Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆ.11 ಹಂದಟ್ಟಿನಲ್ಲಿ ಆಸಾಡಿ ಒಡ್ರ್ ಕಾರ್ಯಕ್ರಮ
ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಆಯೋಜನೆ

ಕೋಟ: ಕೋಟದ ಪಂಚವರ್ಣ ಮಹಿಳಾ ಮಂಡದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲ ಕೋಟ ಇದರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಸಲ್ಪಡುವ ಆಸಾಡಿ ಒಡ್ರ್ -2024 ಕಾರ್ಯಕ್ರಮ ಆ.11ರ ಪೂರ್ವಾಹ್ನ 9.ಗ ನಡೆಯಲಿದೆ.

ಈ ಪ್ರಯುಕ್ತ ಕುಂದಗನ್ನಡದ ಬಹುಮುಖ ಪ್ರತಿಭೆ ಸುಜಾತ.ಎಂ ಬಾಯರಿ ಇವರಿಗೆ ಆಸಾಡಿ ಒಡ್ರ್ ಸಾಧಕ ಪುರಸ್ಕಾರ ನೀಡಿ ಗೌರವಿಸಲಿದ್ದೇವೆ. ಪಂಚವರ್ಣ ಯುವಕ ಮಂಡಲದ ವತಿಯಿಂದ ಮಹಿಳಾ ಮಂಡಲದ ಪ್ರಥಮ ಅಧ್ಯಕ್ಷೆ ಕಲಾವತಿ ಅಶೋಕ್ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಿದ್ದು, ವಿಶೇಷ ಆಹ್ವಾನಿತರಾಗಿ ಕುಂದಗನ್ನಡದ ರಾಯಬಾರಿ, ಚಿತ್ರನಟ ರಘು ಪಾಂಡೇಶ್ವರ ಭಾಗವಹಿಸಲಿದ್ದಾರೆ.

ಸಾಂಸ್ಕöÈತಿಕ ಕಾರ್ಯಕ್ರಮದ ಭಾಗವಾಗಿ ಸ್ನೇಹಕೂಟ ಮಣೂರು ಹಾಗೂ ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ನೃತ್ಯ ಸಿಂಚನ ಕಾರ್ಯಕ್ರಮ ಜರಗಲಿದೆ.
ಸಭೆಯಲ್ಲಿ ಮಟಪಾಡಿ  ವಿಜಯಬಾಲನಿಕೇತನ ಬಾಲಾಶ್ರಮಕ್ಕೆ ದಿನಸಿ ಪರಿಕರ ನೀಡಲಿದೆ. ಕಾರ್ಯಕ್ರಮವನ್ನು ಇತ್ತೀಚಿಗೆ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದ ಭೂಸ್ವಾದೀನ ಅಧಿಕಾರಿ ರಶ್ಮಿ ಎಚ್ ಎಸ್ ಉದ್ಘಾಟಿಸಲಿದ್ದು,  ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದಲ್ಲಿ ಗ್ರಾಮೀಣ ತಿನಿಸು,ಪರಿಕರಗಳ ಸ್ಪರ್ಧೆ  ನಡೆಯಲಿದೆ.ಎಂದು ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *