Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕ ಸಾ ಪ ಉಡುಪಿ ತಾಲೂಕು ಘಟಕದಿಂದ ಮನೆಯೇ ಗ್ರಂಥಾಲಯ ವಿನೂತನ ಕಾರ್ಯಕ್ರಮ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ  ‘ಮನೆಯೇ ಗ್ರಂಥಾಲಯ’ ಎಂಬ ವಿನೂತನ ಕಾರ್ಯಕ್ರಮಕ್ಕೆ  ಕನ್ನಡದ ಹಿರಿಯ ವಿದ್ವಾಂಸ ನಾಡೋಜ ಡಾ ಕೆ. ಪಿ. ರಾವ್ ಅವರು ಇದೇ ಬರುವ ಮಂಗಳವಾರ ಸಂಜೆ 5:30ಕ್ಕೆ ಉಡುಪಿಯ ಬೈಲೂರಿನಲ್ಲಿರುವ ಶಶಿಪ್ರಭಾ  ಮತ್ತು ವಿವೇಕಾನಂದ ಅವರ ಮನೆಯಲ್ಲಿ ಚಾಲನೆ ನೀಡಲಿದ್ದಾರೆ.

ಮನೆ ಮಂದಿರ ಅಂಗಡಿ ಆಸ್ಪತ್ರೆ ಬ್ಯಾಂಕು ಇನ್ನಿತರ ಸ್ಥಳಗಳಲ್ಲಿ ಗ್ರಂಥಾಲಯ ಸ್ಥಾಪನೆಗೊಳ್ಳುವ ಮೂಲಕ ಓದುವ ಹವ್ಯಾಸ ಬೆಳೆಸುವ ಒಂದು ವಿನೂತನ ಕಾರ್ಯಕ್ರಮವೇ ಮನೆಯೇ ಗ್ರಂಥಾಲಯ.

ಕನ್ನಡದ ಹಿರಿಯ ಹಾಗೂ ಕಿರಿಯ ಲೇಖಕರ, ಸಾಹಿತಿಗಳ ಪುಸ್ತಕಗಳನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ಈ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರವಾಗುತ್ತದೆ ಎಂದು ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ., ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

98452 40309

Leave a Reply

Your email address will not be published. Required fields are marked *