• Fri. Jun 28th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ದಿ. ಮೇಟಿ ಮುದಿಯಪ್ಪ ನೆನಪಿನ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ನಾಟಕ

ByKiran Poojary

May 24, 2024

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಬರುವ 26 ಮೇ, ಭಾನುವಾರ ಸಂಜೆ 5:30ಕ್ಕೆ ದಿ| ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ಉಡುಪಿಯ ಯಕ್ಷಗಾನ ಕಲಾರಂಗ ಐ ವೈ ಸಿ ಯ ಸಭಾಂಗಣದಲ್ಲಿ ನಡೆಯಲಿದೆ.

ಯುವ ಕಥಾಸ್ಪರ್ಧೆಯಲ್ಲಿ ಡಾ. ನಮ್ರತಾ ಬಿ., ಡಾ. ಜಿ. ಪಿ. ನಾಗರಾಜ್, ರಾಮಾಂಜಿ ನಮ್ಮಭೂಮಿ, ಮಂಜುನಾಥ್ ಕಾರ್ತಟ್ಟು, ಮಂಜುನಾಥ್ ಹಿಲಿಯಾಣ  ಆಯ್ಕೆಯಾಗಿದ್ದು ,ಇವರಿಗೆ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಕಥಾಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವುದು .ಇದೇ ಸಂದರ್ಭದಲ್ಲಿ ಮೇಟಿ ಮುದಿಯಪ್ಪ ಅವರ ಬದುಕು ಬರಹದ ಕುರಿತು ವಿಮರ್ಶಕ ಜಿ. ಪಿ. ಪ್ರಭಾಕರ್ ಉಪನ್ಯಾಸ ನೀಡಲಿದ್ದಾರೆ ಎಂದು
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಹಾಗೂ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

9845240309

Leave a Reply

Your email address will not be published. Required fields are marked *