Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಹಸಿರು ತೋರಣ, ಗಿಡ ನೆಡುವ ಪರಿಸರ ಜಾಗೃತಿ ಕಾರ್ಯಕ್ರಮ

ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಹಸಿರು ತೋರಣ, ಗಿಡ ನೆಡುವ ಪರಿಸರ ಜಾಗೃತಿ ಕಾರ್ಯಕ್ರಮ ದಾಮೋದರ ಆರ್.ಸುವರ್ಣ ಸ್ಮಾರಕ ಬಿಲ್ಲವ ಹಾಸ್ಟೆಲ್ ಆವರಣದಲ್ಲಿ ನಡೆಯಿತು.

ಅಭಿವೃದ್ಧಿಯ ಜತೆಯಲ್ಲಿ ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕಿದೆ. ಪ್ರಕೃತಿಗೆ ನಾವು‌ ಮಾಡುವ ಅಪಚಾರದಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದೆ. ಪ್ರತಿಯೊಬ್ಬರಲ್ಲೂ ಪ್ರಕೃತಿ ಉಳಿಸುವ ಕಾಳಜಿ ಮೂಡಬೇಕಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಹೇಳಿದರು.

ಅವರು ಮಂಗಳೂರಿನ ಕುಂಜತ್ತಬೈಲ್ ನಲ್ಲಿರುವ ದಾಮೋದರ ಆರ್.ಸುವರ್ಣ ಸ್ಮಾರಕ ಬಿಲ್ಲವ ಹಾಸ್ಟೆಲ್ ಆವರಣದಲ್ಲಿ ಗಿಡಗಳನ್ನು ನೆಡುವ ಹಸಿರು ತೋರಣ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. bಮಾದರಿ‌ ಕಾರ್ಯಕ್ರಮ ವಾಗಿ ಎಳೆಯ ಮಕ್ಕಳಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಪರಿಸರ ಪ್ರೇಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾಧವ ಉಳ್ಳಾರ ವರನ್ನು ಯೂನಿಯನ್ ವತಿಯಿಂದ ಗೌರವಿಸಲಾಯಿತು.

ಯೂನಿಯನ್ ನ ಉಪಾಧ್ಯಕ್ಷರಾದ ಲೋಕನಾಥ ಅಮೀನ್, ಕೆ.ಟಿ.ಸುವರ್ಣ, ಬಿಲ್ಲವರ ಮಹಿಳಾ ಯೂನಿಯನ್ ನ ಅಧ್ಯಕ್ಷೆ ಶ್ರೀಮತಿ ಸುಮಲತಾ ಎನ್.ಸುವರ್ಣ,  ಯೂನಿಯನ್ ನ‌‌ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು,  ಸಂ.ಕಾರ್ಯದರ್ಶಿ ಯೋಗೀಶ್ ಕುಮಾರ್, ಜತೆ ಕಾರ್ಯದರ್ಶಿ ಸತೀಶ್ ಕರ್ಕೆರ, ಶಕೀಲಾ ರಾಜ್, ಆಡಳಿತ ಸಮಿತಿ ಸದಸ್ಯರಾದ ದೇವದಾಸ್ ಸುವರ್ಣ, ಶರತ್ ಸುವರ್ಣ, ಶ್ಯಾಮಲಾಲ್, ರಕ್ಷಿತ್ ಪೂಜಾರಿ, ಸುಖಲಾಕ್ಷಿ ವೈ.ಸುವರ್ಣ, ಭಾರತಿ ದೇವದಾಸ್, ಶುಭ ಜಯಚಂದ್ರ, ರೇವತಿ, ಶೈಲಜ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *