
ಉಡುಪಿ: ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಸಂಚರಿಸುವುದು ಎಂದರೆ ಕೆಸರು ಗದ್ದೆಯಲ್ಲಿ ಸಂಚರಿಸಿದ ಅನುಭವವಾಗುತ್ತದೆ.
ಜಿಲ್ಲಾ ಆಸ್ಪತ್ರೆಯ ಪಾರ್ಕಿಂಗ್ ಏರಿಯಾ ಪೂರ್ತಿ ಹೊಂಡಮಯವಾಗಿದ್ದು ಕೆಸರು ನೀರು ತುಂಬಿ ಕೊಂಡಿದೆ. ವಾಹನಗಳು ಸಂಚರಿಸುವಾಗ ಈ ಕೆಸರು ನೀರು ಪಾದಚಾರಿಗಳ ಮೈಮೇಲೆ ಎಸೆಯಲ್ಪಡುತ್ತಿದೆ.
ಈ ಕೆಸರಿನ ಹೊಂಡದಲ್ಲಿ ಆಯುಷ್ ಆಸ್ಪತ್ರೆ ಗಾಗಲಿ, ಶವಾಗಾರಕ್ಕೆ ವಾಹನಗಳಾಗಲಿ, ಪಾದಚಾರಿಗಳಾಗಲಿ ಸಂಚರಿಸುವುದೇ ದುಸ್ತರವಾಗಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.
ಸಂಬಂಧಪಟ್ಟವರು ಕೂಡಲೇ ಈ ಅವ್ಯವಸ್ಥೆ ಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.