• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೃಷಿ  ಆದಾಯದಿಂದ ಸಮಾಜಸೇವೆ, ಕಲಾರಾಧನೆ ಪಾರಂಪಳ್ಳಿ ರವೀಂದ್ರ ಐತಾಳ್‌ರ ವಿಶಿಷ್ಟ ಕಾರ್ಯಕ್ರಮ

ByKiran Poojary

Apr 9, 2024

ಕೋಟ: ಸಾಮಾನ್ಯವಾಗಿ ಉದ್ಯಮ ಕ್ಷೇತ್ರ ರಾಜಕಾರಣ ಸೇರಿದಂತೆ ವಿವಿಧ ರಂಗದಲ್ಲಿರುವವರು ಸೇವಾ ಚಟುವಟಿಕೆ ಹಾಗೂ ಸಹಾಯಹಸ್ತ ಚಾಚುವುದನ್ನು ಕಾಣುತ್ತೇವೆ ಆದರೆ ಇಲ್ಲೊಬ್ಬರು ಕೃಷಿ ಕಾಯಕದಿಂದ ಬಂದ ಆದಾಯದಲ್ಲಿ ಸಮಾಜಸೇವೆ,ಕಲಾರಾಧನೆಯಲ್ಲಿ ತೋಡಗಿ ಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ರವೀಂದ್ರ ಐತಾಳ್ ಇಡೀ ಪಾರಂಪಳ್ಳಿ ಹೆಚ್ಚಿನ ಕೃಷಿ ಭೂಮಿಯಲ್ಲಿ ಕೃಷಿ ಕಾಯಕ ನಡೆಸುತ್ತಿದ್ದು ಭತ್ತ,ಶೇಂಗಾ,ಉದ್ದು,ಇನ್ನಿತರ ಧಾನ್ಯಗಳನ್ನು ಬೆಳೆಸಿ ಅದರಿಂದ ಬಂದ ಲಾಭದಲ್ಲಿ ಸಾಕಷ್ಟು ವರ್ಷಗಳಿಂದ ಯಕ್ಷಕಲಾರಾಧನೆಮಾಡಿಕೊಂಡು ಜತೆಗೆ ಕೃಷಿ ಕಾಯಕ ನಡೆಸುವ ಹಿರಿಯ ಕೃಷಿಕರನ್ನು ಕಲಾವಿದರನ್ನು ಗುರುತಿದುವುದರೊಂದಿಗೆ ಸ್ಥಳೀಯ ಶಾಲೆ,ದೇಗುಲ,ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ,ಅಶಕ್ತ,ಅನಾರೋಗ್ಯ ಪೀಡಿತರಿಗೆ ನೇರವು ನೀಡುವ ವಿನೂತನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
ಪ್ರತಿವರ್ಷ ಪಾವಂಜೆ ಯಕ್ಷಗಾನ
ರವೀಂದ್ರ ಐತಾಳ್ ಎನ್ನುವ ಪ್ರಗತಿಪರ ಕೃಷಿಕ ಆರಂಭಿಕ ಕಾಲಘಟ್ಟದಲ್ಲಿ ಸ್ಥಳೀಯ ಯಕ್ಷಗಾನ ಮೇಳಗಳನ್ನು  ಸೇವೆಯಾಟವಾಗಿ ಪ್ರದರ್ಶಿಸಿ ಇದೀಗ ಕಳೆದ ನಾಲ್ಕು ವರ್ಷಗಳಿಂದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಯಕ್ಷ ಮೇಳದ ಯಕ್ಷಗಾನವನ್ನು ಪ್ರದರ್ಶನಕ್ಕೆ ವೇದಿಕೆಯಾಗಿರಿಸಿದ್ದಾರೆ.ಈ ಮೂಲಕ ಸ್ಥಳೀಯರಿಗೆ ತೆಂಕುತಿಟ್ಟಿನ ರಸರಂಗದೌತಣ ಬಡಿಸುತ್ತಿದ್ದಾರೆ.

ಕೃಷಿ ಕಾಯಕದಲ್ಲೂ ಸೈ ಎನಿಸಿಕೊಂಡಿದ್ದಾರೆ..!
ರವೀAದ್ರ ಐತಾಳ್ ಒರ್ವ ಕೃಷಿಕನಾಗಿ ಇನ್ನೊರ್ವ ಕೃಷಿಕರಿಗೆ ಮಾದರಿ ಬದುಕು ಕಾಣುತ್ತಿದ್ದಾರೆ ತನ್ನ ಪಾರಂಪಳ್ಳಿ ಕೃಷಿ ಬಯಲು ಪ್ರದೇಶದಲ್ಲಿ ತಾನು ತನ್ನ ಜತೆ ಪುತ್ರನನ್ನು ಪಳಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಸಾಧಕರಿಗೆ ಗೌರವ, ಸಹಾಯಹಸ್ತ
ಸೋಮವಾರ ತನ್ನ ಹದಿನೈದನೆ ವರ್ಷದ ಯಕ್ಷಕಲಾರಾಧನೆ ನಿಮಿತ್ತ ಪಾವಂಜೆ ಯಕ್ಷಗಾನ ಮೇಳದ ಯಕ್ಷಗಾನ ಬಯಲಾಟವನ್ನು ತನ್ನ ವಠಾರದಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಹಿರಿಯ ಕೃಷಿಕರಾದ ಗಂಗೆ ಮರಕಾಲ್ತಿ,ಹಿರಿಯ ಯಕ್ಷಗಾನ ಕಲಾವಿದ ಸಂತೋಷ್ ಕುಮಾರ್ ಧರ್ಮಸ್ಥಳ ಇವರನ್ನು ಪಟ್ಲ ಫೌಂಡೇಶನ್ ಪ್ರವರ್ತಕ ಸತೀಶ ಶೆಟ್ಟಿ ಪಟ್ಲ ಸಮ್ಮುಖದಲ್ಲಿ ಗೌರವಧನದೊಂದಿಗೆ ಸನ್ಮಾನಿಸಿದರು.

ಇದೇ ವೇಳೆ ಸರಕಾರಿ,ಅನುದಾನಿತ ಕನ್ನಡ ಮಾಧ್ಯಮ ಶಾಲೆ,ಗುಂಡ್ಮಿ ಮಾಣಿ ಚೆನ್ನಕೇಶವ ದೇಗುಲ,ಸಾಧಕ  ವಿದ್ಯಾರ್ಥಿಗಳಿಗೆ,ಅಶಕ್ತರಿಗೆ ಆರ್ಥಿಕ ನೆರವು ನೀಡಿದರು.
ಸ್ಥಳೀಯರಾದ ಶಿವಾನಂದ ಮಯ್ಯ,ಪ್ರಗತಿಪರ ಕೃಷಿಕ ರವೀಂದ್ರ ಐತಾಳ್,ಪುತ್ರ ಪ್ರಜ್ವಲ್ ಐತಾಳ್ ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಕೆ.ರಾಜಾರಾಮ್ ಐತಾಳ್ ನಿರ್ವಹಿಸಿದರು.ನಂತರ ಅಯೋಧ್ಯಾ ದೀಪ ಯಕ್ಷ ಪ್ರಸಂಗ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *