Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಡುಕರೆ- ನಡು ರಾತ್ರಿಯಲ್ಲೆ ಬಿಜೆಪಿ ಪದಾಧಿಕಾರಿಯ ಬ್ಯಾನರ್‌ಗೆ ಮಾರಕಾಸ್ತ್ರದಿಂದ ಹಾನಿ!!

ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆ ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಉಡುಪಿ ಜಿಲ್ಲಾ ಬಿಜೆಪಿಯಲ್ಲಿ ಜಿಲ್ಲಾ ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು , ಅವರಿಗೆ ಅಭಿನಂದಿಸಿದ ಕುರಿತು ಆ ಪರಿಸರದ ಬಿಜೆಪಿ ಕಾರ್ಯಕರ್ತರು  ಅಭಿಮಾನಿಗಳು ಬ್ಯಾನರ್ ಅಳವಡಿಸಿದ್ದು ಅದನ್ನು  ನಡುರಾತ್ರಿ  ಕಿಡಿಗೆಡಿಗಳು ಕಾರಿನ ಮೂಲಕ ಸಂಚರಿಸಿ ಬ್ಯಾನರ್‌ಗೆ ತಲವಾರ್ ಹಾಗೂ ಇತರೆ ವಸ್ತುಗಳಿಂದ  ಹಾನಿಗೆಡವಿದ ಘಟನೆ ಇತ್ತೀಚಿಗೆ ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು ಮೂರು ಬ್ಯಾನರ್ ಗಳಿಗೆ ಹಾನಿಯುಂಟು ಮಾಡಿದ್ದು , ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ, ಪರಿಸರದ ಎಲ್ಲಾ ಸಿಸಿ ಟಿವಿ ಕ್ಯಾಮೆರಾದಲ್ಲಿ ವಿಡಿಯೋ ಸಿಕ್ಕಿದ್ದು , ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.ಅಲ್ಲದೆ ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *