• Fri. Jun 28th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಬ್ರಹ್ಮಾವರ -ಬಾರಕೂರು -ಜನ್ನಾಡಿ -ಸಿದ್ಧಾಪುರ ಜಿಲ್ಲಾ ಮುಖ್ಯರಸ್ತೆಯನ್ನು ಕರ್ನಾಟಕ ರಾಜ್ಯ ಸರಕಾರ ಪುನಃ ರಾಜ್ಯ ಹೆದ್ದಾರಿಯನ್ನಾಗಿ ಅಧಿಕೃತವಾಗಿ ಘೋಷಣೆ

ByKiran Poojary

Jun 21, 2024

ಬ್ರಹ್ಮಾವರ -ಬಾರಕೂರು -ಜನ್ನಾಡಿ -ಸಿದ್ಧಾಪುರ ಜಿಲ್ಲಾ ಮುಖ್ಯರಸ್ತೆಯನ್ನು ಕರ್ನಾಟಕ ರಾಜ್ಯ ಸರಕಾರ ಪುನಃ ರಾಜ್ಯ ಹೆದ್ದಾರಿಯನ್ನಾಗಿ ಅಧಿಕೃತವಾಗಿ ಘೋಷಣೆ

ಬ್ರಹ್ಮಾವರ -ಬಾರಕೂರು ಜನ್ನಾಡಿ — ಸಿದ್ದಾಪುರ ಜಿಲ್ಲಾಮುಖ್ಯರಸ್ತೆಯ ವಿಷಯದಲ್ಲಿ ಬಾರಕೂರಿನ ಸಾಮಾಜಿಕ ಹೋರಾಟಗಾರ ಶಂಕರ್ ಶಾಂತಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯ ಮೂರ್ತಿಯವರ ನೇತೃತ್ವದ ದ್ವಿಸದಸ್ಯಪೀಠದಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಹಾಗೂ ಒಂದು ನ್ಯಾಯಾoಗ ನಿಂದನೆ ಅರ್ಜಿ ಸಲ್ಲಿಕೆ ಅದ ಹಿನ್ನಲೆಯಲ್ಲಿ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಪುನಃ ರಾಜ್ಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿ ಕರ್ನಾಟಕ ಸರಕಾರ ಅಧಿಕೃತವಾಗಿ ಆದೇಶಮಾಡಿದೆ.

ಪ್ರಕರಣದ ಹಿನ್ನಲೆ :
ಬ್ರಹ್ಮಾವರ ಬಾರಕೂರು ಜನ್ನಾಡಿ ಸಿದ್ಧಾಪುರ ಜಿಲ್ಲಾ ಮುಖ್ಯರಸ್ತೆಯನ್ನು ಹಿಂದಿನ ಬೊಮ್ಮಾಯಿ ಸರಕಾರ ಆಡಳಿತದಲ್ಲಿ ಇರುವಾಗ ರಾಜ್ಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿ ಅಭಿವೃದ್ಧಿ ಪಡಿಸಲು ಮುಂದಾಗಿತ್ತು ನಂತರ ಆಗಿನ ಸ್ಥಳೀಯ ಶಾಸಕರು ಸದ್ರಿ ರಸ್ತೆ ರಾಜ್ಯ ಹೆದ್ದಾರಿ ಆದಲ್ಲಿ ರೋಡ್ ಮಾರ್ಜಿನ್ ಜಾಸ್ತಿ ಆಗುವುದರಿಂದ ಅಭಿವೃದ್ಧಿ ಚಟುವಟಿಕೆಗೆ ಹಿನ್ನಡೆ ಆಗುತ್ತದೆ ಎಂದು ಸರಕಾರದ ಕಾರ್ಯದರ್ಶಿಯವರು, ಲೋಕೋಪಯೋಗಿ ಇಲಾಖೆ ವಿಕಾಸ ಸೌದ ಬೆಂಗಳೂರು ಹಾಗೂ ಪ್ರದಾನ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಂಗಳೂರು ಇವರಿಗೆ ಪತ್ರ ಬರೆದು ಕೋರಿ ಕೊಂಡ ಹಿನ್ನಲೆಯಲ್ಲಿ ಆಗಿನ ಸರಕಾರ ಪುನಃ ಮೇಲಿನ ರಸ್ತೆಯನ್ನು ಪುನಃ ಜಿಲ್ಲಾ ಮುಖ್ಯರಸ್ತೆಯನ್ನಾಗಿ ಹಿಂಬಡ್ತಿಗೊಳಿಸಿ ಹಿಂದಿನಂತೆ ಯಥಾಸ್ಥಿತಿ ಕಾಯ್ದು ಕೊಂಡು ಬಂದಿತ್ತು.

ಈ ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸುವಂತೆ ಹಲವು ಸಮಾಜಮುಖಿ ಚಿಂತನೆ ಉಳ್ಳ ವ್ಯಕ್ತಿಗಳು ಕಳೆದ 30 ವರ್ಷದಿಂದ ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ಸರಕಾರಕ್ಕೆ ಹಿಂದೆ ಹಲವು ಲಿಖಿತ ಅರ್ಜಿಸಲ್ಲಿಸಿ ಸದ್ರಿ ರಸ್ತೆಯ ಅಗಲ ಕಿರಿದಾಗಿದ್ದು, ವಾಹನದ ದಟ್ಟಣೆಯಿಂದ ಆಗಾಗ ರೋಡ್ ಬ್ಲಾಕ್ ಆಗುತ್ತಿದೆ, ಅಪಘಾತ ಪ್ರಮಾಣ ಜಾಸ್ತಿ ಆಗಿದೆ, ಮಾನವ ಪ್ರಾಣ ಹಾನಿ ಆಗುತ್ತಿದೆ, ಪ್ರತಿ ವರ್ಷ ಸದ್ರಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಸರಕು ವಾಹನಗಳು ಸಂಚಾರದಿಂದ ಸದ್ರಿ ರಸ್ತೆ ಆಗಾಗ ಹದಗೆಟ್ಟು ಪದೇ ಪದೇ ರಸ್ತೆ ದುರಸ್ತಿಗೆ ಬರುತಿದ್ದು ಇದರಿಂದ ಅನಗತ್ಯ ದುರಸ್ಥಿ- ಖರ್ಚು ವೆಚ್ಚದಿಂದ ಸರಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗಿ ಜನರ ತೆರಿಗೆ ಹಣ ಅನಗತ್ಯ ಪೋಲಾಗುತ್ತಿದೆ, ಆದ್ದರಿಂದ ಸದ್ರಿ ರಸ್ತೆಯನ್ನು ಮೇಲ್ದರ್ಜೆಗೆರಿಸಿ ಅಭಿವೃದ್ಧಿ ಪಡಿಸುವಂತೆ ಕೋರಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ಹಲವಾರು ಅರ್ಜಿ ಲಿಖಿತವಾಗಿ ಸಲ್ಲಿಸಲಾಗಿತ್ತು ಅದಕ್ಕೆ ಸ್ಪಂದಿಸಿ ಹಿಂದಿನ ಬೊಮ್ಮಾಯಿ ಸರಕಾರ ತನ್ನ ಬಜೆಟ್ ನಲ್ಲಿ ರಾಜ್ಯಹೆದ್ದಾರಿ ಘೋಷಣೆ ಮಾಡಿ ನಂತರ ಕೇವಲ ಎರಡು ತಿಂಗಳ ಅವಧಿಯಲ್ಲಿ ರೋಡ್ ಮಾರ್ಜಿನ್ ಅತೀಕ್ರಮಣದಾರರ ಒತ್ತಡಕ್ಕೆ ಮಣಿದು ಪುನಃ ಸದ್ರಿ ರಸ್ತೆಯನ್ನು ಜಿಲ್ಲಾ ಮುಖ್ಯರಸ್ತೆಯನ್ನಾಗಿ ಕೆಳದರ್ಜೆಗಿಳಿಸಿದ್ದನ್ನು ಬಾರಕೂರಿನ  ಆರ್ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಶಂಕರ್  ಶಾಂತಿ ಎನ್ನುವವರು ಲೋಕೋಪಯೋಗಿ ಇಲಾಖೆಗೆ ಆರ್ಟಿಐ ನಲ್ಲಿ ಅರ್ಜಿ ಸಲ್ಲಿಸಿ ದಾಖಲೆ ತೆಗೆದು ಪರಿಶೀಲನೆ ಮಾಡಿದಾಗ  ಸದ್ರಿ ಮೇಲಿನ ರಸ್ತೆ  ಕೆಳದರ್ಜೆಗಿಳಿಸಿರೋದು ಬೆಳಕಿಗೆ ಬಂದಿತ್ತು.

ಸದ್ರಿ ರಸ್ತೆಯನ್ನು ರಸ್ತೆಯ ಕುಂದುಕೊರತೆಯನ್ನು ಹಾಗೂ ವಸ್ತು ಸ್ಥಿತಿಯನ್ನು ಪರಿಶೀಲನೆ ಮಾಡಿ ಪುನಃ ರಾಜ್ಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಲೋಕೋಪಯೋಗಿ ಇಲಾಖೆ, ಹಾಗೂ ಸರಕಾರಕ್ಕೆಲಿಖಿತ ಅರ್ಜಿ ಸಲ್ಲಿಸಿ ಶಂಕರ್ ಶಾಂತಿ ಕೋರಿ ಕೊಂಡರು ಸಹ ಸರಕಾರ ಇಲಾಖೆ ಸ್ಪಂದಿಸದೆ ಇದ್ದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಹಾಗೂ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿ ಕರ್ನಾಟಕ ಹೈಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಖ್ಯಾತ ಹಿರಿಯ ಕ್ರಿಮಿನಲ್ ಹಾಗೂ ಸಿವಿಲ್ ವಕೀಲರಾದ ದಿಲ್ರಾಜ್ ರೋಹಿತ್ ಸಿಕ್ವೆiರವರ ಮೂಲಕ ಸಾರ್ವಜನಿಕ ಹಿತಸಕ್ತಿ ರಿಟ್ ಅರ್ಜಿ WP 6898/2022 LB RES PIL ಸಲ್ಲಿಸಿ ಬ್ರಹ್ಮಾವರ ಜನ್ನಾಡಿ ಸಿದ್ಧಾಪುರ ರಾಜ್ಯ ಹೆದ್ದಾರಿ ಘೋಷಣೆ ಮಾಡಿ ನಂತರ ಪುನಃ ಹಿಂಬಡ್ತಿ ಮಾಡಿದ ರಾಜ್ಯ ಸರಕಾರದ ಕ್ರಮದ ಸಿಂದುತ್ವವನ್ನು ಪ್ರಶ್ನೆ ಮಾಡಲಾಗಿತ್ತು.

ಸದ್ರಿ ಪ್ರಕರಣ ದಿನಾಂಕ 16/08/2022 ರಲ್ಲಿ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದು ಈ ಪ್ರಕರಣದ ಅರ್ಜಿದಾರರು ಸದ್ರಿ ರಸ್ತೆಯಲ್ಲಿನ ಪ್ರಸ್ತುತ ಸಮಸ್ಯೆ ಹಾಗೂ ಕುಂದು ಕೊರತೆ ಬಗ್ಗೆ ಉಡುಪಿ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆ ಅರ್ಜಿಯನ್ನು ಮುಖ್ಯ ಇಂಜಿನಿಯರ್ ಪರೀಶಿಲನೆ ಮಾಡಿ ಲೋಕೋಪಯೋಗಿ ಇಲಾಖೆಯ ಕಾನೂನಿನಂತೆ ಇತ್ಯರ್ಥ ಪಡಿಸುವಂತೆ ನ್ಯಾಯಾಲಯ ಆದೇಶ ಮಾಡಿತ್ತು.

ಈ ಆದೇಶದ ಬಗ್ಗೆ ಪ್ರಧಾನ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ತನ್ನ ಕಾನೂನು ತಜ್ಞರ ಅಭಿಪ್ರಾಯ ಕೇಳಿ ಪತ್ರ ಬರೆದಿದ್ದು, ಈ ಆದೇಶದ ಪ್ರಕಾರ ರಾಜ್ಯಹೆದ್ದಾರಿ ಮಾಡಿ ಅಭಿವೃದ್ಧಿ ಪಡಿಸಲು ನ್ಯಾಯಾಲಯ ಸೂಚಿಸಿರೋ ಬಗ್ಗೆ ಇಲಾಖಾ ಕಾನೂನು ತಜ್ಞರು ಲಿಖಿತ ದಾಖಲೆ ಮೂಲಕ ತಿಳಿಸಿದರೂ ಸಹ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ  ಉಚ್ಚ ನ್ಯಾಯಾಲಯದ ಸೂಚನೆಯಂತೆ ಅರ್ಜಿದಾರ ಶಂಕರ್ ಶಾಂತಿ ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ಹಾಗೂ ಉಡುಪಿ ಲೋಕೋಪಯೋಗಿ ಇಲಾಖೆಗೆ ಸದ್ರಿ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಆಗುತ್ತಿರೋ ಸಮಸ್ಯೆಯ ಕುಂದು ಕೊರತೆ ಬಗ್ಗೆ ಹೊಸದಾಗಿ ಲಿಖಿತ ಅರ್ಜಿ ಸಲ್ಲಿಸಿದರೂ ಸಹ ಮುಖ್ಯ ಇಂಜಿನಿಯರ್ ಉಡುಪಿ -ಶಿವಮೊಗ್ಗ ಇವರು ಯಾವುದೇ ರೀತಿ ಸ್ಪಂದನೆ ಮಾಡಲಿಲ್ಲ ಅದಕ್ಕೆ ಕಾರಣ ಅವರ ಮೇಲೆ ಸ್ಥಳೀಯ ರಾಜಕೀಯ ಒತ್ತಡ ಅಷ್ಟು ಇತ್ತು, ಯಾವುದೇ ಪತ್ರ ವ್ಯವಹಾರ ಈ ಪ್ರಕರಣಕ್ಕೆ ಸಂಬಂಧಪಟ್ಟು ಮಾಡಲಿಲ್ಲ.

ನಂತರ ಅವರಿಗೆ ಹೊಸದಾಗಿ ಸದ್ರಿ ರಸ್ತೆ ಸಮಸ್ಯೆ ಬಗ್ಗೆ ನೀಡಿದ ಕುಂದುಕೊರತೆ ಅರ್ಜಿ ಪ್ರತಿ ಸಹಿತ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಪುನ :ವಕೀಲರ ಮೂಲಕ ಇನ್ನೊಂದು WP no 1737/2023 GM RES PIL ಸಲ್ಲಿಸಿ ಹಿಂದಿನ PIL 6898/2022 LB Res PIL ನ ಆದೇಶದಂತೆ ಅರ್ಜಿದಾರರು ನಡೆದು ಕೊಂಡರೂ ಸಹ ಮುಖ್ಯ ಇಂಜಿನಿಯರ್ ಉಡುಪಿ ಶಿವಮೊಗ್ಗ ಇವರು ಯಾವುದೇ ಕ್ರಮ ಜರುಗಿಸಿಲ್ಲ, ಯಾವುದೇ ರೀತಿ ಸ್ಪಂದನೆ ಮಾಡದೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರೋದನ್ನು ನ್ಯಾಯ ಪೀಠಕ್ಕೆ ಶಂಕರ್ ಶಾಂತಿ ತಮ್ಮ ವಕೀಲರ ಮೂಲಕ ವಿಚಾರಣೆ ವೇಳೆ ತಂದ ಹಿನ್ನಲೆಯಲ್ಲಿ ಸರಕಾರದ ಪರವಕೀಲರು ಲೋಕೋಪಯೋಗಿ ಇಲಾಖಾ ಕಾನೂನಿನಂತೆ ಅರ್ಜಿದಾರರ ಅರ್ಜಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ ಹಿನ್ನಲೆಯಲ್ಲಿ ಶಂಕರ್ ಶಾಂತಿ ಪರವಕೀಲರು WP 1737/2023 ನ್ನು ಹಿಂದಕ್ಕೆ ಪಡೆದು ಅದಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ ಮಾನ್ಯ ನ್ಯಾಯ ಮೂರ್ತಿಯವರು ಉಡುಪಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಅವರಿಗೆ ಸದ್ರಿ ಮೇಲಿನ ರಸ್ತೆ ಹಾದು ಹೋಗಿರೋ ಎರಡೂ ಕಡೆ ಕಾನೂನು ರೀತ್ಯಾ ಭೂಸ್ವಾಧೀನ ಪಡಿಸಿ ಅಭಿವೃದ್ಧಿ ಪಡಿಸುವಂತೆ ಸೂಚಿಸಲಾಗಿತ್ತು,

ಆ ನಂತರ ಸಹ ಲೋಕೋಪಯೋಗಿ ಇಲಾಖೆ ಹಾಗೂ ಹಿಂದಿನ ಮಾನ್ಯ ಬೊಮ್ಮಾಯಿ ನೇತೃತ್ವದ ಸರಕಾರ ಯಾವುದೇ ಕ್ರಮ ರಸ್ತೆ ವಿಷಯದಲ್ಲಿ ಕೈಗೊಂಡು ನ್ಯಾಯಾಲಯದ ಆದೇಶ ಪಾಲನೆ ಮಾಡದೆ ಇದ್ದುದರಿಂದ ಹಿಂದಿನ ಎರಡು PIL ನ ಆದೇಶ ಪಾಲನೆ ಮಾಡದೆ ನ್ಯಾಯಾಲಯಕ್ಕೆ ಅಗೌರವ ತೋರಿಸಿದ್ದರಿಂದ ಪುನಃ ಕರ್ನಾಟಕ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠದೆದುರು ಸರಕಾರ ಹಾಗೂ ಮುಖ್ಯ ಇಂಜಿನಿಯರ್ ಉಡುಪಿ -ಶಿವಮೊಗ್ಗ ಇವರ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ CCC 668/2023 ರಂತೆ ಸಲ್ಲಿಸಲಾಯಿತು ಅದರಂತೆ ಪ್ರಕರಣ ದಾಖಲಾಗಿ ಸರಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ನೋಟೀಸ್ ಜಾರಿ ಮಾಡಿದ ಹಿನ್ನಲೆಯಲ್ಲಿ ಹೊಸದಾಗಿ ಆಡಳಿತಕ್ಕೆ ಬಂದ ಸರಕಾರ ನ್ಯಾಯಾಲಯದ ಆದೇಶಕ್ಕೆ ಸ್ಪಂದಿಸಿ ಈಗ ಬ್ರಹ್ಮಾವರ ಬಾರಕೂರು ಜನ್ನಾ ಡಿ ಸಿದ್ಧಾಪುರ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯಹೆದ್ದಾರಿಯನ್ನಾಗಿ ಘೋಷಣೆ ಮಾಡಿದೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ಹಾಗೂ ಸಮುಚಿತವಾಗಿ ವಾದ ಮಂಡನೆ ಮಾಡಿದ ಖ್ಯಾತ ಹಿರಿಯ ಹೈಕೋರ್ಟ್ ವಕೀಲರಾದ ದಿಲ್ ರಾಜ್ ರೋಹಿತ್ ಸಿಕ್ತ್ವೆರಾ ಹಾಗೂ ಈ ಕಾನೂನು ಹೋರಾಟಕ್ಕೆ ಸ್ಪಂದನೆ ಮಾಡಿದ ನನ್ನ ಹಿತೈಷಿಗಳಿಗೆ ಹೃದಯಸ್ಪರ್ಶಿ ಅಭಿನಂದನೆಗಳು… ಶಂಕರ್ ಶಾಂತಿ ಬಾರಕೂರು.

Leave a Reply

Your email address will not be published. Required fields are marked *