Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರದಲ್ಲಿ ಕೋಟ ಪಂಚವರ್ಣದ 219ನೇ ಪರಿಸರಸ್ನೇಹಿ ಅಭಿಯಾನ
ಪ್ರಕೃತಿಯ ಮೇಲೆ ಮನುಕುಲ ವಿಕೃತಿ , ಇದು ಎಚ್ಚರಿಕೆಯ ಕರೆಗಂಟೆ – ಕೆ.ವಿ ರಮೇಶ್ ರಾವ್

ಕೋಟ: ಮನುಕುಲವನ್ನು ಕಾಪಾಡುವುದೆ ಪ್ರಕೃತಿ ಆದರೆ ಅದೇ ಪ್ರಕೃತಿಯ ಮೇಲೆ ಮನುಷ್ಯ ವಿಕೃತಿಯನ್ನು ಮೆರೆಯುತ್ತಿದ್ದಾನೆ ಇದು ಕೊನೆಯ ಕರೆಗಂಟೆಯಾಗಿದೆ ಇದರ ಹೊರತಾಗಿಯೂ ಅದೇ ಮನಸ್ಥಿತಿ ತಳೆದರೆ ಅಂತ್ಯ ಕಟ್ಟಿಟ್ಟ ಬುತ್ತಿ ಎಂದು ಧಾರ್ಮಿಕ ಮುಖಂಡ ಕೆ.ವಿ ರಮೇಶ್ ರಾವ್ ಎಚ್ಚರಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಸುವರ್ಣ ಎಂಟರ್ ಪ್ರೆöÊಸಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್, ಸಮುದ್ಯತಾ ಗ್ರೂಪ್ಸ್ ಕೋಟ,ಸೀನಿಯರ್ ಚೇಂಬರ್ ಕೋಟ ಲಿಜನ್ ಸಹಯೋಗದೊಂದಿಗೆ ಪಾಂಡೇಶ್ವರ ಹೈನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇವರ ಸಂಯೋಜನೆಯೊAದಿಗೆ 219ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ವಯನಾಡಿನಲ್ಲಾದ ಪಕೃತಿ ಮುನಿಸು ಇಲ್ಲಿ ಬರುವಾಗೆ ಮಾಡಿಕೊಳ್ಳಬೇಡಿ , ಸಮಾಜದಲ್ಲಿ ಒಳಿತು ಕೆಡುಕು ಸಹಜ ಹಾಗೆಂದ್ದ ಮಾತ್ರಕ್ಕೆ ಪರಿಸರದ ಮೇಲಾಗುತ್ತಿರುವ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ ಪ್ರಕೃತಿಯ ಉಳಿಸುವ ಒಂದಿಷ್ಟು ಸಂಘಸAಸ್ಥೆಗಳು ಅದನ್ನು ಹಾಳೆಗೆಡವ ಮನಸ್ಥಿತಿಯ ಬಗ್ಗೆ ಖೇಧ ವ್ಯಕ್ತಪಡಿಸಿ ಸಮಾಜಮುಖಿ,ಪರಿಸರಸ್ನೇಹಿ  ಕಾರ್ಯದಲ್ಲಿ ಪಂಚವರ್ಣದ ಕಾರ್ಯ ಶ್ಲಾಘನೀಯ ಇದು ನಿರಂತರವಾಗಿ ಪಸರಿಸಿ ಲೋಕ ಹಿತ ಸರ್ವಹಿತ ಧ್ಯೇಯದ ಮೂಲಕ ಮನೆಮಾತಾಗಿ ಬೆಳೆಯಲಿ ಎಂದು ಹಾರೈಸಿದರು.
ಇದೇ ವೇಳೆ ವಿವಿಧ ರಸ್ತೆ ಮನೆಗಳಿಗೆ ತೆರಳಿ ಗಿಡ ನೆಡಲಾಗಿತು.

ಈ ಸಂದರ್ಭದಲ್ಲಿ ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯೆ ಸಂಧ್ಯಾ ರಾವ್,ಹೈನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ  ವಿಶಾಲಾಕ್ಷಿ ರಾವ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಗಂಗಾ,ಪಾAಡೇಶ್ವರ ಗ್ರಾಮಪಂಚಾಯತ್ ಸಿಬ್ಬಂದಿ ಕಾರ್ತಿಕ್ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸೀನಿಯರ್ ಚೇಂಬರ್ ಕೋಟ ಲಿಜನ್ ಅಧ್ಯಕ್ಷ ಕೇಶವ್ ಆಚಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪಾಂಡೇಶ್ವರ ಹೈನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇವರ ಸಂಯೋಜನೆಯೊAದಿಗೆ 219ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಕೆ.ವಿ ರಮೇಶ್ ರಾವ್ ಗಿಡ ವಿತರಿಸಿ ಮಾತನಾಡಿದರು. ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯೆ ಸಂಧ್ಯಾ ರಾವ್,ಹೈನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ  ವಿಶಾಲಾಕ್ಷಿ ರಾವ್,ಮುಖ್ಯಕಾರ್ಯನಿರ್ವಹಣಾಧಿಕಾರಿ ಗಂಗಾ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *