
ಕೋಟ: ಕೋಟದ ದಿನೇಶ್ ಗಾಣಿಗ ಅಂತರಾಷ್ಟಿçÃಯ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಮೂರು ಪದಕ ಮುಡಿಗೆರಿಸಿಕೊಂಡಿದ್ದಾರೆ.
ಫೆ. 22 ರಿಂದ 25 ತನಕ ಥೈಲ್ಯಾಂಡ್‌ನ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನ, ಹಡಲ್ಸ್ನಲ್ಲಿ ದ್ವೀತಿಯ ಒಂದು ಬೆಳ್ಳಿ ಮತ್ತು ವೇಗ ನಡಿಗೆಯಲ್ಲಿ ತೃತೀಯ ಒಂದು ಕಂಚು ಪಡೆದುಕೊಂಡಿದ್ದಾರೆ.
ಈ ಹಿಂದೆ ಸಿಂಗಾಪುರ್, ಮಲೇಷಿಯಾ ಹಾಗೂ ಶ್ರೀಲಂಕಾ ರಾಷ್ಟçದ ಮಾಸ್ಟರ್ ಅಥ್ಲೆಟಿಕ್ಸನಲ್ಲಿ ಭಾಗವಹಿಸಿ ಚಿನ್ನ ಬೆಳ್ಳಿ ಕಂಚು ಪದಕ ವಿಜೇತರಾಗಿದ್ದಾರೆ.ಇದೇ ಫೆ.28ಕ್ಕೆ ಭಾರತಕ್ಕೆ ಮರಳಲಿದ್ದಾರೆ.
Leave a Reply