ಕೋಟ: ಶ್ರೀಯಕ್ಷೇಶ್ವರೀ ಭಜನಾ ತಂಡ ಅಚ್ಲಾಡಿ ಇದರ ಭಜನಾ ಗುರುಗಳಾದ ಪ್ರಕಾಶ್ ಮಂದಾರ್ತಿ ಅವರಿಗೆ ಭಜನಾ ತಂಡದಿಂದ ಗೌರವಾರ್ಪಣೆ ಕಾರ್ಯಕ್ರಮ ಜೂ.2ರಂದು ಇಲ್ಲಿನ ಯಕ್ಷೇಶ್ವರೀ ದೇಗುಲದಲ್ಲಿ ಜರಗಿತು.
ಹಿರಿಯ ಭಜಕ ರಾಮಣ್ಣ ಪಡುಕೆರ ಸಮ್ಮಾನ ನೆರವೇರಿಸಿ ಶುಭ ಹಾರೈಸಿದರು.
ಸುಶಾಂತ್ ಶೆಟ್ಟಿ ಅಚ್ಲಾಡಿ ಸಮ್ಮಾನಿತರ ಕುರಿತು ಮಾತನಾಡಿ, ಪ್ರಕಾಶ್ ಮಂದಾರ್ತಿಅವರು ಉತ್ತಮ ಭಜನಾ ಗುರುಗಳಾಗಿದ್ದು ಹಲವಾರು ತಂಡಗಳನ್ನು ಕಟ್ಟಿ ಬೆಳೆಸಿದ್ದಾರೆ ಹಾಗೂ ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಪಸರಿಸುವ ಕರ‍್ಯ ಮಾಡುತ್ತಿದ್ದಾರೆ. ಅದೇ ರೀತಿ ಅಚ್ಲಾಡಿಯ ಯಕ್ಷೇಶ್ವರೀ ಭಜನಾ ತಂಡವನ್ನು ಕೂಡ ಅತ್ಯಂತ ಕಡಿಮೆ ಅವಧಿಯಲ್ಲಿ ಸಂಘಟಿಸಿದ್ದಾರೆ. ಹೀಗಾಗಿ ಅವರನ್ನು ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಯಕ್ಷೇಶ್ವರೀ ಭಜನಾ ತಂಡದ ಪ್ರಮುಖರಾದ ಅನಿತಾ ಗಾಣಿಗ, ಸರೋಜ ಗಾಣಿಗ ಮತ್ತು ಸದಸ್ಯರು ಹಾಗೂ ಯಕ್ಷೇಶ್ವರೀ ದೇಗುಲದ ಆಡಳಿತ ಮಂಡಳಿ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.
ಶ್ರೀಯಕ್ಷೇಶ್ವರೀ ಭಜನಾ ತಂಡ ಅಚ್ಲಾಡಿ ಇದರ ಭಜನಾ ಗುರುಗಳಾದ ಪ್ರಕಾಶ್ ಮಂದಾರ್ತಿ ಅವರಿಗೆ ಭಜನಾ ತಂಡದಿAದ ಗೌರವಾರ್ಪಣೆ ಸಲ್ಲಿಸಲಾಯಿತು. ಹಿರಿಯ ಭಜಕ ರಾಮಣ್ಣ ಪಡುಕೆರ, ಯಕ್ಷೇಶ್ವರೀ ಭಜನಾ ತಂಡದ ಪ್ರಮುಖರಾದ ಅನಿತಾ ಗಾಣಿಗ, ಸರೋಜ ಗಾಣಿಗ ಮತ್ತಿತರರು ಇದ್ದರು.
















Leave a Reply