ಕೋಟ: ಇಲ್ಲಿನ ಚೇತನ ಪ್ರೌಢಶಾಲೆ, ಹಂಗಾರಕಟ್ಟೆ ಶಾಲಾ ಪ್ರಾರಂಭೋತ್ಸವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. 100% ಫಲಿತಾಂಶ ದಾಖಲಿಸಿದ ಎಸ್. ಎಸ್ .ಎಲ್ .ಸಿ ಯ 43 ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವತಿಯಿಂದ ತಲಾ ರೂ.1,000/- ಪ್ರೋತ್ಸಾಹ ಧನವನ್ನು ನೀಡಿ ಶಾಲು ಹೊಂದಿಸಿ ಸನ್ಮಾನಿಸಲಾಯಿತು.
ನಿವೃತ್ತಿಯಾಗುತ್ತಿರುವ ಸಂಸ್ಥೆಯ ಜವಾನರಾಗಿ 32 ವರ್ಷ ಸೇವೆ ಸಲ್ಲಿಸಿದ ಎಚ್. ಶಂಕರ್ ಅವರನ್ನು ಸನ್ಮಾನಿಸಿ ಬೀಳ್ಕೊಳ್ಳಲಾಯಿತು.
ಇದೇ ವೇಳೆ ಪೋಷಕರ ಸಭೆಯನ್ನು ಆಯೋಜಿಸಲಾಗಿದ್ದು ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲಾಯಿತು. ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಬನ ಅಂಜುಮ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಭರತ್ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯ ಬಿ. ರಾಜರಾಮ್ ಭಟ್, ಕಾರ್ಯದರ್ಶಿ ಸಿ.ಎಚ್ ಇಬ್ರಾಹಿಂ ಸಾಹೇಬ್,ಕೋಶಾಧಿಕಾರಿ ಮಹಾಬಲೇಶ್ವರ ಹೆಬ್ಬಾರ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಪದಾಧಿಕಾರಿಗಳಾದ ರಾಮದೇವ ಹಂದೆ ,ಅರವಿಂದ ಶರ್ಮ, ಬಾಲಕೃಷ್ಣ ಪೂಜಾರಿ, ಮನೋಜಕುಮಾರ್, ಲೀಲಾವತಿಗಂಗಾಧರ್,ಕುಸುಮ ಮನೋಜ್ ತಾರನಾಥ ಶೆಟ್ಟಿ, ಗಣೇಶ ಜಿ , ಐರೋಡಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸಿ .ಆರ್.ಪಿ ಅನುಪಮಾ, ಎಸ್.ಎಸ್.ಎಲ್.ಸಿ ನೋಡಲ್ ರಾಘವ್ ಶೆಟ್ಟಿ ,ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ,ಸಾಲಿಗ್ರಾಮ ಪ.ಪಂ ಸದಸ್ಯೆ ಸುಲತಾ ಹೆಗ್ಡೆ, ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕಲ್ಪನಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು .ಗೋವಿಂದರಾವ್ ಧನ್ಯವಾದಗೈದರು.
ಲ್ಲಿನ ಚೇತನ ಪ್ರೌಢಶಾಲೆ, ಹಂಗಾರಕಟ್ಟೆ ಶಾಲಾ ಪ್ರಾರಂಭೋತ್ಸವನ್ನು ಸಂಭ್ರಮದ ಕಾರ್ಯಕ್ರಮವನ್ನು ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಬನ ಅಂಜುಮ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಭರತ್ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯ ಬಿ. ರಾಜರಾಮ್ ಭಟ್, ಕಾರ್ಯದರ್ಶಿ ಸಿ.ಎಚ್ ಇಬ್ರಾಹಿಂ ಸಾಹೇಬ್ ಮತ್ತಿತರರು ಇದ್ದರು.















Leave a Reply