
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ, ದಿನಾಂಕ 04.02.2024 ಆದಿತ್ಯವಾರ ಕಾಪು ತಾಲೂಕು ಮಹಿಳಾ ಘಟಕ ಕಾರ್ಯಕರ್ತರ ಸಭೆಯನ್ನು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಉದ್ಘಾಟಿಸಿದ್ದರು. ನಂತರ ಕಾಪು ತಾಲೂಕು ಮಹಿಳಾ ಘಟಕದ ನೂತನವಾಗಿ ಅಧ್ಯಕ್ಷರಾಗಿ ಶಶಿಕಲಾ ನವೀನ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಪು ಮಹಿಳಾ ಘಟಕದ ಘಟಕದ ಅಧ್ಯಕ್ಷರಾಗಿ ಶಶಿಕಾಲ ನವೀನ. ಉಪಾಧ್ಯಕ್ಷರಾಗಿ ಶಾಲಿನಿ ಸುರೇಶ್ , ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅನಿತಾ ಬಿ.ವಿ ಕಾರ್ಯದರ್ಶಿಯಾಗಿ ಗೀತಾ ಬಾಲಕೃಷ್ಣ. ಕೋಶಾಧಿಕಾರಿ ಅವಿತಾ ಕುಮಾರಿ.ಕೆ ಇವರನ್ನು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ಆಯ್ಕೆ ಮಾಡಿದ್ದರು. ತದನಂತರ ಕಾಪು ತಾಲೂಕು, ಮಹಿಳಾ ಘಟಕಕ್ಕೆ ಹಲವಾರು ಸದಸ್ಯರು ಸೇರ್ಪಡೆಯಾದರು. ಸಭೆಯ ಅಧ್ಯಕ್ಷತೆ ಗೀತಾ ಪಾಂಗಾಳರವರು ವಹಿಸಿಕೊಂಡಿದ್ದರು. ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ನೇತೃತ್ವದಲ್ಲಿ ಮತ್ತು ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಈ ಸೇರ್ಪಡೆ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು, ಮಹಿಳಾ ಅಧ್ಯಕ್ಷರಾದ ಶಶಿಕಲಾ ನವೀನ್ ಇವರು ಹೊಸದಾಗಿ ಸೇರ್ಪಡೆಗೊಂಡ ಸದಸ್ಯರನ್ನು ಬರಮಾಡಿಕೊಂಡು ಸ್ವಾಗತಿಸಿದರು. ಈ ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್. ಹಾಗೂ ಶಾಲಿನಿ ಸುರೇಂದ್ರ. ಜಿಲ್ಲಾ ಸಾಂಸ್ಕೃತ ಕಾರ್ಯದರ್ಶಿಯಾದ ಕೃಷ್ಣ.ಕೆ. ಕಾಪು ತಾಲೂಕು ಸದಸ್ಯರಾದ ಲತಾ. ಶರ್ಮಿಳಾ. ಪಂಚಾಯಿತಿ ಸದಸ್ಯರಾದ ವೇರೋಣಿಕ. ಹಾಗೂ ಕಾಪು ತಾಲೂಕು ಘಟಕಕ್ಕೆ ತಾಲೂಕು ಹೊಸದಾಗಿ 15 ಮಹಿಳಾ ಸದಸ್ಯರು . ಸೇರ್ಪಡೆಗೊಂಡರು. ಕರವೇಯ ಎಲ್ಲಾ ಪದಾಧಿಕಾರಿ ಸದಸ್ಯರನ್ನು ಧನ್ಯವಾದವನ್ನು ನೂತನವಾಗಿ ಮಹಿಳಾ ಘಟಕದ ಪ್ರಧಾನಕಾರ್ಯದರ್ಶಿಯಾಗಿ ಅನಿತಾ ಬಿ.ವಿ ಸದಸ್ಯರನ್ನು ಧನ್ಯವಾದಗೈದರು.














Leave a Reply