
ಕೋಟ: ಸಾಸ್ತಾನ ಗುಂಡ್ಮಿ ಚೆಲ್ಲೆಮಕ್ಕಿ ನಾಗಬನ ಇದರ 15ನೇ ವರ್ಷದ ವರ್ಧಂತ್ಯುತ್ಸವ ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಗುಂಡ್ಮಿಯ ಸರಕಾರಿ ಪ್ರೌಢಶಾಲೆ ಇಲ್ಲಿಗೆ ಚೆಲ್ಲೆಮಕ್ಕಿ ಗೋಪಾಲ ಗಾಣಿಗರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳಿಂದ ಪೋಡಿಯಂ ಪರಿಕರವನ್ನು ಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ಇವರಿಗೆ ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಸೋಮ ಕ್ಷತ್ರೀಯ ಗಾಣಿಗ ಸಮಾಜ ಬಾರಕೂರು ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ, ಪಂಚವರ್ಣ ಯುವಕ ಮಂಡಲ ಕೋಟ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಶಿಕ್ಷಣ ತಜ್ಞ ಗಣೇಶ್ ಜಿ ಚೆಲ್ಲೆಮಕ್ಕಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಸೇರಿಗಾರ್ ಮತ್ತಿತರರು ಇದ್ದರು.














Leave a Reply