
ಬೈಂದೂರು ತಾಲೂಕು ಬಿಲ್ಲವರ ಸಂಘ ಇದರ ವತಿಯಿಂದ ಬಿಲ್ಲವರ ಸಮ್ಮಿಲನ -2024 ಕಾರ್ಯಕ್ರಮ ಯಡ್ತರೆ ಜೆ.ಎನ್.ಆರ್ ಸಭಾಭವನದ ಹೊರಾಂಗಣದಲ್ಲಿ ನಡೆಯಿತು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘಟನೆ ಮೂಲಕ ಸಮುದಾಯಕ್ಕೆ ಶಕ್ತಿ ಪಡೆಯಬೇಕಾಗಿರುವುದು ಸಾರ್ವಕಾಲಿಕ ಅಗತ್ಯವಾಗಿದೆ. ಕ್ರೀಡೆಯ ಮೂಲಕ ಗ್ರಾಮೀಣ ಭಾಗದಲ್ಲಿ ಸಂಘಟನೆಯ ಚಿಂತನೆ ಉತ್ತಮ ಯೋಚನೆಯಾಗಿದೆ. ಬಂಗಾರಪ್ಪ, ಕಾಗೋಡರವರ ದೀಮಂತ ನಾಯಕರು ಬೆಳೆದು ಬಂದ ಬಿಲ್ಲವ ಸಮುದಾಯದ ಕೊಡಗೆ ಜಾಗತಿಕ ಮಟ್ಟದಲ್ಲಿ ಅಪಾರವಾಗಿದೆ. ರಾಜಕೀಯ ಬಿನ್ನಾಭಿಪ್ರಾಯಗಳು ವಯಕ್ತಿಕವಾಗಿರುತ್ತದೆ.ಪಕ್ಷಗಳು ನಮಗಾಗಿ ಹುಟ್ಟಬೇಕು ಹೊರತು ನಾವು ಪಕ್ಷಕ್ಕಾಗಿ ಹುಟ್ಟಬಾರದು. ನಮ್ಮ ಭವಿಷ್ಯವನ್ನು ರೂಪಿಸುವ ನಾಯಕರನ್ನು ಸಮುದಾಯ ಬೆಳೆಸಬೇಕು ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ನಮೆಗೆಲ್ಲ ದಾರಿದೀಪವಾಗಿದೆ. ಸಮಾಜದ ಕಡು ಬಡವನು ಕೂಡ ಮುಖ್ಯವಾಹಿನಿಗೆ ಬಂದಾಗ ಸಂಘಟನೆಯ ಶ್ರಮ ಸಾರ್ಥಕವಾಗುತ್ತದೆ. ಅಸಕಾರದ ಅವಸಯಲ್ಲಿ ಬಿಲ್ಲವರ ಅಭಿವೃದ್ದಿ ನಾರಾಯಣ ಗುರು ವಸತಿ ಶಾಲೆ ಸೇರಿದಂತೆ ಹಲವು ಮಹತ್ವಕಾಂಕ್ಷೆಯ ಯೋಜನೆ ಜಾರಿಗೆ ತಂದ ಸಂತೃಪ್ತಿಯಿದೆ.ಸ್ವಾರ್ಥ ಮರೆತು ಸಮುದಾಯ ಅಭಿವೃದ್ದಿ ಚಿಂತನೆ ರೂಪಿಸಿಕೊಂಡಾಗ ಬೆಳವಣಿಗೆ ಸಾಧ್ಯ ಎಂದರು.
ಬೈಂದೂರು ತಾಲೂಕು ಬಿಲ್ಲವರ ಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಬಂದೂರು ಕ್ಷೇತ್ರದಲ್ಲಿ ಬಿಲ್ಲವ ಭವನ ನಿರ್ಮಾಣ ಬಹಳ ವರ್ಷಗಳ ಕನಸಾಗಿದೆ. ಅನೇಕ ಸಣ್ಣ ಸಣ್ಣ ಸಮುದಾಯಗಳು ಸ್ವಂತ ಜಾಗ ಪಡೆದುಕೊಂಡಿದೆ. ತಾಲೂಕು ಸಂಘ ಜಾಗ ಗುರುತಿಸಿಕೊಂಡರೆ ಸರಕಾರದಿಂದ ಸಚಿವರ ಮುಂದಾಳತ್ವದಲ್ಲಿ ಅನುದಾನ ಒದಗಿಸಿಕೊಡುವ ಜೊತೆಗೆ ಸಂಘಟನೆ ಮೂಲಕ ಶಕ್ತಿ ಜೊತೆಗೆ ಭವಿಷ್ಯದ ಬೆಳವಣಿಗೆ ಚಿಂತನೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಸಮುದಾಯ ಶಕ್ತಿ ದೊರೆಯುತ್ತದೆ ಎಂದರು.
ಬೈಂದೂರು ತಾಲೂಕು ಬಿಲ್ಲವರ ಸಂಘ ರಿ ಅಧ್ಯಕ್ಷ ಗಣೇಶ್ ಎಲ್.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ತಾಲೂಕಿನ ಕ್ರೀಡೆಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಜೊತೆಗೆ ಸಾಂಸ್ಕೃತಿಕ ವೈಭವ ವೇದಿಕೆಯಲ್ಲಿ ನೆರವೇರಿತು.
ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಶುಭಶಂಸನೆಗೈದರು. ಮುಖ್ಯ ಅತಿಥಿಗಳಾಗಿ ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ,ಮುಂಬೈ ಉದ್ಯಮಿ ಬಾಬು ಪೂಜಾರಿ ಕಿರುಕಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕುಂದಾಪುರ ನಾರಾಯಣ ಗುರು ಬಿಲ್ಲವ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ,ಬೆಂಗಳೂರು ಉದ್ಯಮಿ ವಿಜಯಕೃಷ್ಣ ಪಡುಕೋಣೆ, ಮುಂಬೈ ಉದ್ಯಮಿ ಭಾಸ್ಕರ ಪೂಜಾರಿ ಗರಡಿ ಬಿಜೂರು, ಬೆಂಗಳೂರು ಉದ್ಯಮಿ ಸಂಜಯ್ ವೆಂಕಟ ಪೂಜಾರಿ, ಮುಂಬೈ , ಮೈಸೂರು ಉದ್ಯಮಿ ಗುರುರಾಜ ಪಂಜು ಪೂಜಾರಿ ಬಿಜೂರು,ಉದ್ಯಮಿ ಅರವಿಂದ ಪೂಜಾರಿ ಪಡುಕೋಣೆ, ಉಪಾಧ್ಯಕ್ಷ ಶಂಕರ ಪೂಜಾರಿ ಬಗ್ವಾಡಿ,ಬಿಲ್ಲವ ಯುವ ಘಟಕದ ಅಧ್ಯಕ್ಷ ಶೇಖರ ಪೂಜಾರಿ,ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಪೂಜಾರಿ,ಜೊತೆ ಕಾರ್ಯದರ್ಶಿ ಪ್ರಭಾಕರ ಬಿಲ್ಲವ,ಕ್ರೀಡಾ ಕಾರ್ಯದರ್ಶಿ ಆನಂದ ಪೂಜಾರಿ ಬಿಜೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಗೋವಿಂದ ಬಾಬು ಪೂಜಾರಿ,ನವದೆಹಲಿ ಕೇಂದ್ರ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಂಗ ಸದಸ್ಯ ಯು.ಎಸ್. ಯೋಗೇಶ್ ಕುಮಾರ್,ಪಲ್ಲವಿ ನಾಗರಾಜ ಪೂಜಾರಿ ಹಾಗೂ ಸೌಮ್ಯ ಬಿ.ರವರನ್ನು ಸಮ್ಮಾನಿಸಲಾಯಿತು ಹಾಗೂ ಸಮಾಜದ ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು.
ಶೇಖರ ಪೂಜಾರಿ ಹೊಸ್ಕೋಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ವಾಸುದೇವ ಎಸ್.ಪೂಜಾರಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕಿಶೋರ್ ಸಸಿಹಿತ್ಲು ವಂದಿಸಿದರು














Leave a Reply