News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಡಾ.ಶಿವರಾಮ ಕಾರಂತರು ಕಲಿತ ಶಾಲೆಯಲ್ಲಿ ಪ್ರಾರಂಭೋತ್ಸವ ಸಡಗರ

ಕೋಟ: ಇಲ್ಲಿನ ಕೋಟದ ಜ್ಞಾನಪೀಠ ಪ್ರಶಸ್ತಿ ಪುರಸ್ಕöÈತ ಡಾ.ಕೋಟ ಶಿವರಾಮ ಕಾರಂತರು ಕಲಿತ ಕೋಟ ಶಾಲೆಯಲ್ಲಿ ಪ್ರಾರಂಭೋತ್ಸವವನ್ನು ವಿಶಿಷ್ಟ ರೀತಿಯಲ್ಲಿ  ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳು ಶಾಲಾ ಪ್ರಾಂಗಣದೊಳಗೆ ಆಗಮಿಸುತ್ತಿದ್ದಂತೆ 7ನೇ ತರಗತಿಯ ವಿದ್ಯಾರ್ಥಿಗಳು ಹೂವಿನ ಮಳೆಗೆರದರು.

ಇದೇ ವೇಳೆ ಪುನಿತ್ ರಾಜ್ ಕುಮಾರ್ ಅಭಿನಯದ ಬೊಂಬೆ ಹೇಳುತೈತ್ತೆ  ಡಬ್ಬಿಂಗ್ ಶಾಲಾ ಪ್ರಾರಂಭೋತ್ಸವದ ಸಾಂಗ್‌ಗೆ ಹೆಜ್ಜೆ ಹಾಕಿ ನೃತ್ಯಗೈಯುತ್ತ ಒಳ ಪ್ರವೇಶಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ಮಕ್ಕಳಿಗೆ ಸಿಹಿ ತಿಂಡಿ  ಹಂಚಿ ಸಂಭ್ರಮಿಸಿ ಸ್ವಾಗತಿಸಿಕೊಂಡರು.
ಈ ವೇಳೆ ಶಾಲಾ ಸಹಶಿಕ್ಷಕರು, ಪೋಷಕರು ಇದ್ದರು.

ಕೋಟ ಡಾ.ಶಿವರಾಮ ಕಾರಂತರು ಕಲಿತ ಶಾಲೆಯಲ್ಲಿ ಪ್ರಾರಂಭೋತ್ಸವ ಸಡಗರವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಮಕ್ಕಳನ್ನು ಸ್ವಾಗತಿಸಿಕೊಂಡರು.

Leave a Reply

Your email address will not be published. Required fields are marked *