Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ಣಾಟಕ ಬ್ಯಾಂಕ್ ಸಾಲಿಗ್ರಾಮ ಶಾಖೆಯ ನಿವೃತ್ತ  ಪ್ರಭಂದಕರಿಗೆ ಗೌರವ ಅಭಿನಂದನೆ

ಕೋಟ: ಇತ್ತೀಚಿಗೆ ನಿವೃತ್ತಿಯಾದ ಕರ್ಣಾಟಕ ಬ್ಯಾಂಕ್ ಸಾಲಿಗ್ರಾಮ ಶಾಖೆಯ ವ್ಯವಸ್ಥಾಪಕ ಭಾಸ್ಕರ ಹೆಗ್ಡೆ.ಸಿ.ಹೆಚ್ ಹಾಗೂ ದಂಪತಿಗಳನ್ನು ಸಮಾನ ಮನಸ್ಕರ ತಂಡದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಸಾಲಿಗ್ರಾಮ ಶಾಖೆಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿತು. 
ಸ್ಥಳೀಯ ಹಿರಿಯರಾದ ಸಂಬAಧ ನರಸಿಂಹ ಐತಾಳ್
ನಿವೃತ್ತರಾದ ಭಾಸ್ಕರ ಹೆಗ್ಡೆ.ಸಿ.ಹೆಚ್ ದಂಪತಿಗಳಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ ಹಾಗೂ ಸ್ಮರಿಣಿಕೆ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.

ಕಾರ್ತಟ್ಟು ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ್ ಮಾತನಾಡಿ ಹೆಗ್ಡೆಯವರ 34 ವರ್ಷದ ಬ್ಯಾಂಕಿನ ಸುದೀರ್ಘ ಸೇವೆಯನ್ನು ಶ್ಲಾಘಿಸಿ,ಅವರ ಕರ್ತವ್ಯ ಪ್ರಜ್ಞೆಯನ್ನು, ಸರಳ ವ್ಯಕ್ತಿತ್ವವನ್ನು ಕೊಂಡಾಡಿದರು. ಸಭೆಯಲ್ಲಿ ಸಿಬ್ಬಂದಿ ಪಿ. ಸೀತಾರಾಮ ಐತಾಳ , ಹಾಗೂ ಸುಧಾಕರ ನಾವಡ, ಶಾಖಾ ಸಿಬ್ಬಂದಿಗಳು,ಸ್ಥಳೀಯರು ಉಪಸ್ಥಿತರಿದ್ದರು.
ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷ  ಕೆ.ತಾರಾನಾಥ ಹೊಳ್ಳ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಪ್ರಸ್ತುತ ವ್ಯವಸ್ಥಾಪಕರಾದ ಅವಿನಾಶ್ ಹಂದೆ ವಂದಿಸಿದರು.

ಇತ್ತೀಚಿಗೆ ನಿವೃತ್ತಿಯಾದ ಕರ್ಣಾಟಕ ಬ್ಯಾಂಕ್ ಸಾಲಿಗ್ರಾಮ ಶಾಖೆಯ ವ್ಯವಸ್ಥಾಪಕ ಭಾಸ್ಕರ ಹೆಗ್ಡೆ.ಸಿ.ಹೆಚ್ ಹಾಗೂ ದಂಪತಿಗಳನ್ನು ಸಮಾನ ಮನಸ್ಕರ ತಂಡದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಸಾಲಿಗ್ರಾಮ ಶಾಖೆಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿತು.  ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷ  ಕೆ.ತಾರಾನಾಥ ಹೊಳ್ಳ, ಲೆಕ್ಕಪರೀಶೋಧಕ ಚಂದ್ರಶೇಖರ ಕಾರಂತ್,ಪ್ರಸ್ತುತ ವ್ಯವಸ್ಥಾಪಕರಾದ ಅವಿನಾಶ್ ಹಂದೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *