
ಕೋಟ : ಸ್ನೇಹಕೂಟ ಸಂಸ್ಥೆಯ ಸಾಮಾಜಿಕ ಕಾರ್ಯ ನಿಜಕ್ಕೂ ಶ್ಲಾಘನೀಯ ಅಲ್ಲದೆ ಅದರ ಕ್ರೀಯಾಶೀಲತೆಯನ್ನು ತೋರ್ಪಡಿಸುತ್ತದೆ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ನುಡಿದರು.
ಗುರುವಾರ ಕೋಟದ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ನಡೆದ ಸ್ನೇಹಕೂಟ ಇದರ ಎಂಟನೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ ಸಂಘಸAಸ್ಥೆಗಳು ನಿರಂತರತೆಯನ್ನು ಕಾಣಬೇಕಾದರೆ ವರ್ಷವಿಡೀ ವಿಶಿಷ್ಟವಾದ ಕಾರ್ಯಕ್ರಮಗಳೇ ಸಾಕ್ಷಿಯಾಗುತ್ತದೆ ಈ ನಿಟ್ಟಿನಲ್ಲಿ ಮಣೂರಿನ ಸ್ನೇಹಕೂಟ ಮಾದರಿಯಾಗಿದೆ ಎಂದರು.
ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಶಂಖ ನಾದದ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿ ಪ್ರಾಸ್ತಾವನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ನೇಹಕೂಟದ ಸ್ಥಾಪಕ ಸದಸ್ಯರಾದ ಮಹಾಲಕ್ಷಿ÷್ಮ ಆರ್ ಉರಾಳ,ಶುಭ ಎಸ್.ಅಡಿಗ, ಸುನಂದ ಎನ್.ಅಡಿಗ, ಗುಣವತಿ ಶೆಟ್ಟಿ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಅಧ್ಯಕ್ಷೆ ಯಶೋಧ ಸಿ.ಹೊಳ್ಳ ಇವರನ್ನು ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಂಗವಾಗಿ ಸ್ನೇಹಕೂಟ ಸಂಸ್ಥೆ ಶೈಕ್ಷಣಿಕ ಸಹಾಯಹಸ್ತ ಚಾಚಿದ ಇದೀಗ ವಿವಿಧ ರಂಗದಲ್ಲಿ ಉದ್ಯೋಗದಲ್ಲಿ ನಿರತರಾದ ಮಣೂರು ಪರಿಸರದ ನಾಲ್ವರು ಉದ್ಯೋಗಿಗಳಿಂದ ಕೆರೆಗೆ ನೀರನ್ನು ಕೆರೆಗೆ ಚೆಲ್ಲಿ ಎಂಬ ಶೀರ್ಷಿಕೆಯ ವಿಶಿಷ್ಟ ಯೋಜನೆಗೆ ಚಾಲನೆ ನೀಡಿತು.
ಮುಖ್ಯ ಅಭ್ಯಾಗತರಾಗಿ ಪತ್ರಕರ್ತ ರವೀಂದ್ರ ಕೋಟ ಉಪಸ್ಥಿತರಿದ್ದರು. ಸ್ನೇಹಕೂಟದ ಸದಸ್ಯೆ ದೀಪಿಕಾ ಸ್ವಾಗತಿಸಿದರು,ಬಹುಮಾನ ಪತ್ರವನ್ನು ಗಾಯಿತ್ರಿ ಹೊಳ್ಳ ವಾಚಿಸಿದರು. ವನೀತಾ ಉಪಾಧ್ಯ, ಸುವರ್ಣಲತಾ, ಗೌರವ ಸಮರ್ಪಣೆ ಕಾರ್ಯಕ್ರಮ ನಿರ್ವಹಿಸಿದರು.ವರದಿಯನ್ನು ಶ್ರೀದೇವಿ ಹಂದೆ ವಾಚಿಸಿದರು. ಕಾರ್ಯಕ್ರಮವನ್ನು ಸುಪ್ರಿತಾ ಪುರಾಣಿಕ್ ನಿರೂಪಿಸಿದರು.ಚಂದ್ರಿಕಾ ಭಟ್ ವಂದಿಸಿದರು. ಸ್ನೇಹಕೂಟದಿAದ ಸಾಂಸ್ಕöÈತಿಕ ಕಾರ್ಯಕ್ರಮ ವೈಭವನ್ನು ಶಿವಪ್ರಭ ಅಲ್ಸೆ,ಭಾಗೇಶ್ವರಿ ಮಯ್ಯ ನಿರ್ವಹಿಸಿದರು.ಸುಜಾತ ಬಾಯರಿ ಸಹಕರಿಸಿದರು.
ಕೋಟದ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ನಡೆದ ಸ್ನೇಹಕೂಟ ಇದರ ಎಂಟನೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸ್ನೇಹಕೂಟದ ಸ್ಥಾಪಕ ಸದಸ್ಯರಾದ ಮಹಾಲಕ್ಷ್ಮೀ ಆರ್ ಉರಾಳ, ಶುಭ ಎಸ್.ಅಡಿಗ, ಸುನಂದ ಎನ್.ಅಡಿಗ, ಗುಣವತಿ ಶೆಟ್ಟಿ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಅಧ್ಯಕ್ಷೆ ಯಶೋಧ ಸಿ.ಹೊಳ್ಳ, ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಇದ್ದರು.
Leave a Reply