• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಬ್ರಹ್ಮಾವರ | ನಿರ್ಮಲ ಶಾಲೆಯಲ್ಲಿ ಸೌಹಾರ್ದ ಬಕ್ರೀದ್ ಆಚರಣೆ

ByKiran Poojary

Jun 16, 2024ಉಡುಪಿ‌ |  ಸೌಹಾರ್ದತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಪರಸ್ಪರ ಹಬ್ಬಗಳ ಬಗ್ಗೆ ತಿಳಿಯಿಸಿಕೊಡುವುದು ಅನಿವಾರ್ಯವಾಗಿದೆ ಪರಸ್ಪರ ಅರಿತಾಗ ಮಾತ್ರ ಸಂಶಯಗಳಿಗೆ ಆಸ್ಪದವಿರುವುದಿಲ್ಲ ಎಂದು ಪತ್ರಕರ್ತ ಶಾರೂಕ್ ತೀರ್ಥಹಳ್ಳಿ ಹೇಳಿದರು.

ಬ್ರಹ್ಮಾವರದ ನಿರ್ಮಾಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳೊಂದಿಗೆ ಬಕ್ರೀದ್ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ತ್ಯಾಗ ಬಲಿದಾನದ ಸಂಕೇತವೇ ಬಕ್ರೀದ್ ನ ಮುಖ್ಯ ಸಂದೇಶ ಎಂದು ಹಬ್ಬದ ಇತಿಹಾಸವನ್ನು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿ ಫಾಧರ್ ಲೆನ್ ಸನ್ ಲೋಬೋ ಮಾತನಾಡಿ ಹಬ್ಬಗಳು ಶಾಂತಿಯನ್ನು, ಮಾನವೀಯ ಮೌಲ್ಯಗಳನ್ನು ಸಾರುತ್ತದೆ, ನಮ್ಮ ಶಾಲೆಯಲ್ಲಿ ದೀಪಾವಳಿ, ಕ್ರಿಸ್ಮಸ್, ಬಕ್ರೀದ್ ಹಬ್ಬವನ್ನು ವಿದ್ಯಾರ್ಥಿಗಳೊಂದಿಗೆ ಆಚರಿಸುತ್ತೇವೆ ಎಂದು ಹೇಳಿದರು.

ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಕನುಕ ಉಪಸ್ಥಿತರಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಸಮೃದ್ಧಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರೀತಮ್ ಪೂಜಾರಿ ಸ್ವಾಗತಿಸಿದರು. ಅಲೈಕ ನಿಕ್ಕಮ್ ಕಾರ್ಯಕ್ರಮ ನಿರೂಪಿಸಿದರು.‌ ವಿದ್ಯಾರ್ಥಿನಿ ಪ್ರಗತಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *