
ಕೋಟ: ದೇವರ ಹೆಸರಿನಲ್ಲಿ ಸಾಮಾಜಿಕ ಕೈಂಕರ್ಯ ನಿಜಕ್ಕೂ ಪ್ರಶಂಸನೀಯ ಎಂದು ಕೋಟ ವಿವೇಕ ವಿದ್ಯಾಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಸದಾಶಿವ ಹೊಳ್ಳ ಹೇಳಿದರು.
ಇಲ್ಲಿನ ಕೋಟ ಹರ್ತಟ್ಟು ನವೋದಯ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಅಶಕ್ತ ಹಾಗೂ ಅನಾರೋಗ್ಯ ಪೀಡಿತರ ನೆರವಿಗಾಗಿ ಅಜ್ಜಯ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆ ಮನೋರಂಜನೆಗೆ ಸೀಮಿತಗೊಳ್ಳದೆ ಅಶಕ್ತರಿಗೆ ಸಾಧಕರಿಗೆ ವೇದಿಕೆಯಾಗಿರಿಸುವ ಸಂಘಸAಸ್ಥೆಗಳ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದ ಹೊಳ್ಳರು ಪ್ರಸ್ತುತ ಮೊಬೈಲ್ ಯುಗದಲ್ಲಿ ಕ್ರೀಡಾಸಕ್ತಿ ಬೆಳೆಸಿಕೊಂಡು ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಿದೆ.ಸಮಾಜದ ಋಣ ತೀರಿಸಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಆ ಮೂಲಕ ತಮ್ಮ ಶ್ರೇಷ್ಠತೆಯನ್ನು ಜಗಕ್ಕೆ ಸಾರಬೇಕು ಎಂದು ನವೋದಯ ಫ್ರೆಂಡ್ಸ್ ಸಾಮಾಜಮುಖಿ ಕಾರ್ಯವನ್ನು ವೇದಿಕೆಯಲ್ಲಿ ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರಾದ ಹಿರಿಯ ಧಾರ್ಮಿಕ ಮುಖಂಡ ಸೀನ ದೇವಾಡಿಗ,ಸಾಧಕ ಕೃಷಿಕ ಮಹಾಬಲ ಪೂಜಾರಿ,ಕ್ರೀಡಾ ಸಾಧಕಿ ಸಂಜನಾ ಆಚಾರ್ಯ,ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಕಾರ್ತಿಕ್ ,ಸುಶಾನ್ ಆಚಾರ್ಯ,ಮೇಘನಾ ಜಿ.ಕಾವ್ಯ ಇವರುಗಳಿಗೆ ವಿಶೇಷ ಗೌರವಾರ್ಪಣೆ ನೀಡಲಾಯಿತು.
ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಸತೀಶ್ ಹೆಚ್ ಕುಂದರ್ ಸನ್ಮಾನ ಕಾರ್ಯಕ್ರಮ ನೆರವೆರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೋದಯ ಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ್ ಆಚಾರ್, ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ರಿಯಲ್ ಫೈಟಸ್೯ ಮುಖ್ಯಸ್ಥ ದಿನೇಶ್ ಶೆಟ್ಟಿಗಾರ್,ನವೋದಯ ಫ್ರೆಂಡ್ಸ್ ಗೌರವ ಸಲಹೆಗಾರ ಕಿರಣ್ ಕುಮಾರ್ ಉದ್ಯಮಿ ಪ್ರಕಾಶ್ ಆಚಾರ್ ,ನವೋದಯ ಫ್ರೆಂಡ್ಸ್ ಗೌರವಾಧ್ಯಕ್ಷ ಮಹೇಶ್ ಪೂಜಾರಿ,ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಮುಖ ಕೀರ್ತಿಶ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.ಕಾರ್ಯದರ್ಶಿ ಸಾಗರ್ ಪೂಜಾರಿ ಸಹಕರಿಸಿದರು.
ಕೋಟ ಹರ್ತಟ್ಟು ನವೋದಯ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಅಶಕ್ತ ಹಾಗೂ ಅನಾರೋಗ್ಯ ಪೀಡಿತರ ನೆರವಿಗಾಗಿ ಅಜ್ಜಯ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರಾದ ಹಿರಿಯ ಧಾರ್ಮಿಕ ಮುಖಂಡ ಸೀನ ದೇವಾಡಿಗ, ಸಾಧಕ ಕೃಷಿಕ ಮಹಾಬಲ ಪೂಜಾರಿ, ಕ್ರೀಡಾ ಸಾಧಕಿ ಸಂಜನಾ ಆಚಾರ್ಯ ಇವರುಗಳನ್ನು ಸನ್ಮಾನಿಸಲಾಯಿತು. ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಸತೀಶ್ ಹೆಚ್ ಕುಂದರ್, ನವೋದಯ ಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ್ ಆಚಾರ್, ಮತ್ತಿತರರು ಇದ್ದರು.














Leave a Reply