
ಕೋಟ: ಕೋಟತಟ್ಟು ಪಡುಕರೆಯಲ್ಲಿಇದೇ ಬರುವ ಮಾರ್ಚ್ 2ರಂದು ಟೀಮ್ ಭವಾಬ್ಧಿ ಪಡುಕರೆಯ ಆಶ್ರಯದಲ್ಲಿ ನಡೆಯಲಿರುವ ಸಾಂಸ್ಕೃತಿಕ ಪರ್ವ ಕಡಲೂರ ಸನ್ಮಾನಕ್ಕೆ ಸಮಾಜಸೇವಕ ರವಿ ಕಟಪಾಡಿ ಆಯ್ಕೆಯಾಗಿದ್ದಾರೆ.
ಕೋಟತಟ್ಟು ಪಡುಕರೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ರವಿ ಕಟಪಾಡಿ ಈ ಸನ್ಮಾನ ಸ್ವೀಕರಿಸಲಿದ್ದಾರೆ. ವಿಶೇಷ ಅಭಿನಂದನೆಗೆ ಯಕ್ಷರಂಗದ ಶ್ರೇಷ್ಠ ಕಲಾವಿದ ಕೋಟ ಸುರೇಶ್,ಯುವ ಕೃಷಿಕ ಸುದಿನ ಕೋಡಿ, ಅಂತಾರಾಷ್ಟ್ರೀಯ ಯುವ ಕಲಾವಿದ ನಾಗೇಶ್ ಆಚಾರ್ ಕೋಟ ಭಾಜನರಾಗಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಯ ಅಪ್ಪೆ ಮಂತ್ರದೇವತೆ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಸಂಘಟಕರು ತಿಳಿಸಿದ್ದಾರೆ.














Leave a Reply