Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ- ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಆಯೋಜನೆ

ಕೋಟ: ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಸಾಸ್ತಾನ ಮಹಿಳಾ ಮಂಡಲ  ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ, ಬ್ರಹ್ಮಾವರ, ಉಡುಪಿ ಇವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು 16ರಿಂದ 25ರ ತನಕ ಸಮಯ  ಪೂರ್ವಾಹ್ನ 10 ರಿಂದ ಅಪರಾಹ್ನ 1:00ರ ವರೆಗೆ  ಪಾಂಡೇಶ್ವರ ಗ್ರಾಮ ಪಂಚಾಯತ್ ನಲ್ಲಿ  ಪಂಚಾಯತ್ ವ್ಯಾಪ್ತಿಯ ಎಲ್ಲಾ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ
ಶಿಬಿರದಲ್ಲಿ ಕವನ ರಚನೆ, ರಂಗೋಲಿ, ಮೋಜಿನ ಗಣಿತ, ನಾಟಕ, ಚಿತ್ರಕಲೆ, ವಿಕಸನ ಆಟಗಳು, ಯೋಗ, ಪರಿಸರ ಸಂರಕ್ಷಣೆ, ಕ್ರಾಫ್ಟ್, ಹತ್ತರ ಗಮ್ಮತ್ತು ಗುಂಪು ಸ್ಪರ್ಧೆ, ವೈಯುಕ್ತಿಕ ಸ್ಪರ್ಧೆಗಳು ನಡೆಯಲಿದೆ ಎಂದು ಗ್ರಂಥಪಾಲಕಿ ಜ್ಯೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *