Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೇಕಿ ಹಾಗೂ ಆಕ್ಯೂಪ್ರೆಶರ್ ಕಾರ್ಯಾಗಾರ

ಕೋಟ: ದೇಹದಲ್ಲಿನ ಅನೇಕ ಕಾಯಿಲೆಗಳನ್ನು ಅವರವರೇ ಗುಣಪಡಿಸಿಕೊಳ್ಳಲು ಸಾಧ್ಯವಿದೆ.ತಜ್ಞರ ಮಾರ್ಗದರ್ಶನದಲ್ಲಿ ಮಾಡುವ ಆಕ್ಯೂಪ್ರೆಶರ್ ರೀತಿಯ ಹಣ ವ್ಯಯಿಸದೇ ಮಾಡುವ ಚಿಕಿತ್ಸೆಗಳು ಉತ್ತಮ ಫಲಿತಾಂಶವನ್ನು ನೀಡಬಹುದು ಎಂದು ಅಧ್ಯಾಪಕರು ಹಾಗೂ ರೇಕಿ ಹಾಗೂ ಆಕ್ಯೂಪ್ರೆಶರ್ ತಜ್ಞ ಕೆ. ನಾರಾಯಣ ಆಚಾರ್ಯರು ನುಡಿದರು.

ಅವರು ಭಾನುವಾರ ಮಹಿಳಾ ಮಂಡಳ ಕೋಟ ಆಶ್ರಯದಲ್ಲಿ ಶ್ರೀ ಅಮೃತೇಶ್ವರೀ ದೇವಳದ ಸಭಾಂಗಣದಲ್ಲಿ ಆಯೋಜಿಸಿದ್ದ ರೇಕಿ ಹಾಗೂ ಆಕ್ಯೂಪ್ರೆಶರ್ ಕಾರ್ಯಾಗರದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಮಹಿಳಾ ಮಂಡಳ ಕೋಟ ಅಧ್ಯಕ್ಷೆ ಗೀತಾ ಎ. ಕುಂದರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮಹಿಳಾ ಮಂಡಳದ ಉಪಾಧ್ಯಕ್ಷೆ ಚಂದ್ರಿಕಾ ಭಟ್,ಮಾನಸಾ ಮಯ್ಯ ಉಪಸ್ಥಿತರಿದ್ದರು. ಸುಶೀಲಾ ಸೋಮಶೇಖರ್ ಪ್ರಸ್ತಾವಿಸಿ,ಶುಭಾ ಅಡಿಗ ಧನ್ಯವಾದಗೈದರು. ಮಹಿಳಾ ಮಡಳದ ಸುವರ್ಣಲತ ಕಾರ್ಯಕ್ರಮ ನಿರೂಪಿಸಿದರು. ಉಪಸ್ಥಿತರಿದ್ದ ನೂರಕ್ಕೂ ಹೆಚ್ವಿನ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು.

ಮಹಿಳಾ ಮಂಡಳ ಕೋಟ ಆಶ್ರಯದಲ್ಲಿ ಶ್ರೀ ಅಮೃತೇಶ್ವರೀ ದೇವಳದ ಸಭಾಂಗಣದಲ್ಲಿ ಆಯೋಜಿಸಿದ್ದ ರೇಕಿ ಹಾಗೂ ಆಕ್ಯೂಪ್ರೆಶರ್ ಕಾರ್ಯಾಗರವನ್ನು ರೇಕಿ ಹಾಗೂ ಆಕ್ಯೂಪ್ರೆಶರ್ ತಜ್ಞ ಕೆ. ನಾರಾಯಣ ಆಚಾರ್ಯ ಉದ್ಘಾಟಿಸಿದರು. ಮಹಿಳಾ ಮಂಡಳ ಕೋಟ ಅಧ್ಯಕ್ಷೆ ಗೀತಾ ಎ. ಕುಂದರ್, ಮಹಿಳಾ ಮಂಡಳದ ಉಪಾಧ್ಯಕ್ಷೆ ಚಂದ್ರಿಕಾ ಭಟ್,ಮಾನಸಾ ಮಯ್ಯ ಉಪಸ್ಥಿತರಿದ್ದರು.
ಕೋಟ.ಜೂ.3 ಕಾರ್ಯಾಗಾರ

Leave a Reply

Your email address will not be published. Required fields are marked *