Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಲಾವಿದರ ಅಧ್ಯಯನಕ್ಕಾಗಿ ಪುರಾಣ ಗ್ರಂಥಗಳು ಚೌಕಿಯಲ್ಲಿ ಇರಲಿ : ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್

ಕೋಟ: ಕಲಾವಿದರ ಅಧ್ಯಯನಕ್ಕಾಗಿ ಪುರಾಣ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಾಗವತ, ದೇವಿ ಭಾಗವತ, ಅಷ್ಠದಶ ಪುರಾಣಗಳ ಒಂದೊAದು ಪ್ರತಿ ಮೇಳದ ಚೌಕಿಯಲ್ಲಿದ್ದರೆ ಕಲಾವಿದರಿಗೆ ಬಿಡುವಿದ್ದಾಗ ಗ್ರಂಥಗಳನ್ನು ಓದಿದರೆ ವ್ಯಕ್ತಿತ್ವ ವಿಕಸನವಾಗುವುದರೊಂದಿಗೆ, ತಮ್ಮ ಜ್ಞಾನಾಭಿವೃದ್ಧಿ ಆಗುತ್ತದೆ ಎಂದು ವಾಸ್ತುತಜ್ಙ ಡಾ. ಬಸವರಾಜ್ ಶೆಟ್ಟಿಗಾರ್‌ರವರು ನುಡಿದರು.

ಮಾರಣಕಟ್ಟೆ ಮೇಳಗಳ ಕೊನೆಯ ದೇವರ ಸೇವೆ ಆಟದಂದು ನಿವೃತ್ತರಿಗೆ ಸನ್ಮಾನ ಮಾಡಿ ಮಾರಣಕಟ್ಟೆ ಮೇಳದ ಯಜಮಾನರಿಗೆ ಸೂಚನೆಯನ್ನು ನೀಡಿ ನಿಮ್ಮದೇ ಮೇಳ ಕೂಡಾಟ ಇರುವಾಗ ಬೆಳಗಿನ ಜಾವದಲ್ಲಿ ಒಂದು ಪ್ರಸಂಗವನ್ನಾದರೂ ಜೋಡಾಟ ಮಾಡಿದರೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚುವುದರೊಂದಿಗೆ ಬ್ರಾಹ್ಮೀ ಮೂಹೂರ್ತದ ವರೆಗೆ ಬೆಳಕಿನ ಸೇವೆ ಮಾಡಿದ ಹರಕೆದಾರರು ಸಾರ್ಥಕ್ಯವನ್ನು ಪಡೆಯುತ್ತಾರೆ ಎಂದರು.
ಮೇಳದ ನಿವೃತ್ತ ಮ್ಯಾನೇಜರ್ ರಾಜೀವ್ ಶೆಟ್ಟಿ ವಂಡ್ಸೆ, ನಿವೃತ್ತ ಕಲಾವಿದರಾದ ಬಿ.ಎಚ್.ಮೂರ್ತಿಗೌಡ ಗುಡ್ಡಿಕೆರೆ, ನಿವೃತ್ತ ಸಹಾಯಕ ಸಿಬ್ಬಂದಿಯಾದ ಸಂಜೀವ ಗಾಣಿಗವರಿಗೆ ಕಲಾಕಾಣಿಕೆಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಬಾಳಿಕೆರೆಂi ಮಾರಣಕಟ್ಟೆ ದೇವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರರಾದ ಸಿ. ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾರಣಕಟ್ಟೆ ದೇವಸ್ಥಾನದ ಮಾಜಿ ಧರ್ಮದರ್ಶಿ ಮಂಜಯ್ಯ ಶೆಟ್ಟಿ, ಹಿರಿಯ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದಿನಕರ ಶೆಟ್ಟಿ, ಅಶೋಕ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಗೋವರ್ಧನ ಶೆಟ್ಟಿ, ಆದರ್ಶ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಮಂಜಯ್ಯ ಶೆಟ್ಟಿ, ಕೆ.ಸಿ.ಸುರೇಂದ್ರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಅರ್ಚಕ ವೃಂದದವರು ಉಪಸ್ಥಿತರಿದ್ದು ಶುಭಹಾರೈಸಿದರು. ಸಿ.ರಘುರಾಮ್ ಶೆಟ್ಟಿ ಸ್ವಾಗತಿಸಿದರು. ಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಾರಣಕಟ್ಟೆ ಮೇಳಗಳ ಕೊನೆಯ ದೇವರ ಸೇವೆ ಆಟದಂದು ಮೇಳದ ನಿವೃತ್ತ ಮ್ಯಾನೇಜರ್ ರಾಜೀವ್ ಶೆಟ್ಟಿ ವಂಡ್ಸೆ, ನಿವೃತ್ತ ಕಲಾವಿದರಾದ ಬಿ.ಎಚ್.ಮೂರ್ತಿಗೌಡ ಗುಡ್ಡಿಕೆರೆ, ನಿವೃತ್ತ ಸಹಾಯಕ ಸಿಬ್ಬಂದಿಯಾದ ಸಂಜೀವ ಗಾಣಿಗ ಬಾಳಿಕೆರೆಯವರಿಗೆ ಕಲಾಕಾಣಿಕೆಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ವಾಸ್ತುತಜ್ಙ ಡಾ. ಬಸವರಾಜ್ ಶೆಟ್ಟಿಗಾರ್, ದಿನಕರ ಶೆಟ್ಟಿ, ಅಶೋಕ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಗೋವರ್ಧನ ಶೆಟ್ಟಿ, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *