Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪರಿಸರ ಪ್ರಜ್ಞೆ ಮೆರೆದ ಪಿ.ಡಿ.ಒ ರವೀಂದ್ರ ರಾವ್
ತ್ಯಾಜ್ಯ ಎಸೆದಾತನಿಗೆ ಛೀಮಾರಿ, ಆತನಿಂದಲೆ ಕಸವಿಲೇವಾರಿ, ವ್ಯಾಪಕ ಪ್ರಶಂಸೆ

ಕೋಟ: ಇಲ್ಲಿನ ಹಂದಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸನಿಹದ ಮಾಬುಕಳ ಸೇತುವೆ ಬಳಿ ಕಲ್ಯಾಣಪುರ ಗ್ರಾಮಪಂಚಾಯತ್ ವ್ಯಾಪ್ತಿಯ ವ್ಯಕ್ತಿಯೊರ್ವ ತ್ಯಾಜ್ಯ ಎಸೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಯೊರ್ವ ಪರಿಸರ ಪ್ರಜ್ಞೆ ಮೆರೆದ ಘಟನೆ ಸೋಮವಾರ ನಡೆದಿದೆ.

ಪ್ರಸ್ತುತ ಕೋಟತಟ್ಟು ಹಾಗೂ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಶಿಸ್ತು ಬದ್ಧ ಆಡಳಿತ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ರವೀಂದ್ರ ರಾವ್ ಕಲ್ಯಾಣಪುರದ ವ್ಯಕ್ತಿಯೊರ್ವ ತ್ಯಾಜ್ಯ ಎಸೆಯುತ್ತಿರುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಆತನಿಂದಲೇ ತ್ಯಾಜ್ಯ ಪುನರ್ ತೆಗೆಯುವಂತೆ ಮಾಡಿ ಸ್ಥಳೀಯಾಡಳಿತವಾದ ಹಂದಾಡಿ ಗ್ರಾಮಪಂಚಾಯತ್ ಮಾಹಿತಿ ನೀಡಿ ಪರಿಸರ ಜಾಗೃತಿ ಮೆರೆದಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸರಕಾರಿ ಸಂಬಳಕ್ಕಾಗಿಯೇ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಕಾಲಘಟ್ಟದಲಿ ಅಲ್ಲದೆ ನಮ್ಮಗ್ಯಾಕೆ ಊರಿನ ಉಸಾಬರಿ ಎಂಬ  ದಿನಗಳಲ್ಲಿ ಇಂಥಹ ಅಧಿಕಾರಿ ಶಿಸ್ತುಬದ್ಧ ಕರ್ತವ್ಯ ನಿಷ್ಠೆ ಇತರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾದರಿಯಾಗಿದೆ.

ಕರ್ತವ್ಯಕ್ಕಾಗಿ ಬರುವ ಸಂದರ್ಭದಲ್ಲಿ ಘಟನೆ
ಇಲ್ಲಿನ ಕೋಡಿ ಗ್ರಾಮಪಂಚಾಯತ್‌ನಲ್ಲಿ ಸೋಮವಾರ ಕರ್ತವ್ಯಕ್ಕಾಗಿ ಬ್ರಹ್ಮಾವರದಿಂದ ಆಗಮಿಸುತ್ತಿರುವ ಸಂದರ್ಭದಲ್ಲಿ ಉಡುಪಿ ಪುರಸಭಾ ವ್ಯಾಪ್ತಿಯ ಕಲ್ಯಾಣಪುರ ಭಾಗದ ವ್ಯಾಪ್ಯಾರಿವೊರ್ವ ಸೀತಾ ನದಿಗೆ ತ್ಯಾಜ್ಯ ಸುರಿಯುತ್ತಿದ್ದು ಈ ಸಂದರ್ಭದಲ್ಲೆ  ರವೀಂದ್ರ ರಾವ್ ಕಾರು ನಿಲ್ಲಿಸಿ ಆತನಿಗೆ ಛೀಮಾರಿ ಹಾಕಿ ಎಸೆದ ತ್ಯಾಜ್ಯವನ್ನು ಮರುಕ್ಷಣದಲ್ಲೆ ಆತನ ವಾಹನಕ್ಕೆ ಡಂಪ್ ಮಾಡುವಂತೆ ಮಾಡಿದ್ದಾರೆ, ಅಲ್ಲದೆ ಹಂದಾಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ಕೂಡಾ ವ್ಯಕ್ತವಾಗಿದೆ.

ಪ್ರಸ್ತುತ ಎಲ್ಲಂದರಲ್ಲಿ ತ್ಯಾಜ್ಯ ಎಸೆಯುವ ಮನಸ್ಥಿತಿ ಅತಿಯಾಗಿ ವಿಜೃಂಭಸಿಕೊಳ್ಳುತ್ತಿದೆ ಈ ನಡುವೆ ತ್ಯಾಜ್ಯ ಎಸೆಯುವ ಕೈಗೆ ದೊಡ್ಡ ಮೊತ್ತದ ದಂಡ ವಿಧಿಸಿದರೆ ಕಡಿವಾಣ ಬೀಳಬಹುದು.ಕರ್ತವ್ಯಕ್ಕೆ ಬರುತ್ತಿರುವ ಈ ಸಮಯದಲ್ಲಿ ಈ ರೀತಿಯ ಪ್ರಸಂಗ ನಡೆದಿದೆ ಒರ್ವ ಸರಕಾರಿ ನೌಕರನಲ್ಲದಿದ್ದರು ಸಾಮಾನ್ಯ ಜ್ಞಾನ ಹೊಂದಿದ ವ್ಯಕ್ತಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯ ಇದೆ.
ರವೀಂದ್ರ ರಾವ್ ಅಭಿವೃದ್ಧಿ ಅಧಿಕಾರಿ ಕೋಟತಟ್ಟು,ಕೋಡಿ.

Leave a Reply

Your email address will not be published. Required fields are marked *