
ಕೋಟ: ಸನಾತನ ಧರ್ಮದ ಬಗ್ಗೆ ಅಪನಂಬಿಕೆ ಸೃಷ್ಠಿಸುವ ಕಾರ್ಯ ನಿಜಕ್ಕೂ ಬೇಸರದಾಯಕ, ಖಂಡನೀಯ ಎಂದು ಬೆಂಗಳೂರು ಶೇಖರ್ ಆಸ್ಪತ್ರೆ ಮುಖ್ಯಸ್ಥ ಡಾ.ಪಿ ವಿಷ್ಣಮೂರ್ತಿ ಐತಾಳ್ ಹೇಳಿದರು.
ಜೀರ್ಣೋದ್ಧಾರಗೊಂಡ ಪುರಾಣ ಹಿನ್ನೆಲೆಯುಳ್ಳ ಚಿತ್ರಪಾಡಿ ಕಾರ್ತಟ್ಟುವಿನ ಅಧ್ವಯ ಮಹಾವಿಷ್ಣು ದೇಗುಲದ ನವೀಕೃತ ದೇಗುಲದ ಲೋಕಾರ್ಪಣಾ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಹಿಂದೂ ಧರ್ಮ ಅಪಾಯದಲ್ಲಿ ಇದೆ ಎಂಬ ಸಂಶಯ ವ್ಯಕ್ತಪಡಿಸಿದ ಅವರು ಇದರ ಹಿಂದೆ ನಮ್ಮದೇ ಹಿಂದೂ ಸಮುದಾಯ ಇದೆ ಎಂಬುವುದನ್ನು ಮನಗಾಣಿಸಿದ ಅವರು ವಿಶ್ವದ ಬೇರೆ ಬೇರೆ ದೇಶಗಳ ಸಂಸ್ಕçತಿಯ ಮೇಲೆ ದಾಳಿಗಳಾಗಿ ನಶಿಸಿ ಹೋಗುವ ಹಂತಕ್ಕೆ ಬಂದಿದೆ.
ಅದೇ ರೀತಿ ನಮ್ಮ ಹಿಂದೂ ಧರ್ಮದ ಮೇಲೂ ಆಗಿದೆ ಆದರೆ ಇದನ್ನು ನಾಶ ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ನಾವುಗಳು ಪ್ರತಿಕ್ಷಣದಲ್ಲೂ ಜಾಗೃತರಾಗಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು. ದೇಗುಲಗಳ ಅಭಿವೃದ್ಧಿಯಿಂದ ಗ್ರಾಮಗಳು ಸುಭಿಕ್ಷೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂಬ ಆಶಯವನ್ನು ವ್ಯಕ್ತಪಡಿಸಿ ಯುವ ಸಮುದಾಯ ಧಾರ್ಮಿಕ ಕೈಂಕರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರುವಂತೆ ಕರೆ ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಗುಲ ಸಮಿತಿಯ ಪ್ರಮುಖರಾದ ಉಪೇಂದ್ರ ಸೋಮಯಾಜಿ ವಹಿಸಿದ್ದರು.
ಮುಖ್ಯ ಅಭ್ಯಾಗತಾಗಿ ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್,ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯ ಉಪಸ್ಥಿತರಿದ್ದರು. ದೇಗುಲದ ಪ್ರಮುಖರಾದ ರಂಗಯ್ಯ ಅಡಿಗ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಮಹಾಲಕ್ಷಿ÷್ಮÃ ಸೋಮಯಾಜಿ ನಿರೂಪಿಸಿ ವಂದಿಸಿದರು.
ಚಿತ್ರಪಾಡಿ ಕಾರ್ತಟ್ಟುವಿನ ಅಧ್ವಯ ಮಹಾವಿಷ್ಣು ದೇಗುಲದ ನವೀಕೃತ ದೇಗುಲದ ಲೋಕಾರ್ಪಣಾ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿಬೆಂಗಳೂರು ಶೇಖರ್ ಆಸ್ಪತ್ರೆ ಮುಖ್ಯಸ್ಥ ಡಾ.ಪಿ ವಿಷ್ಣಮೂರ್ತಿ ಐತಾಳ್ ಮಾತನಾಡಿದರು. ದೇಗುಲ ಸಮಿತಿಯ ಪ್ರಮುಖರಾದ ಉಪೇಂದ್ರ ಸೋಮಯಾಜಿ, ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಮತ್ತಿತರರು ಇದ್ದರು.














Leave a Reply