Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅನ್ನ ಪ್ರಸಾದ ಶ್ರೇಷ್ಠವಾದದ್ದು  – ಪ್ರಕಾಶ ಮಯ್ಯ

ಕೋಟ: ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುತ್ತಿರುವ ಅನ್ನ ದಾಸೋಹವು ಶುಚಿ, ರುಚಿ ಮತ್ತು ಸಮಯ ಕ್ಲಪ್ತತೆಗೆ ಪ್ರಸಿದ್ಧಿ ಪಡೆದಿದ್ದು, ದೈವ ಪ್ರೇರಣೆಯಂತೆ ಭೋಜನ ನಿಧಿಗೆ ದೇಣಿಗೆಯನ್ನು ನೀಡಿರುವುದಾಗಿ ಬೆಂಗಳೂರಿನ ಹೋಟೆಲ್ ಇಂದ್ರಪ್ರಸ್ಥದ ಮಾಲಿಕ, ಮೂಲತಃ ಕೋಟದ ಹರ್ತಟ್ಟು ಮೂಲದ ಪ್ರಕಾಶ ಮಯ್ಯ ಅಭಿಪ್ರಾಯ ಪಟ್ಟರು.
ಯಮುನಾ ಮತ್ತು  ಚಂದ್ರಶೇಖರ ಮಯ್ಯ ದಂಪತಿಯ ಸ್ಮರಣಾರ್ಥವಾಗಿ ಮಂಜುಳಾ ಮತ್ತು ಪ್ರಕಾಶ ಮಯ್ಯ ದಂಪತಿಯು ದೇವಳದ ಶಾಶ್ವತ ಭೋಜನ ನಿಧಿಗೆ ಕೊಡಮಾಡಿದ  ಒಂದು ಕೋಟಿ ರೂಪಾಯಿಗಳ ದೇಣಿಗೆಯ ನಾಮಫಲಕವನ್ನು ಅನಾವರಣಗೊಳಿಸಿದ  ಪ್ರಕಾಶ ಮಯ್ಯ ಇವರನ್ನು ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಕ್ಷೇತ್ರದ ಸಾಂಪ್ರದಾಯಿಕ ಗೌರವದೊಂದಿಗೆ ಅಭಿನಂದಿಸಿ ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಲಕ್ಷಿ÷್ಮÃನಾರಾಯಣ ತುಂಗ, ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಪೂರ್ವ ಕೋಶಾಧಿಕಾರಿ ತಾರಾನಾಥ ಹೊಳ್ಳ , ಪತ್ನಿ ಮಲ್ಲಿಕಾ ಹೊಳ್ಳ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ದೇವಳದ ಆಗಮನಿಗಮಾಗಮ ವೇದ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದ ಮಂತ್ರವು ಪಠಿಸಲ್ಪಟ್ಟಿತು. ಹಿರಿಯ ಸಿಬ್ಬಂದಿ ಶ್ರೀಕಾಂತ ಕಲ್ಕೂರ ವಂದನಾರ್ಪಣೆಗೈದರು. ಸರಳ ಸಮಾರಂಭವನ್ನು ದೇವಳದ ಸಹಾಯಕ ಪ್ರಬಂಧಕ ಗಣೇಶ ಭಟ್ಟ ನಿರ್ವಹಿಸಿದರು.

ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ ಎಸ್ ಕಾರಂತರ ಸಮ್ಮುಖದಲ್ಲಿ ದಿನಂಪ್ರತಿ ಅನ್ನದಾನಕ್ಕೆ ಯಮುನಾ ಮತ್ತು  ಚಂದ್ರಶೇಖರ ಮಯ್ಯ ದಂಪತಿಯ ಸ್ಮರಣಾರ್ಥವಾಗಿ ಮಂಜುಳಾ ಮತ್ತು ಪ್ರಕಾಶ ಮಯ್ಯ ದಂಪತಿಯು ದೇವಳದ ಶಾಶ್ವತ ಭೋಜನ ದೇಣಿಗೆ ನಿಧಿಯ ನಾಮಫಲಕ ಅನಾವರಣಗೊಳಿಸಿದರು.

Leave a Reply

Your email address will not be published. Required fields are marked *