Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಾಬುಕಳ- ಚೇತನಾ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಗುರುವಂದನೆ ಕಾರ್ಯಕ್ರಮ ಆಯೋಜನೆ
ಹಳೇ ವಿದ್ಯಾರ್ಥಿಗಳ ಮೂಲಕ ಶಾಲೆ ಅಭಿವೃದ್ಧಿ – ಗಣೇಶ್ ಜಿ

ಕೋಟ: ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಮುಂಚೂಣಿಗೆ ನಿಲ್ಲಬೇಕು ಆಗ ತಾವು ಕಲಿತ ಶಾಲೆಗೆ ಗುರುವಂದನೆಯಷ್ಟೆ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಎಂದು ಶಿಕ್ಷಣ ತಜ್ಞ ಚೆಲ್ಲಮಕ್ಕಿ ಗಣೇಶ್ ಜಿ ಹೇಳಿದರು.

ಅವರು ಶನಿವಾರ ಮಾಬುಕಳದ ಚೇತನ ಪ್ರೌಢಶಾಲೆಯಲ್ಲಿ 1996ರಿಂದ96ರ ಇಸವಿಯ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ 2024 ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ ಶಾಲೆಯ ಏಳಿಗೆಗೆ ಹಳೆ ವಿದ್ಯಾರ್ಥಿ ಪಾತ್ರ ಗಣನೀಯವಾದದ್ದು ಈ ದಿಸೆಯಲ್ಲಿ  ಇಲ್ಲಿನ ಹಳೆ ವಿದ್ಯಾರ್ಥಿ ಗುರುಗಳಿಗೆ ಗುರುವಂದನೆ ಸಲ್ಲಿಸುವದರ ಮೂಲಕ  ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿಕೊಂಡಿದ್ದಾರೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಆಗಿನ ಶಿಕ್ಷಣ ಪದ್ದತಿಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸಗಳಿಗೆ ಆಗಿನ ಕಾಲದಲ್ಲಿ ಕ್ಲಿಷ್ಟಕರ ಸಮಸ್ಯೆಯ ನಡುವೆಯೂ ಮಕ್ಕಳು ಭಯ ಭಕ್ತಿಯಲ್ಲಿ ಪಾಠಪ್ರವಚನಗಳಲ್ಲಿ ಭಾಗಿಯಾಗಿದ್ದರು ಆದರೆ ಪ್ರಸ್ತುತ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಅಂಕ ಪಡೆಯುವುದೇ ಶಿಕ್ಷಣದ ನೈಜತೆಯಾಗಿದೆ.ವಿದ್ಯಾರ್ಥಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗಯಾಗಿ ಎಲ್ಲಾ ಕ್ಷೇತ್ರದ ಮೌಲ್ಯಯುತ ಜೀವನ ಅನುಸರಿಸಲು ಕರೆ ಇತ್ತರಲ್ಲದೆ ಪುನರ್ ಮಿಲನದ ಮೂಲಕ ಆಗಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವಸಲ್ಲಿಸಿಕೊಂಡಿದ್ದಾರೆ ಇದು ಪ್ರಶಂಸನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಗುರುವಂದನೆಯ ಭಾಗವಾಗಿ  ಹಿರಿಯ ನಿವೃತ್ತ ಶಿಕ್ಷಕರಾದ ವಿಘ್ನೇಶ್ವರ ಹೆಬ್ಬಾರ್,ಶಿಕ್ಷಕ ಸುರೇಂದ್ರ ವಾಗ್ಳೆ,ಚೇತನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ಗಣೇಶ್ ಜಿ.ಇವರುಗಳಿಗೆ ಗುರುವಂದನೆ ಹಾಗೂ ಶಾಲಾ ಕ್ಲರ್ಕ್ ಶಂಕರ್ ಇವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ವಿಶ್ವನಾಥ , ವಿಜಯ್ ಕುಮಾರ್, ಶ್ರೀಕರ, ಕಲಾವತಿ, ರೇಷ್ಮಾ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿಗಳು ಆಗಿನ ಶಿಕ್ಷಣ ಗುರುಗಳ ಶಿಕ್ಷಣದ ಬಗ್ಗೆ ಪ್ರಸ್ತುತ ತಮ್ಮ ಕಾರ್ಯಗಳ ಬಗ್ಗೆ ಸವಿವರವಾಗಿ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿ  ಸುನಿತಾ ಸ್ವಾಗತಿಸಿದರು ಕಾರ್ಯಕ್ರಮವನ್ನು ಶುಭ ಆಚಾರ್ ನಿರೂಪಿಸಿದರು. ಹಳೆ ವಿದ್ಯಾರ್ಥಿ ರಾಜೇಶ್ ಕೆ.ವಿ ವಂದಿಸಿದರು.

ಮಾಬುಕಳದ ಚೇತನ ಪ್ರೌಢಶಾಲೆಯಲ್ಲಿ 1996ರಿಂದ96ರ ಇಸವಿಯ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ 2024 ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ವಿಘ್ನೇಶ್ವರ ಹೆಬ್ಬಾರ್, ಶಿಕ್ಷಕ ಸುರೇಂದ್ರ ವಾಗ್ಳೆ, ಚೇತನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ಗಣೇಶ್ ಜಿ. ಇವರುಗಳಿಗೆ ಗುರುವಂದನೆ ಸ್ವೀಕರಿಸಿದರು. ಹಳೆ ವಿದ್ಯಾರ್ಥಿಗಳಾದ ವಿಶ್ವನಾಥ , ವಿಜಯ್ ಕುಮಾರ್, ಶ್ರೀಕರ, ಕಲಾವತಿ, ರೇಷ್ಮಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *