• Fri. Jun 28th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮನೆಯೇ ಗ್ರಂಥಾಲಯ ಅಭಿಯಾನದ 25ನೇ ರಜತ ಗ್ರಂಥಾಲಯ ಕಾಯ೯ಕ್ರಮ

ByKiran Poojary

Jun 19, 2024

ಉಡುಪಿ :- ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ವತಿಯಿಂದ ನಡೆಯುತ್ತಿರುವ ಮನೆಯೇ ಗ್ರಂಥಾಲಯ ಅಭಿಯಾನದ 25ನೇ ರಜತ ಗ್ರಂಥಾಲಯ ಕಾಯ೯ಕ್ರಮ ಜೂನ್.19 ರಂದು ಸಂತೆಕಟ್ಟೆ ಕಲ್ಯಾಣಪುರ ವಾತ್ಸಲ್ಯ ಕ್ಲಿನಿಕ್ ನಲ್ಲಿ ನಡೆಯಿತು.

ಐ.ಎಂ.ಎ ಉಡುಪಿ ಕರಾವಳಿ ಅಧ್ಯಕ್ಷೆ ಡಾI ರಾಜಲಕ್ಷ್ಮಿಯವರ  ಆತಿಥ್ಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪುಸ್ತಕ ನೀಡುವುದರ ಮೂಲಕ ಚಾಲನೆ ನೀಡಿದ ಖ್ಯಾತ ಕಲಾವಿದೆ, ನಿವೃತ್ತ ಶಿಕ್ಷಕಿ ಪ್ರತಿಭಾ ಎಲ್ ಸಾಮಗ ಮಾತನಾಡಿ, ಇತ್ತೀಚಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದು ಮನಸ್ಸು ಮತ್ತು ದೇಹಕ್ಕೆ ಕೂಡ ಸಂತೋಷ ನೀಡುತ್ತದೆ. ಗರ್ಭಿಣಿ ಸ್ತ್ರೀಯರು ತಮ್ಮ ಬಾಣಂತನ ಅವಧಿಯಲ್ಲಿ ಉತ್ತಮವಾದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೈಗೂಡಿಸಿದ್ದಲ್ಲಿ ಮುಂದೆ ಹುಟ್ಟುವ ಮಕ್ಕಳು ಕೂಡ ಉತ್ತಮವಾದ ಸಂಸ್ಕೃತಿ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಅತ್ಯುತ್ತಮವಾದ ಕಾರ್ಯನಿರ್ವಹಿಸುತ್ತಿದ್ದು, ಮನೆ ಮನೆಯಲ್ಲಿ ಗ್ರಂಥಾಲಯ ಮಾಡುವ ಈ ಅಭಿಯಾನ ಅಪೂರ್ವವಾದದ್ದು ಎಂದು ಶುಭ ಹಾರೈಸಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು  ಘಟಕಾಧ್ಯಕ್ಷ ರವಿರಾಜ್ ಎಚ್.ಪಿ ವಹಿಸಿದ್ದರು.

ಕಾಯ೯ಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ವಿಶ್ವನಾಥ್ ಶೆಣೈ, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಗೌ.ಕಾಯ೯ದಶಿ೯ ರಂಜನಿ ವಸಂತ್, ವಸಂತ್ ಕುಮಾರ್,  ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧ ಬಸಯ್ಯ ಸ್ವಾಮಿ ಚಿಕ್ಕಮಠ, ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು  ಮುಂತಾದವರಿದ್ದರು.ಗೌರವ ಕಾಯ೯ದಶಿ೯ ಜನಾರ್ದನ್ ಕೊಡವೂರು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *