
ಕೋಟ: ಹಿರಿಯರು ತಮ್ಮನುಭವದಿಂದ ತಮ್ಮ ಜ್ಜಾನ ಸಂಪತ್ತನ್ನು ದಾರೆ ಎರೆದು ರಚಿಸಿದಂತ ಯಕ್ಕಗಾನ ಗ್ರಂಥಗಳನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ, ಜವಾಬ್ಬಾರಿಗಳು ನಮ್ಮ ಮೇಲಿದೆ. ಉಳಿದದ್ದು, ಸಿಕ್ಕಿದ್ದು ಬಹಳ ಕಡಿಮೆ, ದೊರಕಬೇಕಾದದ್ದು, ಹುಡುಕ ಬೇಕಾದದ್ದು ಬಹಳಷ್ಟಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯೋನ್ಮುಖರಾಗಬೇಕು, ಮೂಲ ಕವಿಗಳ ಪ್ರಸಂಗಗಳ ಹೆಸರುಗಳನ್ನು ಬದಲಾವಣೆ ಮಾಡಿ ಪ್ರದರ್ಶಿಸುವ ಉದ್ದಟತನವೂ ನಡೆಯುತ್ತಿದೆ ಅದು ನಿಲ್ಲಬೇಕು ವಿಶ್ರಾಂತ ಸಂಸ್ಕೃತ ವಿದ್ವಾಂಸರಾದ ಪಾದೇಕಲ್ಲು ವಿಷ್ಣು ಭಟ್ಟರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಯಕ್ಷ ಸಪ್ತೋತ್ಸವ ಸಮಾರೋಪ ಮತ್ತು ಹಿರಿಯರ ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಯಕ್ಷಗಾನಕ್ಕೆ ಕಲಾಕೇಂದ್ರದ ಕೊಡುಗೆಯನ್ನು ಸ್ಮರಿಸುತ್ತಾ ಯಕ್ಷಗಾನ ಕಲಾವಿದರಲ್ಲಿರ ಬೇಕಾದ ಜವಾಬ್ದಾರಿ ಮತ್ತು ನಿಷ್ಟೆಗಳ ಬಗ್ಗೆ ನೆನಪಿಸಿದರು.
ಕಲಾಕೇಂದ್ರದ ಆನಂದ ಸಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ವೈದ್ಯರಾದ ಡಾ| ಆದರ್ಶ ಹೆಬ್ಬಾರ, ನ್ಯಾಯವಾದಿ ಮಂಜುನಾಥ್ ಸಾಲಿಗ್ರಾಮ, ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ರಾಜೇಶ ಉಪಾದ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಇದೇ ವೇಳೆ ಕಲಾಕೇಂದ್ರದ ಬೆಳವಣಿಗೆಯಲ್ಲಿ ಸಹಕರಿಸಿದ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು. ಯಕ್ಷಗಾನ ಸಪ್ತಾಹದ ಯಕ್ಷಗಾನ ಸಂಯೋಜಿಸಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಗುರು ಗಣೇಶ ಚೇರ್ಕಾಡಿ, ಸಾಮಾಜಿಕ ಜಾಲತಾಣದ ಮಾಧ್ಯಮ ಸಂಯೋಜಕ ಶ್ರೀನಿವಾಸ ಉಪಾದ್ಯರನ್ನು ಸನ್ಮಾನಿಸಲಾಯಿತು. ಗುರುನರಸಿಂಹ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಅನಂತಪದ್ಮನಾಭ ಐತಾಳರು ಕಲಾಕೇಂದ್ರದ ಮುಂದಿನ ಯೋಜನೆಗಳ ಬಗ್ಗೆ ವಿವರಿಸುತ್ತಾ ಕೇಂದ್ರದ ಬೆಳವಣಿಗೆಗೆ ದಾನಿಗಳ ಸಹಕಾರ ಕೋರಿದರು. ಮೇಘಶ್ಯಾಮ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿ, ಕ್ಷಮಾ ಹೆಬ್ಬಾರ ವಂದನಾರ್ಪಣೆ ಮಾಡಿದರು.
ಚಂದ್ರಕಾಂತ ನಾಯರಿಯವರಿಂದ ಸುಗಮ ಸಂಗೀತ, ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರದರ್ಶನ ಹಾಗೂ ದೊಂದಿ ಬೆಳಕಿನಲ್ಲಿ ಅಗ್ನಿ ಪರೀಕ್ಷೆ ಮತ್ತು ಶ್ರೀ ರಾಮ ನಿಜ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನ ಗೊಂಡಿತು. ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಯಕ್ಷ ಸಪ್ತೋತ್ಸವ ಸಮಾರೋಪ ಮತ್ತು ಹಿರಿಯರ ನೆನಪು ಕಾರ್ಯಕ್ರಮದಲ್ಲಿ ವಿಶ್ರಾಂತ ಸಂಸ್ಕೃತ ವಿದ್ವಾಂಸರಾದ ಪಾದೇಕಲ್ಲು ವಿಷ್ಣು ಭಟ್ಟರು ಮಾತನಾಡಿರು. ಯಕ್ಷಗಾನ ಸಪ್ತಾಹದ ಯಕ್ಷಗಾನ ಸಂಯೋಜಿಸಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಗುರು ಗಣೇಶ ಚೇರ್ಕಾಡಿ ಮತ್ತಿತರರು ಇದ್ದರು.














Leave a Reply