
**ಬೈಂದೂರು ತಾಲೂಕಿನ ನಂದನವನ ಗ್ರಾಮದ ಬಡಾಮನೆ ಮುತ್ತು ಪೂಜಾರ್ತಿಯವರ ಮನೆ
ರಾತ್ರಿ ಸುರಿದ ಭಾರಿ ಮಳೆಗೆ ಬೆಳಗ್ಗಿನ ಜಾವ ಐದು ಗಂಟೆ ಸುಮಾರಿಗೆ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು
ಮನೆಯ ಮೇಲ್ಚಾವಣಿಯು ಸಂಪೂರ್ಣವಾಗಿ ಬಿರುಕುಕೊಂಡಿರುವುದರಿಂದ ಮನೆಯೂ ಅಪಾಯ ಅಂಚಿನಲ್ಲಿದೆ
ಹೀಗೆ ಇನ್ನೆರಡು ದಿನ ಮಳೆಯು ಸುರಿದರೆ ಮನೆಯು ಸಂಪೂರ್ಣವಾಗಿ ನೆಲಸಮ ಆಗುವ ಭೀತಿಯಲ್ಲಿದೆ
ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಮನೆಯ ಪರಿಸ್ಥಿತಿ ನೋಡಿ ಮನೆಯಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ತಿಳಿಸಿದ್ದಾರೆ