• Sun. Jun 23rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಪಾಂಡೇಶ್ವರ- ಯುವ ಸಮುದಾಯ ಪರಿಸರದ ಬಗ್ಗೆ ಆಸಕ್ತಿ ತೋರಬೇಕು – ರವೀಂದ್ರ ಕೋಟ
ಪಾಂಡೇಶ್ವರ ಗ್ರಾ.ಪಂ, ಗ್ರಂಥಾಲಯದ ಬೇಸಿಗೆ ಶಿಬಿರ

ByKiran Poojary

May 22, 2024

ಕೋಟ: ಯುವ ಸಮುದಾಯ ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.

ಬುಧವಾರ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ, ಬ್ರಹ್ಮಾವರ, ಇವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ ಪ್ರಸ್ತುತ ವಿದ್ಯಾಮಾನಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ, ಪರಿಸರದ ರಸ್ತೆಗಳಲ್ಲಿ ತ್ಯಾಜ್ಯದ ಕೊಂಪೆಯಾಗುತ್ತಿರುವುದು ,ಹೊಳೆ ತೊರೆ,ಸಮುದ್ರದಲ್ಲಿ ತ್ಯಾಜ್ಯಗಳು ಲೀನಗೊಂಡು ಮಲಿನಗೊಳ್ಳುತ್ತಿರುವ ಬಗ್ಗೆ ,ವಿಪರೀತ ತಾಪಮಾನಗೊಂಡ ಹಿನ್ನಲೆಯಲ್ಲಿ ಬಗ್ಗೆ ಸವಿವರವಾಗಿ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರಲ್ಲದೆ ಕಾಡು ಕಡಿದು ಕಾಂಕ್ರೀಟ್ ಕಾಡು ಸೃಷ್ಟಿಸಿ, ಉಷ್ಣತೆ ದಿನದಿಂದ ದಿನಕ್ಕೆ ಏರಿಕೆಗೊಳ್ಳುತ್ತಿರುವುದಕ್ಕೆ ಪರಿಹಾರವಾಗಿ ಮನೆ ಮನೆಯಲ್ಲಿ , ರಸ್ತೆಯ ಇಕ್ಕೇಲಗಳಲ್ಲಿ ಗಿಡನೆಟ್ಟು ಪೋಷಿಸುವ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.ಆಧುನಿಕ ಕಾಲಘಟ್ಟದಲ್ಲಿ ಕುಡಿಯುವ ನೀರಿನ ಆಹಕಾರ ಅಂತರ್ಜಲ ಮಟ್ಟ ದೈಯನೀಯ ಸ್ಥಿತಿ ತಲುಪಿರುವುದು ಹಾಗೇ ಮಳೆಗಾಲದಲ್ಲಿ ಮಳೆನೀರು ಕೊಯ್ಲು ಅನುಷ್ಠಾನ,ನೀರು ಮಿತವಾಗಿ ಬಳಸುವ ಕುರಿತು ಸಮಗ್ರ ಮಾಹಿತಿ,ಮಕ್ಕಳ ಆರೋಗ್ಯದಲ್ಲಿ ಜಂಗ್‌ಪುಡ್ ಹಾನಿಕರ ,ಮೊಬೈಲ್  ಬಳಕೆಯಿಂದಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಶಿಬಿರಾರ್ಥಿಗಳಿಗೆ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಗಣೇಶ್. ಜಿ. ಚಲ್ಲೆಮಕ್ಕಿ, ಅರಿವು ಗ್ರಂಥಾಲಯದ ಜ್ಯೋತಿ , ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯೆ ಸುಜಾತ ವೆಂಕಟೇಶ್ ,ಸಂಜೀವಿನಿ ಒಕ್ಕೂಟದ ಉಷಾ ಗಣೇಶ್ ಉಪಸ್ಥಿತರಿದ್ದರು.

ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ, ಬ್ರಹ್ಮಾವರ, ಇವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ ಪತ್ರಕರ್ತ ರವೀಂದ್ರ ಕೋಟ ಮಾತನಾಡಿದರು. ಶಿಕ್ಷಣ ತಜ್ಞ ಗಣೇಶ್. ಜಿ. ಚಲ್ಲೆಮಕ್ಕಿ, ಅರಿವು ಗ್ರಂಥಾಲಯದ ಜ್ಯೋತಿ ,ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯೆ ಸುಜಾತ ವೆಂಕಟೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *