• Mon. Dec 9th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕರ್ನಾಟಕ ರಣಧೀರರ ವೇದಿಕೆ ವತಿಯಿಂದ ಅದ್ದೂರಿಯಾಗಿ 5ನೇ ವರ್ಷದ ರಾಜ್ಯ ಕಾರ್ಯಕಾರಿ ಸಭೆ ಹಾಗೂ ಸಾರ್ಥಕತೆಯ ಸಂಭ್ರಮ ಮತ್ತು ಅತ್ಯುತ್ತಮ ಸಂಘಟನಾ ಸೇವಾ ಪ್ರಶಸ್ತಿ ಕಾರ್ಯಕ್ರಮ ಆಚರಣೆ

ByKiran Poojary

Jun 18, 2024

ಕಾರವಾರ- ನೆಲಮಂಗಲ  ನಗರ ಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ   ಕರ್ನಾಟಕ ರಣಧೀರರ ವೇದಿಕೆಯಿಂದ ಅದ್ದೂರಿಯಾಗಿ 5ನೇ ವರ್ಷದ ರಾಜ್ಯ ಕಾರ್ಯಕಾರಿಣಿ ಸಮಾವೇಶ ಹಾಗೂ  ಸಾರ್ಥಕತೆಯ ಸಂಭ್ರಮ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ  ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದು  ಸಂಘಟನೆಯ  ತತ್ವ ಸಿದ್ಧಾಂತಗಳ ಅಡಿಯಲ್ಲಿ  ಸಂಘಟನೆ ಮಾಡುವ ನೆಟ್ಟಿನಲ್ಲಿ  ಸೇವೆ ಸಲ್ಲಿಸಿದ  ರಾಕೇಶ್ ಕುಮಾರ್.ಟಿ. ರಾಜ್ಯ ಸಂಚಾಲಕರು, ಪ್ರಮೀಳಾ ಜಿ.ಎನ್. ಮಹಿಳಾ ಜಿಲ್ಲಾಧ್ಯಕ್ಷರು ಹಾಸನ, ಬೈರವ. ಅಧ್ಯಕ್ಷರು. ರಾಜ್ಯ ಸಾಮಾಜಿಕ ಜಾಲತಾಣದ ಘಟಕ, ಇವರುಗಳಿಗೆ ಅತ್ಯುತ್ತಮ ಸಂಘಟನಾ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್. ರವರು  ನಾಡಿನ ಉದ್ದಗಲಕ್ಕೂ ಇರುವಂತಹ  ಜ್ವಲಂತ ಸಮಸ್ಯೆಗಳಿಗೆ ಕರ್ನಾಟಕ ರಣಧೀರರ ವೇದಿಕೆ ಹೋರಾಟ ನಡೆಸಲು ಸದಾ ಸಿದ್ಧವಾಗಿದೆ ಅಲ್ಲದೆ ಕನ್ನಡ ನಾಡಿನಲ್ಲಿ  ಕನ್ನಡಿಗರು ಪರಭಾಷಿಕರಂತೆ ಬದುಕುವ ಪರಿಸ್ಥಿತಿ ಎದುರಾಗಿದೆ ಕನ್ನಡ ನಾಡಿನಲ್ಲಿ ಇರುವಂತ ಪರಭಾಷಿಕರಿಗೆ ಅವರ ಭಾಷೆಯಲ್ಲಿ ಮಾತನಾಡಿಸದೆ  ನಮ್ಮ ತಾಯಿ ಭಾಷೆಯಾದ ಕನ್ನಡ ಭಾಷೆಯಲ್ಲಿ ಮಾತನಾಡಿಸಬೇಕು ಅವರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡಬೇಕು, ಪ್ರತಿಯೊಬ್ಬ ಹೋರಾಟಗಾರರು ವ್ಯಾಪಾರಸ್ಥನಾಗಬೇಕು, ಉದ್ಯಮಿದಾರನಾಗಬೇಕು ಆಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ  ಪೂರ್ಣವಾಗಿ ಎಲ್ಲಾ ರಂಗದಲ್ಲೂ ಕೆಲಸ ಸಿಗಲು ಸಾಧ್ಯ ಎಂದು ಹೇಳಿದರು ಅಲ್ಲದೆ ಸರ್ಕಾರ  ಅತಿ ಬೇಗ ಡಾಕ್ಟರ್ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸಿದರು, ನಮ್ಮ ತೆರಿಗೆಯಲ್ಲಿ ಸಂಬಳ ತೆಗೆದುಕೊಳ್ಳುವ ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಸೇರಿಸುವ ಸುಗ್ರೀವಾಜ್ಞೆಯನ್ನು ಸರ್ಕಾರ ಈ ಕೂಡಲೇ ಜಾರಿ ಮಾಡಬೇಕೆಂದು ಒತ್ತಾಯಿಸಿದರು, ತೆರಿಗೆ ಹಾಗೂ ರಸ್ತೆ ಅಭಿವೃದ್ಧಿ ಸೆಸ್ ಸರ್ಕಾರಗಳು ಈಗಾಗಲೇ ಪಡೆಯುತ್ತಿದ್ದು ಅದರ ಮೇಲು ಟೋಲ್ ಹೆಸರಿನಲ್ಲಿ   ವಾಹನ ಸವಾರರ ಬಳಿ ಹಗಲು ದರೋಡೆ ಮಾಡುತ್ತಿರುವುದು ಸರಿಯಲ್ಲ ಆದಷ್ಟು ಬೇಗ  ರಾಜ್ಯಾದ್ಯಂತ ಟೋಲ್ ಗಳನ್ನ ತೆರವು ಮಾಡಬೇಕು ಎಂದು ಒತ್ತಾಯಿಸಿದರು,ವೇದಿಕೆಯ ಕಾರ್ಯಕರ್ತರು  ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡದೆ ಕಾನೂನು ಚೌಕಟ್ಟಿನಲ್ಲಿ ಎಂತಹ ಹೋರಾಟಗಳನ್ನಾದರೂ ಮಾಡಿ ಹಾಗೂ ಸಹ ಪ್ರಭಾವಶಾಲಿ ಆದರೂ ಸರಿ ಅವರು ಮಾಡಿರುವ ಅನ್ಯಾಯವನ್ನು ಎದುರಿಸುವ ದಿಟ್ಟಿನಲ್ಲಿ  ನಮ್ಮ ಮನಸ್ಸನ್ನ ಸದೃಢ ಮಾಡಿಕೊಳ್ಳುವಂತೆ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡಿದರು,

  ಹಿರಿಯ ದಲಿತ ಮುಖಂಡರು ಹಾಗೂ ಕನ್ನಡಪರ ಚಿಂತಕರು ಭಾಸ್ಕರ್ ಪ್ರಸಾದ್ ಬಿ.ಆರ್. ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕನ್ನಡ ನಾಡಿನಲ್ಲಿ  ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಉತ್ತರ ಭಾರತದ ವಲಸಿದರು ಹೆಚ್ಚಾಗಿ ಕೆಲಸ ಮಾಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಕನ್ನಡಪರ ಹೋರಾಟಗಾರರು ಶ್ರಮಿಸಬೇಕು  ಪ್ರತಿ ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಶೇಕಡ 100 ಕ್ಕೆ 100 ರಷ್ಟು ಕನ್ನಡಿಗರೇ ಕೆಲಸ ಮಾಡುವಂತಹ ಆಗಬೇಕು, ಸರ್ಕಾರಗಳು ಮಾಡುತ್ತಿರುವ ದಬ್ಬಾಳಿಕೆಯನ್ನು  ಯಾವುದೇ ಮುಲಾಜಿಗೂ ಬಗ್ಗದೆ ಮೆಟ್ಟಿ ನಿಲ್ಲಬೇಕು  ಬುದ್ಧ ಬಸವ ಅಂಬೇಡ್ಕರ್ ಅವರು ಹೇಳಿದ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಕಡೆ ಶ್ರಮಿಸಬೇಕು ಎಂದು ಹೇಳಿದರು,

ಕನ್ನಡ ಪರ ಚಿಂತಕರು ಹಾಗೂ ಕನ್ನಡ ಪರ ಹೋರಾಟಗಾರರಾದ ಚೇತನ್ ಗೌಡ.ಎಂ.ರವರು ಕಾರ್ಯಕ್ರಮವನ್ನು ಆಯೋಜಿಸಿ ಮಾತನಾಡಿ ಕನ್ನಡ ನಾಡಿನ ಮಕ್ಕಳನ್ನ  ಹಕ್ಕು ವಂಚಿತರನ್ನಾಗಿ ಮಾಡುವ ನೆಟ್ಟಿನಲ್ಲಿ ಕೇಂದ್ರ ಸರ್ಕಾರ ಆಗ ರಾಜ್ಯ ಸರ್ಕಾರಗಳು  ಬೃಹತ್ ಮಟ್ಟದ  ಜಾಲಗನ್ನೇ ಎಳೆದಿದ್ದು  ಅದರಲ್ಲಿ ಮುಖ್ಯವಾಗಿ  NEET, CET ಪರೀಕ್ಷೆಗಳ ಮೂಲಕ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪರೀಕ್ಷೆಗಳನ್ನು ಇಟ್ಟು ಕನ್ನಡ ನಾಡಿನ ಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದಾರೆ ಹಾಗೂ ಉತ್ತರ ಭಾರತದವರನ್ನ  ಕನ್ನಡ ನಾಡಿನ  ಕಡೆಗೆ   ಹಂದಿ ಹಿಂಡುಗಳಂತೆ ತುಂಬುತ್ತಿದ್ದಾರೆ ಈ ವಲಸೆ ನೀತಿಯನ್ನ  ಮೊದಲು ತಡೆಯಬೇಕು ಹಾಗೂ  ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲೇ  ಕಡ್ಡಾಯವಾಗಿ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಖ್ಯಾತ ವಕೀಲರು ಬಿ ವಸಂತ್ ಕುಮಾರ್, ರಾಜ್ಯ ಕಾನೂನು ಸಲಹೆಗಾರರಾದ ನಾಗರಾಜು,  ವೇದಿಕೆ ಪದಾಧಿಕಾರಿಗಳಾದ  ಬಿ.ಎನ್.ವಿಜಯ್ ಕುಮಾರ್, ನೆಲಮಂಗಲ ತಾಲ್ಲೂಕು ಶಾಖೆ ಅಧ್ಯಕ್ಷರಾದ ಮೂರ್ತಿ, ರಾಮಾಂಜನೇಯ ಹೆಚ್‍.ಜಿ, ಕಾಂತ್ ಕುಮಾರ್, ಹಾಸನ ಜಿಲ್ಲಾಧ್ಯಕ್ಷರಾದ ಯೋಗೇಶ್, ಪ್ರಮೀಳಾ. ಜಿ. ಎನ್. ಕೊರಟಗೆರೆ ಅಧ್ಯಕ್ಷರ, ಮಂಜು ಸ್ವಾಮಿ ಎಂ. ಎನ್., ಮಲ್ಲಿಕಾ, ಸುರೇಶ್, ಮುತ್ತುರಾಜ್,ಭೈರವ, ರಮೇಶ್, ಮಾರುತಿ,ಬಸವರಾಜು, ನಮ್ಮ ತುಮಕೂರು ವಾಹಿನಿಯ ಸಂಸ್ಥಾಪಕರಾದ ನಟರಾಜು, ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾದ  ಮುಬಾರಕ್ ಪಾಷ, ಮಹೇಶ್, ಸತೀಶ್, ಉಪಾಧ್ಯಕ್ಷರಾದ ಲೋಕೇಶ್, ನವೀನ್, ಅಮಾನ್. ಡಿ., ಕೀರ್ತಿ ಕುಮಾರ್, ಗೋಪಿ ಹಾಗೂ ಇನ್ನಿತರರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *