
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಬಡ ನಿರ್ಗತಿಕ ಕುಟುಂಬಗಳ ಕಣ್ಣಿರೊರೆಸುವ ಕಾರ್ಯ ಕೈಗೊಂಡಿದ್ದು ಶ್ರೀ ಕ್ಷೇತ್ರದ ಮೂಲಕ ಹಲವು ಸಾಮಾಜಿಕ ಹಾಗೂ ಧಾರ್ಮಿಕ,ಸ್ವ ಉದ್ಯೋಗ ಸೃಷ್ಠಿಸುವ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಉಡುಪಿ ಇದರ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ನುಡಿದರು.
ಬುಧವಾರ ಮಧುವನ ಕಾರ್ಯಕ್ಷೇತ್ರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಾತ್ಸಲ್ಯ ಮನೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚಿಗೆ ಬೆಳಕಿಗೆ ಬಂದ ಮಹತ್ವಾಕಾಂಕ್ಷೆಯ ಯೋಜನೆಯಾದ ವಾತ್ಸಲ್ಯ ಯೋಜನೆ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಿದೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೂಲಕ ಅಶಕ್ತ ಕುಟುಂಬಗಳಿಗೆ ಸೂರು ಕಲ್ಪಿಸುತ್ತಿದೆ.ಇದರ ಭಾಗವಾಗಿ ಮಧುವನ ಕಾರ್ಯಕ್ಷೇತ್ರದ ವ್ಯಾಪ್ತಿಯ ಬಡ ಕುಟುಂಬವಾದ ಲಕ್ಷಿ÷್ಮÃ ಇವರಿಗೆ ಸೂರು ಹಸ್ತಾಂತರಿಸುವ ಕಾರ್ಯಕ್ರಮ ಮಹತ್ತರ ಕಾರ್ಯದಲ್ಲಿ ಕೈಜೋಡಿಸಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಸಕರಿಂದ ಬಣ್ಣನೆ
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನೆ ಮಾಲಕಿ ಲಕ್ಷಿ÷್ಮÃ ಯವರಿಗೆ ಹಸ್ತಾಂತರಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಇಡೀ ವಿಶ್ವಕ್ಕೆ ಮಾದರಿ ಕಾರ್ಯಕ್ರಮಗಳನ್ನು ನೀಡುತ್ತಿದೆ ಅದರಲ್ಲಿ ಕೆರೆ ನವೀಕರಣ,ಸಾಲ ಯೋಜನೆ,ಅಶಕ್ತ ಕಟುಂಬಗಳ ಕಣ್ಣಿರೊರೆಸುವ ಯೋಜನೆಗಳ ಕುರಿತು ವಿಶೇಷವಾಗಿ ಪ್ರಶಂಸಿದರು. ಈ ಪ್ರಯುಕ್ತ ಗಣಹೋಮ ಇತ್ಯಾದಿ ಪೂಜಾ ವಿಧಿವಿಧಾನಗಳನ್ನು ಪೌರೋಹಿತ್ಯರಾದ ಗಣೇಶ್ ಭಟ್ ಮೂಲಕ ನೆರವೆರಿಸಿದರು.
ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬ್ರಹ್ಮವಾರ ತಾಲೂಕು ಅಧ್ಯಕ್ಷ ಪ್ರಕಾಶ್ ಶೆಟ್ಟಿ, ವಡ್ಡರ್ಸೆ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಆಚಾರ್,ಸದಸ್ಯರಾದ ಚಂದ್ರಶೇಖರ್ ಶೆಟ್ಟಿ,ಕೋಟಿ ಪೂಜಾರಿ, ವಡ್ಡರ್ಸೆ ಗ್ರಾ.ಪಂ ಅಧ್ಯಕ್ಷ
ಲೋಕೇಶ್ ಕಾಂಚನ್, ಹಾಲು ಉತ್ಪಾದಕರ ಸಹಕರಿ ಸಂಘ ಅಚ್ಲಾಡಿ ಅಧ್ಯಕ್ಷ ಗುಂಡ ಶೆಟ್ಟಿ, ವಡ್ದರ್ಸೆ ಒಕ್ಕೂಟ ಮಾಜಿ ಅಧ್ಯಕ್ಷ ಶ್ರೀನಿವಾಸ್ ವಡ್ಡರ್ಸೆ,ವಡ್ಡರ್ಸೆ ಯುವಕ ಮಂಡಲ ಅಧ್ಯಕ್ಷ ಲಕ್ಶ್ಮಣ್ ಶೆಟ್ಟಿ,ಜ್ಞಾನವಿಕಾಸ ಸಮನಾಧಿಕಾರಿ ಪುಷ್ಪಲತಾ ಮೇಲ್ವಿಚಾರಕ ರಾಜಶೇಖರ್ ಹಾಗೂ ಕೃಷಿ ಅಧಿಕಾರಿ ರಾಘವೇಂದ್ರ ಸೇವಾ ಪ್ರತಿನಿಧಿ ಲಕ್ಷ್ಮೀ ,ವಿದ್ಯಾ ಉಪಸ್ಥಿತರಿದ್ದರು. ಶ್ರೀ ಕ್ಷೇ.ಗ್ರಾ. ಯೋಜನಾಧಿಕಾರಿ ರಮೇಶ್ ಪಿಕೆ ಸ್ವಾಗತಿಸಿ ನಿರೂಪಿಸಿದರು.
ಮಧುವನ ಕಾರ್ಯಕ್ಷೇತ್ರದ ಲಕ್ಷಿö್ಮÃ ಎನುವಾಕೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಾತ್ಸಲ್ಯ ಮನೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನೆ ಮಾಲಕಿ ಲಕ್ಷಿ÷್ಮÃ ಯವರಿಗೆ ಹಸ್ತಾಂತರಿಸಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಉಡುಪಿ ಇದರ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಅಖಿಲ ಕರ್ನಾಟಕಜನಜಾಗ್ರತಿ ವೇದಿಕೆ ಬ್ರಹ್ಮವಾರ ತಾಲೂಕು ಅಧ್ಯಕ್ಷ ಪ್ರಕಾಶ್ ಶೆಟ್ಟಿ, ವಡ್ಡರ್ಸೆ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಆಚಾರ್,ಸದಸ್ಯರಾದ ಚಂದ್ರಶೇಖರ್ ಶೆಟ್ಟಿ,ಕೋಟಿ ಪೂಜಾರಿ ಮತ್ತಿತರರು ಇದ್ದರು.














Leave a Reply