• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಯಕ್ಷಲೋಕ : ಯಕ್ಷರಂಗದ ವೇಷದಾರಿಯಾಗಿ ಮೆರೆದ ದಾರಿಮಕ್ಕಿ ನಾರಾಯಣ ಮಯ್ಯ

ByKiran Poojary

May 24, 2024

ಯಕ್ಷರಂಗದ ವೇಷದಾರಿಯಾಗಿ ಮೆರೆದ ದಾರಿಮಕ್ಕಿ ನಾರಾಯಣ ಮಯ್ಯರು, ಯಕ್ಷಗಾನದಲ್ಲಿ ಸಮರ್ಥ ವೇಷಧಾರಿಯಾಗಿ ಭಾಗವತಿಗೆ ಮತ್ತು ನೂರಾರು ಸಂಘಗಳನ್ನು ಕಟ್ಟಿ ಸಮರ್ಥ ಗುರುಗಳಾಗಿ ತನ್ನ ಮಕ್ಕಳನ್ನು ವೇಷದಾರಿಯಾಗಿ ಮಾಡಿದ ಶ್ರೀಯುತ ದಾರಿಮಕ್ಕಿ ನಾರಾಯಣ ಮಯ್ಯರು, ಕುಂದಾಪುರ ತಾಲೂಕಿನ ಬೈಂದೂರು ಯಡ್ತರೆ ಎಂಬಲ್ಲಿ ಶ್ರೀಯುತ ಸುಬ್ರಾಯಮಯ್ಯ ಮತ್ತು ಸೀತಮ್ಮನವರ ಪ್ರಥಮ ಸುಪುತ್ರನಾಗಿ ಪ್ರಭು ಶ್ರೀರಾಮಚಂದ್ರರ ನಕ್ಷತ್ರವಾದ ಪುನರ್ವಸು ಎಂಬ ಜನ್ಮ ನಕ್ಷತ್ರದಲ್ಲಿ ಜನಿಸಿದರು.

ಎಲೆಕ್ಟ್ರಿಕಲ್ ಡಿಪ್ಲೋಮಾ ಇಂಜಿನಿಯರ್ ಮಾಡಿ, ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಉದ್ಯೋಗ ಮಾಡಿ ತಾಯಿಯ ಕರೆಯ ಮೇರೆಗೆ ಸ್ವಯಂ ನಿವೃತಿ ಪಡೆದು ದಾರಿಮಕ್ಕಿಯಲ್ಲಿ  ಸ್ವಯಂ ಆಸ್ತಿ ಹಾಗೂ ಗ್ರಹ ನಿರ್ಮಾಣ ಮಾಡಿ ಬಂದು ನೆಲೆಸಿ ಕೃಷಿ ಹಾಗೂ ವ್ಯವಹಾರ ಪ್ರಾರಂಭ ಮಾಡಿದರು. ನಂತರ ಹವ್ಯಾಸಿ ವೇಷ ದಾರಿಗಳಾಗಿ ತಂದೆ ಹಾಗೂ ಚಿಕ್ಕಪ್ಪ ನರಸಿಂಹ ಮೈಯರ್ರಿಂದ ಯಕ್ಷಗಾನಕ್ಕೆ ಆಕರ್ಷಿತರಾದರು, ನಂತರ ಹೆರಂಜಾಲು ವೆಂಕಟರಮಣ ಗಾಣಿಗರಿಂದ ಯಕ್ಷಗಾನ ನೃತ್ಯ ಭಾಗವತಿಗೆ ಕಲಿತರು, ಕಳವಾಡಿ ಯಕ್ಷಗಾನ ಸಂಘದಲ್ಲಿ ಗೆಜ್ಜೆ ಕಟ್ಟಿ ಯಕ್ಷಗಾನ ರಂಗಕ್ಕೆ ಪಾದರ್ಪಣ ಮಾಡಿದರು,ಶ್ರೀಮದ್ ರಾಮಾಯಣ ಹಾಗೂ 32 ಪುಸ್ತಕ ಇರತಕ್ಕಂತಹ ಶ್ರೀಮದ್ ಮಹಾಭಾರತ ಗ್ರಂಥವನ್ನು ಪಠನ ಮಾಡಿ ಜ್ಞಾನಾರ್ಜನೆಯನ್ನು ಪಡೆದಿರುತ್ತಾರೆ, ಜಾಂಬವ, ಕರ್ಣ, ಅರ್ಜುನ, ಕೌರವ, ವಿಜಯದ ಭೀಷ್ಮ, ಬ್ರಹ್ಮ,ಪರ್ವದ ಬೀಷ್ಮ, ಹೀಗೆ ಹಲವಾರು ಮೇರು ಪಾತ್ರಗಳಿಗೆ ಜೀವ ತುಂಬಿ ಯಕ್ಷರಂಗದಲ್ಲಿ ಮೆರೆದಿದ್ದಾರೆ.

ಯಕ್ಷಗಾನದಲ್ಲಿ ಗುರುಗಳಾಗಿ 1996ರಲ್ಲಿ ನಮ್ಮ ಹೇರ್ ಗುಡಿ ಸಂಘದಲ್ಲಿ ಭಾಗವಹಿಸಿ ಹಲವಾರು ಯಕ್ಷಗಾನ ಗಳನ್ನು ನಡೆಸಿಕೊಟ್ಟಿದ್ದಾರೆ, ಅಲ್ಲದೆ ಗುಡೆ ದೇವಸ್ಥಾನ, ಕಾಲ್ತೊಡು, ಚಿತ್ರಪುರ, ಶಿರಾಲಿ, ಹಳಗೇರಿ,  ಮೆಟ್ಟಿನಹೊಳೆ, ಶಿರೂರ್,ಸುರಭಿ, ಬೈಂದೂರು, ಮುಂತಾದ ಸಂಘ ಸಂಸ್ಥೆಗಳಲ್ಲಿ ಗುರುಗಳಾಗಿ ವೇಷದರಿಯಾಗಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ, ಅಲ್ಲದೆ ಹಲವಾರು ಶಾಲೆಗಳಲ್ಲಿ ಯಕ್ಷಗಾನದ ಸೇವೆ ಸಲ್ಲಿಸಿದ್ದಾರೆ, ಎಲೆ ಮರೆಯ ಕಾಯಿಯಾಗಿ ಯಕ್ಷಗಾನದಲ್ಲಿ ಮರೆದಿದ್ದಾರೆ, ಅಲ್ಲದೆ ತೀರ್ಥರೂಪದ ರಾಮಚಂದ್ರ ಭಟ್ಟರ ಸಂಸ್ಕರಣ ಪ್ರಶಸ್ತಿ ಕೊಡಲಾಗಿದೆ, ಅಲ್ಲದೆ ಹಲವಾರು ಸಂಘ ಸಂಸ್ಥೆ ಹಾಗೂ ಶಾಲೆಗಳಲ್ಲಿ ಸನ್ಮಾನಿತರಾಗಿ ಹೆಗ್ಗಳಿಕೆ ಪಾತ್ರರಾಗಿದ್ದಾರೆ, 1977ರಲ್ಲಿ ವೇದ ಫಾರಂಗತರಾದ  ಶ್ರೀಯುತ ಕೃಷ್ಣ ಭಟ್ ಮತ್ತು ಕೃಷ್ಣ ವೇಣಿ ಪುತ್ರಿಯಯಾದ ರುಕ್ಮಿಣಿ ಎಂಬುವರನ್ನು ಹಿರಿಯರ ಸಮ್ಮುಖದಲ್ಲಿ ಧರ್ಮಪತ್ನಿಯಾಗಿ ಸ್ವೀಕರಿಸುತ್ತಾರೆ, ದೈವತ ಅನುಗ್ರಹದಿಂದ ಇವರಿಗೆ ಉತ್ತಮ ಸಂಸ್ಕಾರ ಇರುವಂತಹ ಗಂಡು ಮಕ್ಕಳನ್ನು ಮತ್ತು ಹೆಣ್ಣು ಮಕ್ಕಳನ್ನು ಪಡೆದಿರುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ವಿದ್ಯಾ ಶಿಕ್ಷಣವನ್ನು ಕೊಟ್ಟಿರುತ್ತಾರೆ, ಅವರಲ್ಲಿ ಪ್ರಸ್ತುತ ಪ್ರಸನ್ನ ಮಯ್ಯ ಎನ್ನುವರು ಹೆಸರಾಂತ ಗಣಿತಶಾಸ್ತ್ರ ಉಪನ್ಯಾಸಕರು, ಮತ್ತು ಗೀತ ಮಯ್ಯ, ಹಾಗೂ ಪ್ರಕಾಶ್ ಮಯ್ಯ,  ಎನ್ನುವರು ವೃತ್ತಿಯಲ್ಲಿ ದೊಡ್ಡ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ  ಕೆಲಸ ಮಾಡುತ್ತಿದ್ದಾರೆ, ಸಾತ್ವಿಕರಾಗಿ ದೇವರ ಆರಾಧಕರಾಗಿ ಆಸ್ತಿಕರಾಗಿ ತಂದೆ ತಾಯಿಯಾದಂತಹ ಶ್ರೀಯುತ ನಾರಾಯಣ ಮಯ್ಯ ಮತ್ತು ಶ್ರೀಮತಿ ರುಕ್ಮಿಣಿ ಮಯ್ಯರ ಘನತೆ ಹಾಗೂ ಗೌರವವನ್ನು ಎತ್ತಿ ಹಿಡಿದಿರುತ್ತಾರೆ, ಶ್ರೀಯುತ ನಾರಾಯಣಮಯ್ಯ ಇವರ ಧರ್ಮಪತ್ನಿಯಾದ ಶ್ರೀಮತಿ ರುಕ್ಮಿಣಿ ಮಯ್ಯರು ಕೂಡ ಶ್ರೀಯುತರಿಗೆ  ತಕ್ಕ ಪತ್ನಿಯಾಗಿ ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿ ಮನೆಗೆ ಬರುವ ಎಲ್ಲಾ ಅತಿಥಿಯರಿಗೆ ಅನ್ನ  ಆಹಾರ ಹಾಗೂ ಪಾನಿಯಗಳನ್ನು ನೀಡುತ್ತಾ ಶ್ರೀಯುತರ ಘನತೆಗೆ ಗೌರವವನ್ನು ಹೆಚ್ಚಿಸಿರುತ್ತಾರೆ.

ಶ್ರೀಯುತರು ಕೇವಲ ಯಕ್ಷರಂಗ ಕ್ಷೇತ್ರದಲ್ಲಿ ಮೇರು ವ್ಯಕ್ತಿಯಾಗಿರದೇ  ಕುಟುಂಬದಲ್ಲಿಯೂ ಸಹ ಒಬ್ಬ ಜವಾಬ್ದಾರಿಯುತ ಗ್ರಹಸ್ತರಾಗಿ, ಗ್ರಹಿಣಿ ಶ್ರೀಮತಿ ರುಕ್ಮಿಣಿ.ಮೈಯರ ಜೊತೆಗೆ ಇವರು ತಂದೆ ತಾಯಿಯ ಸೇವೆಯನ್ನು ಮಾಡುತ್ತ ಎಲ್ಲಾ ತಮ್ಮಂದರಿಗೂ ಉತ್ತಮ ವಿದ್ಯಾ ಶಿಕ್ಷಣವನ್ನು ಕೊಡಿಸಿ, ಉಪನಯನ ಮದುವೆ ಎನ್ನುವ ಉತ್ತಮ ಸಂಸ್ಕಾರವನ್ನು ಮಾಡಿಸಿರುತ್ತಾರೆ, ಹೀಗೆ ಶ್ರೀಮತಿ ರುಕ್ಮಿಣಿಯರು ಮತ್ತು ಶ್ರೀಯುತ ನಾರಾಯಣ. ಮೈಯರು ಕೇವಲ ಅವರ ವೈಯುಕ್ತಿಕ ಸಂಸಾರವಲ್ಲದೆ ನಿಸ್ವಾರ್ಥದಿಂದ ಅವರ ತಮ್ಮಂದಿರಿಗೆಲ್ಲರಿಗೂ ಹಾಗೂ ಕುಟುಂಬದವರ ಹಲವಾರು ಉಪನಯನ ಮದುವೆ ಎನ್ನುವ ಸಂಸ್ಕಾರವನ್ನು ಸಹ ಮಾಡಿರುತ್ತಾರೆ, ಶ್ರೀಯುತರು ಪ್ರತಿ ವರ್ಷ ಅವರ ಸ್ವಗ್ರಹದಲ್ಲಿ  ಗಣಹೋಮ, ದುರ್ಗಾ ಹೋಮ, ಚಂಡಿಕಾ ಹೋಮ, ಎನ್ನುವ ಯಜ್ಞ ಯಾಗಾದಿಗಳನ್ನು ಮಾಡುತ್ತ ದೇವರ ಆರಾಧಿಕರಾಗಿಯೂ ಆಸ್ತಿಕರಾಗಿಯೂ ಪಂಚಾಯಿತ್ ಅಧ್ಯಕ್ಷರಾಗಿಯೂ ಸಮಾಜಕ್ಕೂ ಹಾಗೂ ಸಮಾಜದ ಜನರ ಒಳಿತನ್ನು ಬಯಸುತ್ತಾ ಮತ್ತು ಕುಟುಂಬದ ಜನರ ಒಳಿತನ್ನು ಬಯಸುತ್ತಾ ನಿಸ್ವಾರ್ಥ ಜೀವನವನ್ನು ನಡೆಸಿದ್ದಾರೆ .

ಶ್ರೀಯುತ  ನಾರಾಯಣ ಮಯ್ಯರು  ಕೇವಲ ಯಕ್ಷಗಾನದಲ್ಲಿ ಪ್ರತಿಭಾನ್ವಿತ ಮೇರು ನಟ

ಹಾಗೂ ಭಾಗವತರಾಗಿರದೆ ಹೀಗೆ  ಸಮಾಜದಲ್ಲಿಯೂ ಕೂಡ ಉತ್ತಮ ಸತ್ ಪ್ರಜೆಯಾಗಿ ಯಾವ ಕಳಂಕ ಚ್ಯುತಿ ಇಲ್ಲದೆ ನಿಷ್ಕಳಂಕರಾಗಿ ಜೀವನವನ್ನು ನಡೆಸಿದ್ದಾರೆ,. ಕುಟುಂಬದಲ್ಲಿ ಆಗಲಿ ಸಮಾಜದಲ್ಲಿ ಆಗಲಿ ಯಕ್ಷಗಾನದಲ್ಲಿ ಆಗಲಿ ಒಮ್ಮೆ ಯಾರಾದರೂ ನಿಂದನೆ ಬಂದಿದ್ದರೆ ಅದನ್ನು ಸಹಿಸಿಕೊಳ್ಳುತ್ತಾ ಪ್ರಭು ಶ್ರೀರಾಮಚಂದ್ರ ಜೀವನದ ಆದರ್ಶ ವನ್ನು ಅಳವಡಿಸಿಕೊಳ್ಳುತ್ತಾ  ಯಾರೊಂದಿಗೂ ಯಾವ ದ್ವೇಷವನ್ನು ತಾಳದೆ ಯಾರನ್ನು ನಿಂದಿಸದೆ ಸತ್ಯ ಧರ್ಮ ನಿಷ್ಠೆ ಸಾತ್ವಿಕ ಹಾಗೂ ಆಸ್ತಿಕ ಗುಣಗಳನ್ನು ಮತ್ತು ಜೀವನದಲ್ಲಿ ರೂಡಿಸಿಕೊಳ್ಳುತ್ತಾ ಮತ್ತೊಬ್ಬರಿಗೆ ಆದರ್ಶ.ಪ್ರಾಯರಾಗಿ ಶ್ರೀಯುತ ನಾರಾಯಣಮಯ್ಯ ಮತ್ತು ಶ್ರೀಮತಿ ರುಕ್ಮಿಣಿ ಮಯ್ಯರು ಸಮಾಜಕ್ಕೆ ಒಂದು ಮಾದರಿ ದಂಪತಿಗಳಾಗಿ ಸರಳ ಜೀವನವನ್ನು ನಡೆಸಿದ್ದಾರೆ .

ಸತತವಾಗಿ ಯಕ್ಷಗಾನ ಸೇವೆ ಸಲ್ಲಿಸುತ್ತಿರುವಾಗ ಅನಾರೋಗ್ಯಕ್ಕೆ ಒಳಗಾದಾಗ ಪ್ರಸ್ತುತ ಇವಾಗ ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಾದ ವೃತ್ತಿಪರ ಇಂಜಿನಿಯರ್ ಆಗಿರತಕ್ಕಂತ ಗೀತಾ ಮಯ್ಯ, ಮತ್ತು ಪ್ರಕಾಶ, ನಾರಾಯಣ ಮಯ್ಯ, ಇವರ ಜೊತೆಯಲ್ಲಿ ವಾಸವಾಗಿದ್ದಾರೆ, ಇಂತಹ ಮಹಾನ್ ಕಲಾವಿದರಾದ  ಶ್ರೀಯುತ ನಾರಾಯಣಮಯ್ಯ ಹಾಗೂ ರುಕ್ಮಿಣಿ ಮಯ್ಯರನ್ನು ದಂಪತಿ,ಸಮೇತರನ್ನು ಅವರ ಮಕ್ಕಳಾದಂತ ಗೀತಾಮಯ್ಯ ಹಾಗೂ ಪ್ರಕಾಶ ನಾರಾಯಣಮಯ್ಯ, ಇವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಇಳೆವಯಸ್ಸಿನಲ್ಲಿಯೂ ಸಹ ಹಲವಾರು ತೀರ್ಥಯಾತ್ರೆಗಳನ್ನು ಮಾಡಿಸಿರುತ್ತಾರೆ ಅದರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ, ಮುಕ್ತಿನಾಥ ಪಶುಪತಿನಾಥ ಯಾತ್ರೆ, ದ್ವಾದಶ ಜ್ಯೋತಿರ್ಲಿಂಗ ಯಾತ್ರೆ, ವಿಷ್ಣು ದಿವ್ಯ ದೇಶಂ ಯಾತ್ರೆ,ಶಕ್ತಿ ಪೀಠ ಯಾತ್ರೆ,ಅಯೋಧ್ಯ ನೈಮಿಷಾರಣ್ಣ್ಯಾ ಯಾತ್ರೆ, ಕಾಶಿ ಚಿತ್ರಕೂಟ ಯಾತ್ರೆ, ಗಯಾ ಪ್ರಯಾಗ ಯಾತ್ರೆ,ಕುಂಭ ಮೇಳಯಾತ್ರೆ,ಮಥುರೆ ಯಾತ್ರೆ, ವೃಂದಾವನ ಯಾತ್ರೆ,  ಚಾರ್ ದಾಮ್ ಯಾತ್ರೆ, ಛೋಟಾ ಚಾರ್ ದಾಮ್ ಯಾತ್ರೆ,ಪಂಚ ಕೆದಾರ ಯಾತ್ರೆ, ಪಂಚ ಬದರಿ ಯಾತ್ರೆ,ಪಂಚ ದ್ವಾರಕ ಯಾತ್ರೆ,ಶ್ರೀ ರಂಗ ಮಧುರೈ ಯಾತ್ರೆ, ತ್ರಿ ಶ್ರೀರಂಗ,ಆದಿ ಮಧ್ಯ ಮತ್ತು ಅಂತ್ಯರಂಗ ಯಾತ್ರೆ, ಮಧುರೈ ರಾಮೇಶ್ವರಂ ಯಾತ್ರೆ, ಕಾವೇರಿಯತ್ರೆ,ಧರ್ಮಸ್ಥಳ ಸುಬ್ರಹ್ಮಣ್ಯ ಯಾತ್ರೆ, ಮಂತ್ರಾಲಯ ತಿರುಪತಿ ಯಾತ್ರೆ, ಕಾಳಹಸ್ತಿಯಾತ್ರೆ, ಶ್ರೀಶೈಲಂ ಅಹೋಬಲಯಾತ್ರೆ,ಪುರಿಜಗನ್ನಾಥಯಾತ್ರೆ, ಉಜ್ಜಯಿನಿಯಾತ್ರೆ, ಪಂಡರಪುರಯಾತ್ರೆ,ಸಪ್ತ ಪುಣ್ಣ್ಯಾ ಸರೋವರ ಯಾತ್ರೆ,ಸಪ್ತ ಪುಣ್ಯ ನದಿಗಳ ಯಾತ್ರೆ,ಪ್ರಭು ಶ್ರೀ ರಾಮಚಂದ್ರ ನಡೆದು ಬಂದ ದಾರಿಯಾತ್ರೆ,ಹೀಗೆ ಹತ್ತು ಹಲವು ಯಾತ್ರೆ ಗಳನ್ನು ಅಖಂಡ ಭಾರತದ ಕನ್ಯಾಕುಮಾರಿ ಯಿಂದ, ಶ್ರೀನಗರದವರೆಗೂ ಸರಿಸುಮಾರು ಎಲ್ಲಾ ತೀರ್ಥಯಾತ್ರೆ ಹಾಗೂ ತೀರ್ಥಕ್ಷೇತ್ರಗಳ ದರ್ಶನವನ್ನು ಮಾಡಿಸಿರುತ್ತಾರೆ, ಪ್ರಸ್ತುತ ಇಳೆ ವಯಸ್ಸಿನಲ್ಲಿ ಧರ್ಮ ಪತ್ನಿ ಶ್ರೀಮತಿ ರುಕ್ಮಿಣಿ ಯರ ಜೊತೆಗೆ ಹಾಗೂ ಮಗಳು ಮತ್ತು ಮಗನ ಜೊತೆಗೆ ಎಲ್ಲಾ ತೀರ್ಥಯಾತ್ರೆ ಮಾಡುತ್ತಾ ಪುಣ್ಯ ನದಿ ಮತ್ತು ಪುಣ್ಯ ಸರೋವರಗಳ ತೀರ್ಥ ಸ್ನಾನ ಹಾಗೂ  ತೀರ್ಥಕ್ಷೇತ್ರ ದರ್ಶನಂ ಮಾಡುತ್ತಾ ಸಂತೃಪ್ತ  ಜೀವನವನ್ನು ಕಳೆದಿರುತ್ತಾರೆ ಇವರ ಸತ್ಯ ಧರ್ಮ ನಿಷ್ಠೆ ದೇವರ ಆರಾಧನೆ ಹಾಗೂ ದೇವರ ಅನುಗ್ರಹದಿಂದ ಮಕ್ಕಳ ಜೊತೆಗೆ ಮತ್ತು ಧರ್ಮ ಪತ್ನಿ ಯೊಂದಿಗೆ ಸಂತುಷ್ಟ ಜೀವನವನ್ನು ನಡೆಸುತ್ತಾ ಇಳೆ ವಯಸ್ಸಿನಲ್ಲಿ ಯಾತ್ರೆ ಮಾಡುತ್ತಾ ಜೀವನವನ್ನು ನಡೆಸುತ್ತಿರುವತ್ತಾರೆ, ವೇದದಲ್ಲಿ ಹೇಳಿರುವಂತೆ ಗ್ರಹಸ್ತ ಕ್ಷೆತ್ರ ಸುತ ಆಪ್ತ ವಿತ್ಹಹ. ಎನ್ನುವ ವೇದ ವಾಕ್ಯದಂತೆ ಜೀವನವನ್ನು ನಡೆಸುತ್ತಿದ್ದಾರೆ.

ಈಗಿನ ಪ್ರಪಂಚದಲ್ಲಿ ತಂದೆ ತಾಯಿಯರು ಅನಾರೋಗ್ಯಕ್ಕೆ ಒಳಗಾದ ತಂದೆ ತಾಯಿಯರನ್ನು ದೂರ ತಳ್ಳುವ ಮಕ್ಕಳೇ ಹೆಚ್ಚು  ಆದರೆ ಇವರ ಮಕ್ಕಳಾದ ಪ್ರಕಾಶ್ ನಾರಾಯಣಮಯ್ಯ ಗೀತ ಮಯ್ಯ ಇವರು ಸೇವೆ , ಮತ್ತು,ಇಷ್ಟೊಂದು ತೀರ್ಥಯಾತ್ರೆ ಮಾಡಿಸಿದ್ದಾರೆ, ಅಂದರೆ ಇವರು ಮಾಡಿದ ಪುಣ್ಯ, ದಾನ, ಧರ್ಮ,ನಿಷ್ಠೆ, ದೇವರ ಮೇಲಿರುವ ಭಕ್ತಿಯೇ ಇವರಿಗೆ, ಸೌಭಾಗ್ಯ ತಂದಂತಾಯಿತು. ಶ್ರೀಯುತ್ತ ನಾರಾಯಣಮೈಯರಿಗೆ ಶ್ರೀಮತಿ ರುಕ್ಮಿಣಿ ಮೈಯರಿಗೆ.ಏತೇಬೇರು ಶ್ರೀದುರ್ಗಾಪರಮೇಶ್ವರಿ ಗುಡೆಮಹಾಲಿಂಗೇಶ್ವರಸಾಲಿಗ್ರಾಮ ಶ್ರೀನರಸಿಂಹ ಕಳವಾಡಿ ಈಶ್ವರ ಬ್ರಹ್ಮಲಿಂಗೇಶ್ವರ  ಎಲ್ಲಾ ದೈವ ದೇವರು ಇವರಿಗೆ ಆಯುರಾರೋಗ್ಯ ಆಯುಷ್ಯ ಹೆಚ್ಚು ಕೊಟ್ಟು ಇವರ ಸೇವೆ ಮಾಡುತ್ತಿರುವ ಮಕ್ಕಳಿಗೂ ಆಯುರ್ ಆರೋಗ್ಯ ಮತ್ತು ಆಯುಷ್ಯ ಮತ್ತು ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಹೆಸರು ಮಾಡುವಂತರಾಗುಹಾಗೆ ಶ್ರೀ ದೇವರು ಅನುಗ್ರಹಿಸಲಿ ಎಂದು,ಯಕ್ಷಗಾನದ ಕಲಾವಿದರಾದ ನಾವು ಮತ್ತು ಅವರ ಶಿಷ್ಯರು ಪ್ರಾರ್ಥಿಸುತ್ತಿದ್ದೇವೆ,

ಸಂಗ್ರಹ.,ಕೃಪೆ. ಹೊಸ ಕಿರಣ ನ್ಯೂಸ್,

ಕಿರಣ್ ಪೂಜಾರಿ

Leave a Reply

Your email address will not be published. Required fields are marked *