• Sun. Jun 23rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಜೂ.8ಕ್ಕೆ ಪುನಿತ್ ರಾಜ್ ಕುಮಾರ್ 4ನೇ ವರ್ಷದ ವಿದ್ಯಾನಿಧಿಯೋಜನೆ

ByKiran Poojary

Jun 7, 2024

ಕೋಟ: ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ‌ಮಂಡಲದ ನೇತೃತ್ವದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳ ಯೋಜನೆಯಡಿ ಪುನಿತ್ ರಾಜ್ ಕುಮಾರ್ ವಿದ್ಯಾನಿಧಿ ಯೋಜನೆಯೂ ಒಂದು ಈ ಯೋಜನೆಯಡಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಕರ್ಚು ವೆಚ್ಚ ಭರಿಸಿ ಆ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಬಾರದೆಂಬ ಉದ್ದೇಶದಿಂದ ಪಂಚವರ್ಣ ಸಂಸ್ಥೆ 5 ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತುಪಡೆದಿದ್ದು ಇದರ ನಾಲ್ಕನೇ ವರ್ಷದ ಕಾರ್ಯಕ್ರಮ ಇದೇ ಜೂ.8ರ ಸಂಜೆ 5ಗ ಕೋಟದ ಪಂಚವರ್ಣದ ಕಛೇರಿ ಮುಂಭಾಗದಲ್ಲಿ ಆನಂದ್ ಸಿ ಕುಂದರ್ ಘನ ಉಪಸ್ಥಿತಿಯಲ್ಲಿ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗರ ಸಲಹೆ ಸೂಚನೆಯಂತೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *