
ಕೋಟ: ಸ್ನೇಹ ಕೂಟ ಮಣೂರು ಇಲ್ಲಿನ ಸದಸ್ಯರು ಮಂಗಳವಾರ ಚೈತನ್ಯ ವಿಶೇಷ ಚೇತನ ಮಕ್ಕಳ ಶಾಲೆ ಕುಂದಾಪುರ ಇಲ್ಲಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಈ ವೇಳೆ ಮಾತನಾಡಿದ ಚೈತನ್ಯ ವಿಶೇಷ ಚೇತನ ಮಕ್ಕಳ ಶಾಲೆಯ ಅಧ್ಯಕ್ಷೆ ಲೀಲಾವತಿ ಕರ್ಕಡ ವಿಶೇಷ ಚೇತನರ ಬಗ್ಗೆ ಮಾಹಿತಿ ಪಡೆದು ಆಗಮಿಸಿ ಇಲ್ಲಿನ ಮಕ್ಕಳು ಹಾಗೂ ತಾಯಿಂದರರ ಜತೆ ಸಂಭ್ರಮಿಸಿದ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಪ್ರಸ್ತುತ ವಿದ್ಯಾಮಾನದಲ್ಲಿ ಇಂಥಹ ಮಕ್ಕಳ ಬಗ್ಗೆ ಕಾಳಜಿ ತೊರಿ ಸಮಾಜಮುಖಿ ಕಾರ್ಯಗಳನ್ನು ನೀಡುವ ಸ್ನೇಹಕೂಟಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಸ್ನೇಹಕೂಟದ ಮಹಿಳೆಯರು ವಿಶೇಷ ಚೇತನ ಮಕ್ಕಳ ಜೊತೆ ಹಾಡಿ ಕುಣಿದು, ಆಟವಾಡಿ ,ಕಥೆಯ ಜೊತೆಗೆ ನರ್ತಿಸಿ ತಾವು ಸಂಭ್ರಮಿಸಿಕೊಂಡರು. ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ವಿಶೇಷ ಚೇತನ ಮಕ್ಕಳ ಅಮ್ಮಂದಿರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಅವಶ್ಯವಿರುವ ಸ್ಪೋರ್ಟ್ಸ್ ಟೀಶರ್ಟ್ಗಳನ್ನು ಸಂಘದ ವತಿಯಿಂದ ಸ್ನೇಹಕೂಟ ವಿಷ್ಣುಮೂರ್ತಿ ಮಯ್ಯ ಹಸ್ತಾಂತರಿಸಿದರು. ಹಾಗೂ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಲ್ಲರಿಗೂ ಬಹುಮಾನಗಳನ್ನು ಮಕ್ಕಳಿಗೆ ಅವಶ್ಯಕ ವಾಗಿರುವಂತಹ ಸ್ಪೋರ್ಟ್ಸ್ ಟೀಶರ್ಟ್ಸ್ ಗಳನ್ನು ಸಂಘದ ವತಿಯಿಂದ ಸ್ನೇಹಕೂಟ ವಿಷ್ಣುಮೂರ್ತಿ ಮಯ್ಯ ಹಸ್ತಾಂತರಿಸಿದರು. ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಸ್ನೇಹಕೂಟ ಮಣೂರು ಇದರ ಸಂಚಾಲಕಿ ಭಾರತಿ ವಿ.ಮಯ್ಯ ಬಹುಮಾನ ನೀಡಿ ಸಹಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು. ಸಭೆಯಲ್ಲಿ ಸ್ನೇಹಕೂಟದ ಸ್ಥಾಪಕ ಸದಸ್ಯೆ ಮಹಾಲಕ್ಷ್ಮೀ ಉರಾಳ, ಹಿರಿಯ ಸದಸ್ಯರಾದ ಸಾವಿತ್ರಿ ಮಯ್ಯ ಹಾಗೂ ಸ್ನೇಹಕೂಟದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸದಸ್ಯೆ ಸುಜಾತ ಬಾಯರಿ ನಿರ್ವಹಿಸಿದರು.
ಸ್ನೇಹ ಕೂಟ ಮಣೂರು ಇಲ್ಲಿನ ಸದಸ್ಯರು ಮಂಗಳವಾರ ಚೈತನ್ಯ ವಿಶೇಷ ಚೇತನ ಮಕ್ಕಳಿಗೆ ಅವಶ್ಯವಿರುವ ಸ್ಪೋರ್ಟ್್ಸ ಟೀಶರ್ಟ್ಗಳನ್ನು ಸಂಘದ ವತಿಯಿಂದ ಸ್ನೇಹಕೂಟ ವಿಷ್ಣುಮೂರ್ತಿ ಮಯ್ಯ ಹಸ್ತಾಂತರಿಸಿದರು. ಸ್ನೇಹಕೂಟ ಮಣೂರು ಇದರ ಸಂಚಾಲಕಿ ಭಾರತಿ ವಿ.ಮಯ್ಯ,ಸ್ನೇಹಕೂಟದ ಸ್ಥಾಪಕ ಸದಸ್ಯೆ ಮಹಾಲಕ್ಷ್ಮೀ ಉರಾಳ, ಹಿರಿಯ ಸದಸ್ಯರಾದ ಸಾವಿತ್ರಿ ಮಯ್ಯ ಮತ್ತಿತರರು ಇದ್ದರು.
Leave a Reply