Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ – ಆನಂದ್ ಸಿ ಕುಂದರ್ ಕಿವಿಮಾತು

ಕೋಟ: ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸುವ ಅಗತ್ಯತೆ ಇದೆ ಎಂದು ಗೀತಾನಂದ ಫೌಂಡೇಶನ್ ಮಣೂರು ಇದರ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.

ಫೆ.4 ಭಾನುವಾರ ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ,ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಪಂಚವರ್ಣ ಯುವಕ ಮಂಡಲ ಕೋಟ
ಅಧೀನ ಪಂಚವರ್ಣ ಮಹಿಳಾ ಮಂಡಲ ಕೋಟ ಗ್ರಾಮ ಪಂಚಾಯತ್ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ
ಇವರ ನೇತೃತ್ವದಲ್ಲಿರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯ ಹದಗೆಡುವ ಮುಂಚಿತವಾಗಿ ಅದರ ತಪಾಸಣೆ ಮಾಡಿಕೊಳ್ಳಬೇಕಾದ ವಿಚಾರಗಳನ್ನು ಮನದಟ್ಟು ಮಾಡಿದ ಶ್ರೀಯುತರು ಸಂಘಸAಸ್ಥೆಗಳು ಆಗಾಗ ಶಿಬಿರಗಳನ್ನು ಆಯೋಜಿಸಿ ಜನಸಾಮಾನ್ಯರಿಗೆ ಇದರ ಪ್ರಯೋಜದಕ್ಕುವಂತೆ ತಿಳಿಸಿದರು. ಅಧ್ಯಕ್ಷತೆಯನ್ನು ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ಇದರ ಅಧ್ಯಕ್ಷೆ ರಜನಿ ಜೋಗಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಮಣೂರು ಗೀತಾನಂದ ಟ್ರಸ್ಟ್ನ ವೂಷ್ಣವಿ ರಕ್ಷಿತ್ ಕುಂದರ್, ಗೌರವಾಧ್ಯಕ್ಷೆ ಭಾರತಿ ದೇವರಾಜ್ ಜೋಗಿ,ಅಖಿಲ ಕರ್ನಾಟಕ ಜೋಗಿ ಸಮಾಜಸೇವಾ ಸಮಿತಿ ಕುಂದಾಪುರ ಅಧ್ಯಕ್ಷ ದೇವರಾಜ್ ಜೋಗಿ, ಕೆ.ಎಂ.ಸಿ ಮಣಿಪಾಲ ಇದರ ವೈದ್ಯರಾದ ಡಾ.ಮುರುಳಿಧರ ನಾಯಕ್,ಸ್ತಿçÃರೋಗ ತಜ್ಞೆ ಡಾ. ಕವಿತಾ,bಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ,bಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಪೂರ್ವಾಧ್ಯಕ್ಷ ಅಜಿತ್ ದೇವಾಡಿಗ ಉಪಸ್ಥಿತರಿದ್ದರು.

ನಾಂಥ ಪಂಥ ಜೋಗಿ ಮಹಿಳಾ ಸಂಘಟನೆಯ ಸದಸ್ಯೆ ಭವಾನಿಪ್ರಕಾಶ್ ಸ್ವಾಗತಿಸಿದರು.ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು. ಬ್ಲಡ್ ಪ್ರೆಶರ್, ಮಧುಮೇಹ, ಇ.ಸಿ.ಜಿ., ಗರ್ಭಕಂಠದ ಕ್ಯಾನ್ಸರ್, ಸ್ತನಕ್ಯಾನ್ಸರ್ ಸ್ಕಾ÷್ಯನಿಂಗ್ ಹಾಗೂ ವೈದ್ಯರೊಂದಿಗೆ ಸಮಾಲೋಚನಾ ಕಾರ್ಯಕ್ರಮ ನಡೆಯಿತು.

ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ,ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಪಂಚವರ್ಣ ಯುವಕ ಮಂಡಲ ಕೋಟ
ಅಧೀನ ಪಂಚವರ್ಣ ಮಹಿಳಾ ಮಂಡಲ ಕೋಟ ಗ್ರಾಮ ಪಂಚಾಯತ್ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ
ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಇದರ ಪ್ರವರ್ತಕ ಆನಂದ್ ಸಿ ಕುಂದರ್
ಉದ್ಘಾಟಿಸಿದರು. ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ಇದರ ಅಧ್ಯಕ್ಷೆ ರಜನಿ ಜೋಗಿ, ಗೌರವಾಧ್ಯಕ್ಷೆ ಭಾರತಿ ದೇವರಾಜ್ ಜೋಗಿ, ಗೀತಾನಂದ ಟ್ರಸ್ಟ್ನ ವೂಷ್ಣವಿ ರಕ್ಷಿತ್ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ,ಪೂರ್ವಾಧ್ಯಕ್ಷ ಅಜಿತ್ ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *