
ಕೋಟ: ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಕಾರ್ಕಡ ಮೂಡೋಳಿ ಪ್ರದೇಶದ ಕಾವಡಿ ಸೇತುವೆಯ ಬಳಿ ಅವೈಜ್ಞಾನಿಕವಾಗಿ ಮರಳುಗಾರಿಕೆಗೆ ಅವಕಾಶವನ್ನು ನೀಡಿ ರೈತರ ಕೃಷಿ ಭೂಮಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದ ಕುದುರುಮನೆ ಡ್ಯಾಮ್ ಮತ್ತು ಕಾವಡಿ ಸೇತುವೆಗಳು ಅಪಾಯಕಾರಿ ಸ್ಥಿತಿ ತಲುಪುವಂತೆ ಸಾರ್ವಜನಿಕ ಮತ್ತು ರೈತರ ಜೀವನಕ್ಕೆ ಕಂಟಕ ಪ್ರಾಯವಾದ ಈ ಮರಳುಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಿ ಎಂದು ಆಗ್ರಹಿಸಿ ಕಾರ್ಕಡ ಪರಿಸರದ ರೈತರು, ನಾಗರಿಕರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಫೆಬ್ರವರಿ 14, 2024ನೇ ಬುಧವಾರ ಬೆಳಗ್ಗೆ 10.00ಗಂಟೆಗೆ ಕಾರ್ಕಡ ಮಠಕೇರಿ ಬಳಿಯಿಂದ ಪ್ರತಿಭಟನೆಯಲ್ಲಿ ಹೊರಟು ಕಾವಡಿ ಸೇತುವೆಯ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ, ಅಧಿಕಾರಿಗಳು ನಮ್ಮ ಬೇಡಿಕೆಗೆ ಸ್ಪಂದಿಸುವ ತನಕ ಈ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟಿಸಲಿದ್ದೇವೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಉಗ್ರವಾಗಿ ಪ್ರತಿಭಟಿಸಲಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ













Leave a Reply