
ಬೆಂಗಳೂರಿನ ಬ್ರಾಡಿ ಕಂಪನಿಯ ಸಿ ಎಸ್ ಆರ್ ಅನುದಾನದಿಂದ ಬಾರ್ಕೂರಿನ ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಅವರ ಅತಿಥಿ ಶಿಕ್ಷಕರ ಸಂಭಾವನೆ ಬಗ್ಗೆ ನೀಡಿದ ಕೋಡುಗೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ರೋಟರಿ ಉಡುಪಿಯ ಅಧ್ಯಕ್ಷ ರೋ.ಗುರುರಾಜ ಭಟ್ ರು ಬ್ರಾಡಿಕಂಪನಿಯ ಸಮಾಜಿಕ ಕಳಕಳಿಯ ಈ ಕೊಡುಗೆ ಯಿಂದ ಶಾಲೆ ಉತ್ತಮ ಪ್ರಗತಿ ಕಾಣಲೆಂದು ಹಾರೈಯಿಸಿ ಬ್ರಾಡಿಕಂಪನಿಯ ಅಧಿಕಾರಿ ಮತ್ತು ಶಾಲಾ ಹಳೆ ವಿದ್ಯಾರ್ಥಿ ಶ್ರೀ ಪ್ರಕಾಶ್ ಆಚಾರ್ಯರ ಸಹಕಾರವನ್ನು ಸ್ಮರಿಸಿ ಬ್ರಾಡಿಕಂಪೆನಿಗೆ ದನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ರೋ.ಸುದಾಕರ ರಾವ್, ರೋಟರಿ ಉಡುಪಿಯ ರೋ.ರಾಮಚಂದ್ರ ಉಪಾಧ್ಯಾಯ ಮತ್ತು ರೋ.ಸುಬ್ರಹ್ಮಣ್ಯ ಕಾರಂತ, ಶಾಲಾ ಮಾಜಿ ಮುಖ್ಯೋಪಾಧ್ಯಾಯ ಶ್ರೀ ಧನಂಜಯ ಆಚಾರ್, ಪ್ರಸಕ್ತ ಮುಖ್ಯೋಪಾಧ್ಯಾಯ ಶ್ರೀ ಉದಯ ಶೆಟ್ಟಿ ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು














Leave a Reply