Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹರ್ತಟ್ಟು -ಕ್ಯಾದ್ರಕೆರೆ ನವೀಕರಣಕ್ಕೆ ಮುಂದಾದ ಶ್ರೀ ಚಿತ್ತಾರಿ ಟ್ರಸ್ಟ್  ಭಾನುವಾರ ಚಾಲನೆ

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಹರ್ತಟ್ಟು ಪುರಾತನ ಕ್ಯಾದ್ರಕೆರೆ ನವೀಕರಣಕ್ಕೆ ಕೊನೆಗೂ ಶ್ರೀ ಚಿತ್ತಾರಿ ಟ್ರಸ್ಟ್ ಮುಂದಾಗಿದೆ. ಕ್ಯಾದ್ರಕೆರೆ ಅಜ್ಜಯ್ಯ ಪರಿವಾರ ದೈವಸ್ಥಾನದ ಹಾಗೂ ನೂರಾರು ಎಕ್ಕರೆ ಕೃಷಿ ಕಾಯಕಕ್ಕೆ ಸಂಬಂಧಿಸಿದ ಈ ಕೆರೆ ಕಳೆದ ವರ್ಷ ಹರ್ತಟ್ಟು ಗ್ರಾಮಸ್ಥರು ಹಾಗೂ ಕ್ಯಾದ್ರಕೆರೆ ದೈವಸ್ಥಾನ ಕೆಸರು ಮುಕ್ತವಾಗಿಸಲು ಶ್ರಮಿಸಿತ್ತು. ಇದೀಗ ಕೆರೆಯಲ್ಲಿರುವ ಕೊಳೆ ಗಿಡ ಹಾಗೂ ಕಸ ಕಡ್ಡಿಗಳನ್ನು ಆರಂಭಿಕ ಹಂತದಲ್ಲಿ ಮುಕ್ತಗೊಳಿಸಲು ಶ್ರೀ ಚಿತ್ತಾರಿ ಟ್ರಸ್ಟ್ ಮಣೂರು ಭಾನುವಾರ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಿತು.

ಸುಮಾರು ಅರ್ಧ ಎಕ್ಕರೆ ವಿಸ್ತೀರ್ಣ ಹೊಂದಿದ ಈ ಕೆರೆ  ಸಂಪೂರ್ಣವಾಗಿ ಪುನರ್ ನಿರ್ಮಾಣಕ್ಕೆ ಟ್ರಸ್ಟ ನೀಲ ನಕ್ಷೆ ಸಿದ್ಧಪಡಿಸಿ ಕಾರ್ಯೋನ್ಮುಖವಾಗಲಿದೆ ಎಂದು ಟ್ರಸ್ಟ್ ಮುಖ್ಯಸ್ಥ ಮಣೂರು ಗೋಪಾಲ್ ಪೈ ತಿಳಿಸಿದರು. ಈ ವೇಳೆ ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಮಣೂರು ವಿಷ್ಣುಮೂರ್ತಿ ಮಯ್ಯ ಚಾಲನೆ ನೀಡಿದರು. ಕೋಟ. ಸಿ ಎ ಬ್ಯಾಂಕ್ ಉಪಾಧ್ಯಕ್ಷ ರಾಜೀವ ದೇವಾಡಿಗ,bಪಂಚಾಯತ್ ಮಾಜಿ ಸದಸ್ಯ ಗಿರೀಶ್ ದೇವಾಡಿಗ,vಟ್ರಸ್ಟ್ ಸದಸ್ಯ ನಿತ್ಯಾನಂದ ಪ್ರಭು, ಕ್ಯಾದ್ರಕೆರೆ ದೈವಸ್ಥಾನದ ವಾಸುದೇವ ಮಯ್ಯ, ದೈವಸ್ಥಾನದ ಪ್ರಮುಖರಾದ ಚಂದ್ರ  ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಹರ್ತಟ್ಟು ಪುರಾತನ ಕ್ಯಾದ್ರಕೆರೆ ನವೀಕರಣ ಕಾರ್ಯಕ್ಕೆ ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಮಣೂರು ವಿಷ್ಣುಮೂರ್ತಿ ಮಯ್ಯ ಚಾಲನೆ ನೀಡಿದರು. ಟ್ರಸ್ಟ್ ಮುಖ್ಯಸ್ಥ ಮಣೂರು ಗೋಪಾಲ್ ಪೈ, ಕೋಟ. ಸಿ ಎ ಬ್ಯಾಂಕ್ ಉಪಾಧ್ಯಕ್ಷ ರಾಜೀವ ದೇವಾಡಿಗ,ಪಂಚಾಯತ್ ಮಾಜಿ ಸದಸ್ಯ ಗಿರೀಶ್ ದೇವಾಡಿಗ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *