Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿದ್ಯಾರ್ಥಿಗಳನ್ನು ಗುರುತಿಸುವ ಕಾಯಕ ಶ್ಲಾಘನೀಯ – ಕೆ.ಜಗದೀಶ್ ನಾವಡ

ಕೋಟ: ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಕಾಯಕ ಶ್ಲಾಘನೀಯ ಎಂದು ಕೋಟದ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ನುಡಿದರು.
ಭಾನುವಾರ ಬೆಟ್ಟಿನಮನೆ ವಠಾರದಲ್ಲಿ ಬಾರಿಕೆರೆ ಯುವಕ ಮಂಡಲ ಕೋಟ ಇದರ ಆಶ್ರಯದಲ್ಲಿ ಪ್ರಸ್ತತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಬಾರಿಕೆರೆ ಯುವಕ ಮಂಡಲದ ಸಾಮಾಜಿಕ ಬದ್ಧತೆಯನ್ನು ಪ್ರಶಂಸಿದ ಅವರು ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿ ಪ್ರಸ್ತುತ ಪೋಷಕರು ಅಷ್ಟೆ ಪ್ರಮಾಣದಲ್ಲಿ ನೋಡಿಕೊಳ್ಳಬೇಕು ಮೊಬೈಲ್ ತಂತ್ರಜ್ಞಾನ ಕಾಲಘಟ್ಟದಲ್ಲಿ ಮಕ್ಕಳನ್ನು ಜಾಗೃತಿಯಿಂದ ಸಲಹಬೇಕಾದ ಅವಶ್ಯಕತೆ ಯನ್ನು ಮನಗಾಣಿಸಿದ ಅವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬಹು ಎತ್ತರಕ್ಕೆ ಬೆಳೆಯುವ ಕನಸು ಕಾಣುವುದರ ಜತೆಗೆ ನನಸಾಗಿಸುವ ಕಾರ್ಯ ಮಾಡಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್ ವಹಿಸಿದ್ದರು. ಇದೇ ವೇಳೆ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ಶೋಧನಾ, ನಿಶಾಂತ್ ಹಂದೆ, ಶುಭನ್,ಸಂಜನಾ, ಭಕ್ತಿ
ಪಿಯುಸಿಯಲ್ಲಿ  ವೈಷ್ಣವಿ ಕಾಂಚನ್, ಉಜ್ವಲ್ , ಅನನ್ಯ, ಮಾನ್ಯ ವಿ ಪೂಜಾರಿ, ದೀಪ್ತಿ, ದಿಶಾ, ಅನಘ ಐತಾಳ್, ವಿನ್ಯಾಸ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುಖ್ಯ ಅಭ್ಯಾಗತರಾಗಿ ನಂದಿಕೇಶ್ವರ ದೈವಸ್ಥಾನದ ಮುಕ್ತೇಸರ ಅನಂತ ಮರಕಾಲ, ಬಾರಿಕೆರೆ ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ ಕಾಂಚನ್, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಬಾರಿಕೆರೆ ಯುವಕ ಮಂಡಲದ ಗೌರವ ಸಲಹೆಗಾರ ಸಿರಾಜ್ ಸಾಹೇಬ್, ಮಾಜಿ.ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಉಪನ್ಯಾಸಕರಾದ ಕಿಶೋರ್ ಹಂದೆ, ರವಿ ಕಾರಂತ್ ಇದ್ದರು. ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್ ಪ್ರಾಸ್ತಾವನೆಸಲ್ಲಿಸಿದರು. ಬಾರಿಕೆರೆ ಯುವಕ ಮಂಡಲದ ಸದಸ್ಯ ಪ್ರತಾಪ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಬಾರಿಕೆರೆ ಯುವಕ ಮಂಡಲ ಕೋಟ ಇದರ ಆಶ್ರಯದಲ್ಲಿ ಪ್ರಸ್ತತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಶೋಧನಾ, ನಿಶಾಂತ್ ಹಂದೆ, ಶುಭನ್, ಸಂಜನಾ, ಭಕ್ತಿ ಪಿಯುಸಿಯಲ್ಲಿ  ವೈಷ್ಣವಿ ಕಾಂಚನ್, ಉಜ್ವಲ್ , ಅನನ್ಯ, ಮಾನ್ಯ ವಿ ಪೂಜಾರಿ, ದೀಪ್ತಿ, ದಿಶಾ, ಅನಘ ಐತಾಳ್, ವಿನ್ಯಾಸ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೋಟದ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ನಂದಿಕೇಶ್ವರ ದೈವಸ್ಥಾನದ ಮುಕ್ತೇಸರ ಅನಂತ ಮರಕಾಲ,ಬಾರಿಕೆರೆ ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ ಕಾಂಚನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *