ್, ವಾಸ್ಕೊ ಶಾಸಕ ಕೃಷ್ಣ ಸಾಲ್ಕರ್, ಗೋವಾ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನವಡೆ ಇವರು ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿಯ ಮಳಿಗೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಂಪನಿಯ ನಿರ್ದೇಶಕ ಸುದಿನ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಾಯತ್ರಿ ವಿಜಯ್ ಉಪಸ್ಥಿತರಿದ್ದರು. ಸುದಿನ ಅವರು ಕಂಪನಿಯ ಉತ್ಪನ್ನ, ಮೀನು ಕೃಷಿ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಂಪನಿಯು ಮಹಿಳ ಮೀನುಗಾರ ಷೇರುದಾರರಿಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿರುವುದರ ಬಗ್ಗೆ ಮಾಹಿತಿ ನೀಡಿದರು.
ಅಕ್ವಾ ಗೋವಾ ಮೆಗಾ ಫಿಶ್ ಫೆಸ್ಟಿವಲ್-2024 ರಲ್ಲಿ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನದಲ್ಲಿ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಉತ್ಪನ್ನಗಳ ಪ್ರದರ್ಶನ ನೀಡಿತು. ಗೋವಾ ಸರಕಾರದ ಮೀನುಗಾರಿಕೆ ಸಚಿವ ನೀಲಕಾಂತ್ ಹಲರ್ನಾಕರ್, ವಾಸ್ಕೊ ಶಾಸಕ ಕೃಷ್ಣ ಸಾಲ್ಕರ್, ಗೋವಾ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನವಡೆ, ಕಂಪನಿಯ ನಿರ್ದೇಶಕ ಸುದಿನ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಾಯತ್ರಿ ವಿಜಯ್ ಉಪಸ್ಥಿತರಿದ್ದರು.














Leave a Reply