Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ -ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ ಮತ್ತು ದುರ್ಗಾ ನಮಸ್ಕಾರ

ಉಡುಪಿ: ಇಲ್ಲಿನ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ -66 ಅಂಬಾಗಿಲು ಸಮೀಪದಲ್ಲಿರುವ ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಫೆ.16 ರಂದು    ಪುತ್ತೂರು ನಾಯಕ್ ಕುಟುಂಬಸ್ಥರಿಂದ ಬೆಳಿಗ್ಗೆ 8 ಗಂಟೆಗೆ ನವಕ ಪ್ರಧಾನ ಕಲಶಾರಾಧನೆ.

10 ಗಂಟೆಗೆ ಚಂಡಿಕಾ ಹೋಮ, 12.30ಕ್ಕೆ ಪೂರ್ಣಾಹುತಿ, ಶ್ರೀ ಮಾಸ್ತಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಸುವಾಸಿನಿ ಪೂಜೆ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.
‌‌ಸಾಯಂಕಾಲ 6 ಗಂಟೆಗೆ *ದುರ್ಗಾ ನಮಸ್ಕಾರ* ಪೂಜೆ, ರಾತ್ರಿ 8 ಗಂಟೆಗೆ ಶ್ರೀ ಮಾಸ್ತಿಅಮ್ಮ ದೇವರ ಪೂಜೆ ಹಾಗೂ ದರ್ಶನ ಸೇವೆಯು ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನರಹರಿ ಎಸ್. ನಾಯಕ್ ಮತ್ತು ನಾಯಕ್ ಕುಟುಂಬಸ್ಥರು ಹಾಗೂ ನಂಬಿದ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *